ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ದಿರಿಸು ಧರಿಸಿದ ಮಾತ್ರಕ್ಕೆ ನೀನು ನಾನಾಗುವಂತಿದ್ದರೆ…’

ಮಗನಿಗೊಂದು ಪತ್ರ

ವಾಸುದೇವ ನಾಡಿಗ್

ಮಗಾ ,
ಹಗಲಿರುಳುಗಳದೆಷ್ಟು ಹಾದುಹೋದವು
ಹಾದುಹೋಗುವುದಕ್ಕೆ ಇರುವ ಕಾಲ ತೊರೆ
ಇದೇ ಹಾದಿಯಲಿ ನಾನು ಕೊನೆಗೊಂಡ ದಿನ
ಹಾದಿಗಳ ತುಳಿಯುವುದು ನಿನ್ನ ಸರದಿ
ಅದೆಷ್ಟು ಮುಗುಮ್ಮಾಗಿ ನನ್ನ ಚಪ್ಪಲಿ ಶೂ
ಅಂಗಿ ಕೋಟಿನ ಒಳಗೆ ನೀನು ತೂರಿಹೋಗುತ್ತಿ
ಚಪ್ಪಲಿಯ ಅಳತೆಯಂತಲ್ಲ ಈ ಬದುಕು
ದಿರಿಸು ಧರಿಸಿದ ಮಾತ್ರಕ್ಕೆ ನೀನು
ನಾನಾಗುವಂತಿದ್ದರೆ
ಅಜ್ಜಂದಿರೆಂದೂ ತಿರೆಯ ತೊರೆಯುತ್ತಿರಲಿಲ್ಲ

 
ನನ್ನೆದೆಯ ಮೇಲೆ ಎದ್ದಾಡಿ ಗುದ್ದಿ ಹದಮಾಡಿದವ ನೀನು
ಈ ಬದುಕಿಗಂತೂ ನಾನೇ ಆಟದ ಬಯಲು
ನೀನು ತುಳಿದ ಈ ಎದೆಗದ್ದೆಯತುಂಬಾ
ಹೂ ಮುಳ್ಳು ಕಾಯಿ ಕಸುರು
ಹಣ್ಣು ಹಸಿರು ಕಹಿಯೊಗರು
ನಿನಗೆ ನಡಿಗೆ ಕಲಿಸಿ ನಾನೂ ನಡೆಯ ಕಲಿತೆ
ನೀನೆಂಬ ಕನ್ನಡಿಯೇ ನನ್ನ ಪರಿವಿಡಿ
ಓಡಿ ಕಾಡಿಸುವ ನೀನು ಸಿಗದಾಗಲೆಲ್ಲ
ನುಣುಚಿಕೊಳ್ಳುವ ನಿಜದ ಬಾಲ ನೆನಪು
ನಿನ್ನ ಬಾಲ್ಯದ ತುಂಬಾ ನಾನೇ ತುಯ್ದಾಡಿ
ಮತ್ತೆ ಮರುಕಳಿಸುವ ಅದೆ ಹಳೆಯ ನಾನು
 
ಹುಸಿಬದುಕಿನಲ್ಲಿ ಸ್ಥಿರ ವಾಗುವ ಮೋಹ
ಮಗನೆ ಕವಿತೆಗಳನ್ನು ಹಾರಿಬಿಟ್ಟಿದ್ದೇನೆ
ಇಲ್ಲವಾಗುವ ನಾನು ಇರುವೆನೆಂಬ ನೀನು
ಕಹಿ ಸತ್ಯಗಳೆಲ್ಲ ಅಪಚಕಗಳಾಗಿ ಭ್ರಮೆಯ ವ್ಯಸನ
ಬಿಟ್ಟು ಹೋಗಲೇ ಬೇಕು ಈ ಚಪ್ಪಲಿ ಈ ಪೆನ್ನು
ಈ ಹಾರ ಈ ಮಮಕಾರ
ಕೊಟ್ಟು ಪಡೆದದಕ್ಕೆಲ್ಲ ಲೆಕ್ಕವಿಟ್ಟವರಾರು
ಸುಡದಿರು ನನ್ನ ದೇಹವ
ಹೂತು ಬಿಡು, ಕೊಳೆಯಲಿ ದೇಹ ಗೊಬ್ಬರ
ಹುಳಗಳು ಹದ ಮಾಡಲಿ ಮಾಂಸ ಪಂಜರವ
ಸಸಿಯ ಬೇರಿನೊಳ ಹರಿದ ಜೀವ
ಎದ್ದು ನಿಂತ ರೆಂಬೆಗಳಲಿ ಹೂಹಕ್ಕಿ ತೂಗಿ ನೆರಳು ಬಾಗಿ
 

‍ಲೇಖಕರು G

23 April, 2015

9 Comments

  1. smitha Amrithraj

    Olleya padya. Kavitheya aashaya Ishtavayithu..

  2. bidaloti Ranganath

    ನಾವು ಅಳಿಸಿಹೋದಾಗ,ಪಳಯುಳಿಕೆಗಳಂತೆ ಉಳಿಯುವ ನಮ್ಮ ಕುಡಿಗಳು
    ಹೇಸರಾದರು ಉಳಿಸಲಿ ಎಂದು
    ಸಾರ್ವತ್ರಿಕವಾಗಿ ಈ ಪದ್ಯ ಒಂದು ಕಡೆ
    ಹೇಳಿದರೆ,ದೂರದಲ್ಲಿರುವ ಕವಿಗೆ ಪುತ್ರುವಾತ್ಸಲ್ಯ ಗಹನವಾಗಿದೆ ಅನ್ನಿಸುತ್ತಿದೆ
    “ನೀನು ತುಳಿದ ಎದೆ ಗದ್ದೆಯ ತುಂಬಾ
    ಹೂ ಮುಳ್ಳು ಕಾಯಿ ಕಾರು” ಸಾಲು ತುಂಬಾ ಚನ್ನಾಗಿದೆ ಕಹಿಯೊಗರು ಬೇಕಿರಲಿಲ್ಲ ಅಂತ
    ನನಗನ್ನಿಸುತಿದೆ,ಕೊನೆಯ ಐದು ಸಾಲುಗಳ ಅತ್ಯದ್ಭುತ ಸದಾಕಾಡುವ ಸಾಲುಗಳು,

  3. bidaloti Ranganath

    ವಾಸುದೇವ ನಾಡಿಗ್ ಕರ್ನಾಟಕ ಕಂಡ ಶ್ರೇಷ್ಟ ಕವಿ
    ಅವರು ಪದ್ಯಗಳಲ್ಲಿ ಬಳಸುವ ತಂತ್ರಗಾರಿಕೆ,ಬಾವನೆಗಳ ಜೊತೆ ಆಟ
    ನಿಪುಣತೆ,ಜಾಣ್ಮೆಗಳಿಂದ ಅವರು ಬರೆಯುವ ಪ್ರತಿ ಪದ್ಯಗಳು
    ಮನಕಲಕುತ್ತವೆ.ಈ ಪದ್ಯವು ಸಹ ಉನ್ನತವಾಗಿದೆ.ಇಂತಹ ಪದ್ಯ ಕೊಟ್ಟ
    ಕವಿಗೆ ಧನ್ಯವಾದಗಳು.

  4. sangeetha raviraj

    ಚೆನ್ನಾಗಿ ದೇಶದ
    ಚೆನ್ನಾಗಿದೆ

  5. vasudeva nadig

    thanks,,,

  6. ಲಲಿತಾ ಸಿದ್ಧಬಸವಯ್ಯ

    fine

  7. Anil Talikoti

    ಮುಗುಮ್ಮಾಗಿ ಸುರುವಾಗಿ ಮಾಗಿ ಪಕ್ವವಾದ ಕವಿತೆ, ಆದರೂ , ಏಕೋ ‘ಸುಡದಿರು ನನ್ನ ದೇಹವ’ ಎನ್ನುವ ವಾಕ್ಯವಿರದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ? ದಿನಕರ ದೇಸಾಯಿ ಅವರ ತೂರಿ ಬಿಡು ನೆನಪಾಯಿತು.

  8. mmshaik

    oLLeya kavite..kavitegaLlli hosatana kattikoduva kavi naadig..

  9. anand rugvedi

    chandada kavithe nadiga

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading