ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಕ್ಕಿದಷ್ಟೂ ಹೊತ್ತೂ ಅತ್ತು ಕರೆಯದೆ…

ಮೋಹನ ವೀ ಹೊಸೂರ

ಯಾರನ್ನು ನಂಬಿ ಇಂಬಾಗುವೆ ಇಲ್ಲಿ
ಕುಂಭವನ್ನಾಧರಿಸಿದ ಸಿಂಬೆ ಯಾರಿಲ್ಲಿ
ಏನು ಕಾರಣವೋ ಗೊತ್ತಿಲ್ಲದೆ
ಇದ್ದು ಬಸವಳಿದು ಬಿದ್ದು ಎತ್ತಿ ಸಾಗಿಸೋವರೆಗೆ

ಸಂಚಾಗಿ ಹೊಂಚಾಗಿ ಜಾರಿಸೋ ನುಣುಪು
ಎಡ ಬಿಡದೆ ಬೀಸಿ ಅಲ್ಲಾಡಿಸಿ ಕೆಡೆವ ಗಾಳಿ
ನಶ್ವರವಾಗಿ ಮುದುರಿ ಮುಗಿದು ತೀರುವ ಎಡೆ
ಎಲೆ ಇದ್ದೇನೆಂದರೂ ಇರಲಾದೀತೇನು ?

ಕಮಲದೆಲೆಯ ಮೇಲಿನ ಬಿಂದುವಾಗಿದ್ದು
ಬಂಧುವಾಗದೆಲೆಯಿಂದ ಬಿದ್ದು ಬೀಳದಂತೆ
ಅಂಟಿಯೂ ಅಂಟದಂತೆ ಇದ್ದೂ ಇರದಂತೆ
ನೀ ಹೊಳೆವ ಮಿಂಚಾಗು ಸೂರ್ಯ ಕಿರಣಕೆ
ದಕ್ಕಿದ ಅಷ್ಟೂ ಹೊತ್ತೂ ಅತ್ತು ಕರೆಯದೆ

‍ಲೇಖಕರು Admin

17 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading