ನಕಲಿ ಆಟ…
ಮೂಲ: ವಿಜಯ ಚೊರಮೊರೆ (ಮರಾಠಿ)
ಅನುವಾದ: ಮೆಹಬೂಬ ಮುಲ್ತಾನಿ
ಅವರು
ಗಾಂಧಿಗೆ ಗುಂಡು ಹೊಡೆದರು
ಗುಂಡಿನಿಂದ ಸುರಿದ ರಕ್ತದ ಒಂದೊಂದು ಹನಿಯಲ್ಲೂ ಹೊಸ ಗಾಂಧಿಗಳು ಹುಟ್ಟಿದರು
ಲೋಕ ಅವರನ್ನೇ
ದಾಬೋಲಕರ, ಪಾನ್ಸರೆ, ಕಲಬುರ್ಗಿ, ಗೌರಿ ಎಂದರು..

ಅವರು
ಇವರಿಗೂ ಗುಂಡು ಹೊಡೆದರು
ಪ್ರತಿ ಗುಂಡು ತಾಗಿದಾಗ
ಒಬ್ಬ ದಾಬೋಲಕರ ಸತ್ತಲ್ಲಿ ನೂರು ದಾಬೋಲಕರ
ಸಾವಿರ ಪಾನ್ಸರೆ, ಹತ್ತು ಸಾವಿರ ಕಲಬುರ್ಗಿ
ಲಕ್ಷ ಗೌರಿ ಮುಂದೆ ಬಂದು
ಮತ್ತೆ ಗಾಂಧಿಯಾದರು….
ಕೊಂದವರನ್ನು ಲೆಕ್ಕ ಮಾಡುತ್ತಾ
ಕೊಲಬೇಕಿದ್ದವರ ಪಟ್ಟಿಯ ಗಣಿತ ತಪ್ಪಿ
ನಿಜವಾದ ಹತ್ಯಾರಗಳನ್ನೆಲ್ಲಾ ಗೃಹ ಬಂಧನದಲ್ಲಿರಿಸಿದರು…
ಏಕೋ ಈ ಗಾಂಧಿಯ ಕೊಲ್ಲುವ ಯೋಚನೆ
ಗೆದ್ದಲಿನ ಹಾಗೆ ಅವರ ಮನದಲ್ಲಿ ಮನೆ ಮಾಡಿದೆ
ಹೀಗಾಗಿಯೇ ಮೊನ್ನೆ ಜನವರಿ ೩೦ ರಂದು
ಗಾಂಧಿಯನ್ನು ಕೊಲ್ಲುವ ನಕಲಿ ಆಟ ಆಡಿದರು…






Nice poem
……ಜನವರಿ…ಮೂವತ್ತರಂದು..ಗಾಂಧಿ ಯನ್ನು…ಕೊಲ್ಲುವ “ನಕಲೀ”..ಆಟ..ಆಡಿದರು…
ಹೌದು…ಗಾಂಧಿ ಯನ್ನು…ಕೊಲ್ಲಬಯಸುವವರೆಲ್ಲವೂ…ನಕಲಿಯೇ…
ಗಾಂಧಿ… ಒಂದು…ಸತ್ಯ…
ಸತ್ಯ… ಸಾಯುವುದಿಲ್ಲ…
ಗಾಂಧಿ.. ಸಾಯುವುದಿಲ್ಲ…
Liked the poem very true.