ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀವಿಭಾವನ ಹೊಸ ಕವಿತೆ- ದಯವಿಟ್ಟು, ಸುಮ್ಮನೆ ಸಾಯಲು ಬಿಡು

ಶ್ರೀವಿಭಾವನ 

1
ಪ್ರೀತಿಯ ಕವಿಗೆ,
ನಿನಗೇಕೆ ಕೊಂಬೆಯಿಂದ ಕಳಚಿದ
ಹೂವಿನ ಮೋಹ?


2
ನೆಲಕ್ಕೆ ಬಿದ್ದು,
ಮುದುಡಿ, ಇನ್ನೇನು
ಸಾಯುವ ಹೂವಿನ ಉಸಾಬರಿ ನಿನಗೇಕೆ?
ಸಾಯಲಿ ಬಿಡು!
ನಿನ್ನ ಕವಿತೆಯ ಭಾರ ಅದಕ್ಕೆ ಬೇಕಿಲ್ಲ.
ಸಾವಿನ ಜೊತೆಗೆ,
ಅಪರಾಧಿಪ್ರಜ್ಞೆಯ ಹೊರೆ ಏರಿಸಬೇಡ!

3
ನೀನು ಆರೋಪಿಸುವ
ಪ್ರೀತಿಯ ಘಮಲು,
ಕೃಷ್ಟ-ಸತ್ಯಭಾಮೆಯರ ನೆನಪು,
ಹೂವಿನೊಂದಿಗೆ ಹುಟ್ಟಿಕೊಂಡ ಪ್ರೀತಿಯ ಕತೆಗಳು,
ಎಲ್ಲವುಗಳ ಹಿಂದಿರುವುದು ಒಂದೊಂದು
ನೋವಿನ ಕನವರಿಕೆಗಳೇ!
ಮತ್ತೆ ಮತ್ತೆ ನಿನ್ನ ಶಬ್ದಗಳಲ್ಲಿ ಮೂಡುವುದೂ ಅದೇ ಚಿತ್ರಗಳು!
ಬಣ್ಣಗಳು ಮಾತ್ರ ಬೇರೆ ಬೇರೆ.


 
4
ನೆಲದ ಮೇಲೆ ಬಿದ್ದ ಪಾರಿಜಾತಕ್ಕೆ,
ಬೇಕಿಲ್ಲ ನಿನ್ನ ಪದಗಳ ಭಾರವನ್ನು
ಹೊರುವ ಶಿಕ್ಷೆ!
ಸುಮ್ಮನೆ ಬಿಟ್ಟುಬಿಡು!
ಸಾಯುವ ಕ್ಷಣದಲ್ಲಾದರೂ
ಅದು ಕಳಚಲಿ
ತನ್ನೊಳಗಿನ
ಪ್ರೀತಿಯ ಶಿಲುಬೆಯನ್ನು!

‍ಲೇಖಕರು Adminm M

11 August, 2023

1 Comment

  1. ಗೋಪಾಲ ತ್ರಾಸಿ

    ಚೆಂದಿವೆ.. ಕಾಡುವ ಕಾವ್ಯ ತುಣುಕು ಗಳು !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading