ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೊಟ್ಟಿಕ್ಕುತ್ತಿದೆ ಸುಖ

t s goravara1ಟಿ ಎಸ್ ಗೊರವರ 

ನೀನು ಈ ವೇಳೆಯಲಿ
ಬರದೇ ಹೋಗಿದ್ದರೆ ಪೂರ್ಣವಾಗುತ್ತಿರಲಿಲ್ಲ
ಜೀವನದ ಒಂದು ಅರ್ಧ ವಿರಾಮ

ಹೊತ್ತು-ಗಿತ್ತಿನ ಚಿತ್ತವಿಲ್ಲದೆ
ಅದಲು ಬದಲಾಗುವ
ತುಟಿಮುತ್ತಿನ ರುಚಿಗೆ ಮರುಳಾದೆ

goravara marriageನೀನು ನನ್ನೊಳಗೆ
ನಾನು ನಿನ್ನೊಳಗೆ
ಪರಕಾಯ ಪ್ರವೇಶ ;
ಆಹಾ ! ಅರ್ಥವಾಯ್ತು
ಪ್ರೇಮ ದೇವರು-ದಿಂಡರು ಇಲ್ಲದ ಅಧ್ಯಾತ್ಮ

ಗೂಢ-ನಿಗೂಢಗಳ
ಬಟಾಬಯಲಿನ
ಸಾಮಿಪ್ಯದ ಸವಿಗೆ ಬೆರಗಾದೆ

ಸ್ವರ್ಗದ ಎಳೆಗಳು ಈ ಕ್ಷಣಗಳು ;
ಫರುಕಿಲ್ಲ ಹಗಲು – ರಾತ್ರಿಗೆ
ತೊಟ್ಟಿಕ್ಕುತ್ತಿದೆ ಸುಖ

‍ಲೇಖಕರು admin

20 November, 2015

3 Comments

  1. ಮಂಜುನಾಥ್. ಪಿ

    nice

  2. ಸುಧಾ ಚಿದಾನಂದಗೌಡ

    very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading