ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಸ್ತಗೀರ್ ದಿನ್ನಿ ಹೊಸ ಕವಿತೆ – ಜಗವು ನಿದ್ದೆಗೆ ಜಾರಿದೆ..

ದಸ್ತಗೀರ್ ದಿನ್ನಿ

ನಿನ್ನ ಬೆಳಕ ಹೂನಗೆಗಾಗಿ ನೂರು ನೋವಾದರೂ ಸಹಿಸಬಲ್ಲೆ
ನಿನ್ನ ಪ್ರೀತಿಯ ಸಮ್ಮತಿಗಾಗಿ ಏಸು ಯುಗವಾದರೂ ಕಾಯಬಲ್ಲೆ.

ನೀನು ಪ್ರೇಮದ ಸಂಪಿಗೆ ಎಸಳನ್ನಾದರೂ ಎಸೆಯಲಿಲ್ಲ
ನಿನ್ನ ಅನುರಾಗಕ್ಕಾಗಿ ಮುಳ್ಳುಗಳ ದಾರಿಯಾದರೂ ನಡೆಯಬಲ್ಲೆ.

ಬಯಲ ಕೆನ್ನಯಲಿ ಅರಳಿದ ಸಂಜೆ ಪೇಲವ ಎನಿಸಿದೆ.
ನಿನ್ನ ದರುಶನಕ್ಕಾಗಿ ಸಾವಿರ ಉಳಿ ಪೆಟ್ಟಾದರೂ ತಿನ್ನಬಲ್ಲೆ.

ಕಣ್ಣ ಮುಂದಿನ ಹಗಲು ಇರಳುಗಳು ಸಾಯುತಿಲ್ಲ
ನಿನ್ನ ಮೋಹಕ್ಕಾಗಿ ತೊಟ್ಟು ವಿಷ ಕೊಟ್ಟರೂ ಕುಡಿಯಬಲ್ಲೆ

ಜಗವು ನಿದ್ದೆಗೆ ಜಾರಿದೆ ನಾನು ತಾರೆಗಳ ಎಣಿಸುತಿರುವೆ.
ನಿನ್ನ ಮೆತ್ತನೆಯ ಕೈ ಕುಲುಕಿಗಾಗಿ ಸಾವು ಬಂದರೂ ಶರಣಾಗಬಲ್ಲೆ.

‍ಲೇಖಕರು Admin

25 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading