ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಥೇಟ್ ಮಳೆ ನೀರಿನಂತೆ..' – ಸೂರಿ ಕವನ

ಸುರೇಂದ್ರನಾಥ್

(ಇದು ಗುಲ್ಶಾರ್ ಸಾಬ್ ಪದ್ಯ)


ಮಳೆ ಬಿದ್ದಾಗ
ನೀರಿಗೆ ಸಾವಿರ ಪಾದಗಳು.
ಗೋಡೆಯನ್ನು ಒದೆಯುತ್ತಾ,
ಬೀದಿಯಲ್ಲಿ ಕುಣಿಯುತ್ತಾ,
ಥೇಟ್ ಪಂದ್ಯ ಗೆದ್ದ ಪುಟ್ಟ ಹುಡುಗರ ಹಾಗೆ.
 
ಪಂದ್ಯ ಗೆದ್ದ ಬೀದಿಯ ಪುಟ್ಟ ಹುಡುಗರು
ಬಿಳಿ ಕ್ಯಾನ್ವಾಸ್ ಶೂ ತೊಟ್ಟು
ಚೆಂಡುಗಳಂತೆ ಪುಟಿಯುತ್ತಾ,
ಗೋಡೆಯನ್ನು ಒದೆಯುತ್ತಾ,
ಬೀದಿಯಲ್ಲಿ ಕುಣಿಯುತ್ತಾ ,
ಥೇಟ್ ಮಳೆ ನೀರಿನಂತೆ.
 

‍ಲೇಖಕರು avadhi

4 March, 2013

5 Comments

  1. Santhoshkumar LM

    :)ಚೆನ್ನಾಗಿದೆ

  2. Gopaal Wajapeyi

    ಇನ್ನು ಮಳೆ ಬಂದಾಗಲೆಲ್ಲ ನನಗೆ ಅಲ್ಲಿ ಥೇಟ್ ಪಂದ್ಯ ಗೆದ್ದ ಪುಟ್ಟ ಹುಡುಗರೇ ಕಾಣುತ್ತಾರೆ.
    ‘ಗುಲ್ ಸೂರಿ’ಗೆ ಒಂದು ಸಲಾಮ್…!

  3. ರವಿ ಮೂರ್ನಾಡು

    ಸುಂದರ ಕವಿತೆ . ಮಳೆ ನೀರಿಗೆ ಸಾವಿರ ಕಿವಿ ಬಂದ ಹಾಗೆ. ಸುತ್ತ ನೋಡುವ ಮಂದಿಯ ಸಂತಸವನು ಆಲಿಸುವ ಬಗೆ . ಧೋ…. ಧೋ… ಇಳೆಯ ಜಳಕ .

  4. pravara

    ಮಳೆ ಬಂದಕೂಡಲೆ ರುಚಿ ನೋಡಲಿಕ್ಕೆ ಬಾಯ್ತೆರೆದು ನಿಲ್ಲುತಿದ್ದೆವು…. ಚೆನ್ನಾಗಿದೆ

  5. ಅ.ರಾ.ತೇಜಸ್

    ಹೃದಯ ಗೆದ್ದ ’ಗುಲ್ಶಾರ ಸಾಬ್’ ಥೇಟ್ ಮನ ತಣಿಸುವ ಮಳೆ ನೀರಿನಂತೆ.. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading