ಎನ್ ರವಿಕುಮಾರ್ ಟೆಲೆಕ್ಸ್
ನನ್ನೊಳು ನೀನು
ನಿನ್ನೊಳು ನಾನು
ಅರಿತು- ಬೆರತು
ಕಾಲದ ಹಂಗಿಲ್ಲದೆ ಮೈಮರೆತ ಕ್ಷಣವೇ
ಹೋಳಿ ಹುಣ್ಣಿಮೆ
ತುಟಿಗೆ ತುಟಿಯ
ಬಣ್ಣ ಮೆತ್ತಿ
ಹಗಲು- ಇರುಳಿಗೂ ಪ್ರೇಮರಸ ಕುಡಿಸಿ
ಬೆರಳು ಸರಿದಾಡಿದೆಡಯಲ್ಲೆಲ್ಲಾ
ಸುರಲೋಕ ದಾರಿಗಳೆ..
ತೋಳು – ತೊಡೆಗಳು ಬಿಗಿದಷ್ಟು
ಸುಖ
ಕೊರಳ ಇಳಿಜಾರಿನ ಕಣಿವೆಗೆ
ಮುಖವುದುಗಿಸಿ
ಮುದ್ದಾಡುವಾಗ
ಅಲ್ಲೊಂದು ಬಣ್ಣದ ಲೋಕ
ಮೈನೆರೆಯಿತು
ನೆತ್ತಿಯಿಂದಿಳಿದು ಉಂಗುಷ್ಟದಂಚಿನವರೆಗೂ
ಪೋಣಿಸುವ ಮುತ್ತುಗಳಿಗೂ
ಮಧುರ- ಮದಿರೆಯ ಮತ್ತು

ಆ ಹೊತ್ತು ಕ್ಷಣ ಕ್ಷಣವೂ
ಹೊಸಬಣ್ಣ
ನಿನಗೆ ನಾನು
ನನಗೆ ನೀನು
ಆ ಬಣ್ಣ ಈ ಬಣ್ಣ
ಎರಚಾಡಿ ,ಚೆಲ್ಲಾಡಿ
ಕೊಟ್ಟು – ಪಡೆದು
ಹಂಚುಂಡು ಒಬ್ಬೊರೊಳೊಬ್ಬರು ತೆಕ್ಕೆಯೊಳಗೆ
ಪುಟ್ಟ ಹಕ್ಕಿಯಂತೆ ಮಗುವಾದಾಗ
ಕರುಳ ಕೋಣೆಯಲ್ಲಿ ಓಕುಳಿ
ಧನ್ಯವಾಯ್ತು.






0 Comments