ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಸ್ತಗೀರಸಾಬ್ ದಿನ್ನಿ ಹೊಸ ಕವಿತೆ – ಹೂಗಳೆಲ್ಲ ಬಾಡುತಿವೆ ಸಾಕಿ…

ದಸ್ತಗೀರಸಾಬ್  ದಿನ್ನಿ

ಸುಮ್ಮನೆ ಕಾಡಿಸದಿರು ನಿನ್ನ ನಿರೀಕ್ಷೆಯಲಿ ಕನಸುಗಳು ದಣಿಯುತಿವೆ ಸಾಕಿ
ನಿಷ್ಕರುಣಿ ಆಗದಿರು ದಿನವೂ ಕಂಗಳು ಕಂಬನಿಗಳ ತುಳುಕಿಸುತಿವೆ ಸಾಕಿ.

ತಡ ರಾತ್ರಿಯಲೂ ಬರೀ ನೋವುಗಳನೇ ಉಣಿಸುತ ವಲಸೆ ಹೋಗದಿರು
ತಣಿಸದ ತಂಗಾಳಿ ಪ್ರೀತಿ ಇಲ್ಲದೆ ಹೂಗಳೆಲ್ಲ ಬಾಡುತಿವೆ ಸಾಕಿ.

ಕಣ್ಣ ಚೂರಿಗಳಿಂದ ಎದೆಯನು ಬಗೆಯುತ ನಡೆದರೂ
ಮಿಡಿಯದಿರಲಾರೆ
ಮಗ್ಗಲು ಬದಲಿಸುತ ಮೋಹದ ಉಸಿರಿಗೆ ಉಯಿಲು ಬರೆಯುತಿರುವೆ ಸಾಕಿ.

ದೂರದಲಿ ಕೇಳಿ ಬರುವ ಗೆಜ್ಜೆ ಸಪ್ಪಳ ನಿನ್ನದೆಂದು ಕಾದೆ
ನೀನು ಈ ಬದುಕಿಗೆ ದಕ್ಕುವ ಭಾಗ್ಯವಿಲ್ಲದೆ ನಿರಾಶೆಗೆ ಜಾರುತಿರುವೆ ಸಾಕಿ.

ಬಾಗಿಲ ಮುಂದಿನ ಮೊಲ್ಲೆಯ ಕಂಪು ನಿನ್ನ ಹೆಸರನೇ ಉಸುರುತಿದೆ
‘ ದಿನ್ನಿ ‘ಯ ಯಾತನೆಗಳು ಬಿಸುಪಿಗೆ ಸಿಲುಕಿ ಮೆಲ್ಲನೆ ಬೂದಿಯಾಗುತಿವೆ ಸಾಕಿ

‍ಲೇಖಕರು Admin

6 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading