ಡಿ ಎಂ ಕುರ್ಕೆ coming with ರೇಡಿಯೋ

d m kurke

ಈ ಕಿರಿಯ ಗೆಳೆಯನ ಬೆಳವಣಿಗೆಯೇ ಬೆರಗು ಮೂಡಿಸುತ್ತದೆ ನನಗೆ…

ಭೇಟಿಯಾಗುವ ಮುನ್ನವೇ ನನ್ನ ಪರಿಚಯ ಮಾಡಿಕೊಂಡಿದ್ದವನು, ಗ್ರಾಮಾಂತರ ವಿಭಾಗದ ಡೆಸ್ಕ್‌ನಲ್ಲಿ ನನ್ನ ಜೊತೆಯಾದ. ಎರಡು ವರ್ಷ ಕೆಲಸ ಮಾಡುತ್ತಿದ್ದಾಗಲೇ, ಸಲಹೆ ಕೇಳುತ್ತಾ ಲೇಖನಗಳನ್ನು ಬರೆದ. ಅದ್ಯಾವುದೋ ಮಾಯದಲ್ಲಿ ಬರಹವೊಂದಕ್ಕೆ ಪ್ರಶಸ್ತಿ ಪಡೆದ. ಇತ್ತ ತಿರುಗುವ ಹೊತ್ತಿಗೆ ಪುರವಣಿ ವಿಭಾಗಕ್ಕೆ ಜಿಗಿದ. ಎಲ್ಲ ಪುರವಣಿಗಳಿಗೂ ಲೇಖನ ಬರೆದ. ಕಥೆಗಳನ್ನು ಬರೆಯುತ್ತಾ, ಅವುಗಳನ್ನು ಮುಚ್ಚಿಟ್ಟುಕೊಂಡೇ ಈಗ ‘ಸಂಕಲನ’ ಹೊರತರುತ್ತಿದ್ದಾನೆ. ತುಂಬಾ ಖುಷಿಯಾಗುತ್ತಿದೆ. ನನ್ನ ಅಮ್ಮನ ತವರಿನ ಈ ಕಿರಿಯ ಗೆಳೆಯ ಪ್ರಶಾಂತನ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ.
ಶುಭವಾಗಲಿ ಪ್ರಶಾಂತ.

-ಗಾಣದಾಳು ಶ್ರೀಕಂಠ 

‘ಹುಬ್ಬಳ್ಳಿ-ಧಾರವಾಡ ರಾಷ್ಟ್ರೀಯ ಹೆದ್ದಾರಿ 64ರ ಅರೆಬೈ ಲು ಘಟ್ಟದ ಬಳಿ ಇಂದು ಮುಂಜಾವಿನಲ್ಲಿ ಲಾರಿ ಕಂದಕಕ್ಕೆ ಬಿದ್ದು ಆರು ಜನರು ಮೃತಪಟ್ಟಿದ್ದಾರೆ….’ ಎನ್ನುತ್ತಿದ್ದಂತೆ ರೇಡಿಯೋ ವರಸೆ ಬದಲಿಸಿ ಕರ್..ಕರ್.. ಕೊಟರ್.. ಕೊಟರರ್… ಹಸನಬ್ಬನ ದನಿ ಕೆಡಿಸಿತ್ತು.
ಮೈಕೊರೆವ ಚಳಿಯನ್ನು ಲೆಕ್ಕಿಸದೆ ವಯಸ್ಸಾದ ದೇಹವನ್ನು ಬೆಳ್ಳಂಬೆಳಗ್ಗೆ ಎಬ್ಬಿಸಿ ವಾರ್ತೆಗೆ ಕಿವಿಕೊಟ್ಟಿದ್ದ ಅಜ್ಜಿಕೇರಿ ಶಂಕರ ಭಟ್ಟರು ಸಿಟ್ಟಾಗಿ, ರೇಡಿಯೋದ ಕಿವಿ ಹಿಂಡಿ, ತಲೆ ಮೇಲೆ ನಾಲ್ಕು ಏಟು ಮೊಟಕಿದರು.

12243270_10205601179332513_8429784226289355110_n

‍ಲೇಖಕರು admin

November 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: