ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪಾವಳಿಗೆ ದೀಪಗಳಾಗೋಣ…

ಬಾ ದೀಪಗಳಾಗೋಣ

 ಗಣೇಶ್ ಅದ್ಯಪಾಡಿ, ಮಂಗಳೂರು

ದಸರಾದ ಬೆಳಕೆಲ್ಲ
ಚೆಲ್ಲಿದೆ ರಸ್ತೆ ಮೇಲೆ
ಆದರೆ ನನ್ನೆದೆಯ
ಆವರಣೊದಳಗಿನ
ಹಣತೆ ಬೆಳಗದೆ
ಈಗ ಬರೀ ಕತ್ತಲು.
ಬಹುಶಃ
ನಿನ್ನ ಕಣ್ಣೀರ
ಹನಿಗಳು ಬಿದ್ದಿರಬಹುದು..!!!

ದೀಪ ಉರಿಯುವಾಗಲೂ
ಬತ್ತಿ ಸುಡುತ್ತದೆ ಕಣೆ..!!
ಒಲವಿನ ತೈಲ
ಮುಗಿಯದೇ ಆರುವುದಿಲ್ಲ.
ಪ್ರೀತಿಯೆಂದರೆ ಬೆಂಕಿ.!

ಕಾಲದ ಸುಳಿಗಾಳಿಗೆ
ಅಲುಗಾಡಿದರೂ
ಕೈ ಅಡ್ಡವಿಟ್ಟು ಸಂಭಾಳಿಸಬೇಕಿದೆ…
ದಿವ್ಯ ನಿರ್ಲಕ್ಷ್ಯ
ನಿನ್ನ ಅಸಡ್ಡೆ, ನಿನ್ನ ಹಠವೇ
ಕಾರಣವೆಂದು
ಯುದ್ಧ ಮಾಡಿ
ಏದುಸಿರು ಬಿಟ್ಟರೇ
ತಾನಾಗಿಯೇ ಆರಿ
ಹೋಗಬಹುದೇನೊ…!!!

ನೋಡು…
ಕುರುಡನಾಗುತ್ತಿದ್ದೇನೆ ನಾನು…
ನೀ ಬೆಳಕಾಗುವ
ನಂಬಿಕೆಯಿದೆ….

ಕಾರಣ ನಾವಿಬ್ಬರೂ
ಯುದ್ಧಕ್ಕೂ, ಮೈತ್ರಿಗೂ
ಮತ್ತೊಮ್ಮೆ ಹಣತೆ
ಹಚ್ಚೋಣ… ಬಾರೆ
ವಿಜಯದಶಮಿಗೆ
ಯುದ್ಧ ಮುಗಿಸಿದ್ದೇವೆ
ದೀಪಾವಳಿಗೆ
ದೀಪಗಳಾಗೋಣ

‍ಲೇಖಕರು avadhi

26 October, 2019

2 Comments

  1. ಸುಜಾತಾ ಲಕ್ಮನೆ

    ದೀಪಾವಳಿಗೆ ದೀಪಗಳಾಗೋಣ ಎಂಬ ಸಾಲಿಗೆ ವಿಜಯದಶಮಿಗೆ ಯುದ್ಧ ಮುಗಿಸಿದ್ದೇವೆ ಎಂಬ ಷರಾ ಎಳೆದಿದ್ದು ಕವನಕ್ಕೊಂದು ಹೊಸ ಆಯಾಮ ದಕ್ಕಿಸಿದೆ.. ಚಂದದ ಪದ್ಯ…

  2. T S SHRAVANA KUMARI

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading