ತುಂಬಾ ಹಿಂದೆ ಹೋಗಿಬಿಟ್ಟೆ ಲಂಕೇಶಣ್ಣಾ..

sangeeta kalmane

ಸಂಗೀತಾ ಕಲ್ಮನೆ 

“ಯಾರ್ರೀ ಅಡಕಳ್ಳಿ ಕತ್ರೀ” ಹಾ! ಇದೇನು ಹೀಗೆ ಬರಿತಿದ್ದಾರೆ ಅಂದ್ಕೋಬೇಡಿ. ಇಲ್ಲಿಯ ಫೋಟೊ ನೋಡುತ್ತಾ ನಾನೂ ನಮ್ಮಪ್ಪನ ಮನೆಗೆ ಹೋಗಿ ಬಂದೆ.

ಹೀಗೆ ಇದೆ ಕಂಡ್ರೀ ನಮ್ಮಪ್ಪನ ಮನೆ. ಹಳೆ ಕಾಲದ್ದು. ಅದೇ ಕೂಗು ಬಸ್ಸ ಸ್ಟಾಪ ಬಂದಾಗ.

ತುಂಬಾ ಹಿಂದೆ ಹೋಗಿಬಿಟ್ಟೆ ಲಂಕೇಶಣ್ಣಾ. ಆಗ ನಾನು ಬ್ಯಾಂಕಿನಲ್ಲಿ ಹೊಸದಾಗಿ ಸೇರಿಕೊಂಡಿದ್ದೆ. ನಾನೊಬ್ಬಳೆ ಹೆಣ್ಣು. ಎಲ್ಲರೂ ಮೀಸೆ ಹೊತ್ತ ಗಂಡಸರೆ. ವಾರಕ್ಕೊಮ್ಮೆ ಬರುವ ಲಂಕೇಶ ಪತ್ರಿಕೆಯನ್ನು ಒಬ್ಬ ಪಿಗ್ಮೀ ಕಲೆಕ್ಟರನಿಗೆ ತಪ್ಪದೆ ತರುವಂತೆ ತಾಕೀತು ಮಾಡಿದ್ದರು ಶಾಖಾಧಿಕಾರಿಗಳು.

lankesh and t k tyagarajಆ ದಿನ ಅದೇನು ಸಂಭ್ರಮ. ಆಗಲೆ ಆಹ್ವಾನಕ್ಕೆ ಬಜ್ಜಿ ಟೀ order. ಪತ್ರಿಕೆ ಮೊದಲು ಶಾಖಾಧಿಕಾರಿ ಕೈ ಸೇರಬೇಕು. ಅವರು ಒಮ್ಮೆ ಮಗುಚಿ ಹಾಕೋದೆ ಕಾಯುತ್ತಿದ್ದ ಉಳಿದವರು ಅವರ ಟೇಬಲ್ಲಿನ ಸುತ್ತ ಸುತ್ತುವರಿದು ತಗ್ಗಿ ಬಗ್ಗಿ ಅಲ್ಲೆ ಓದುವ ಕಸರತ್ತು. ಯಾವಾಗ ಅವರ ಕೈಯಿಂದ ಈಚೆ ಬಂತೊ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ಪುಟ ಹರಿದಾಡುತ್ತಿತ್ತು. “

ಏಯ್ ಆ ಪುಟ ಕೊಡಪ್ಪ continuation ಇದೆ ಓದಬೇಕು, ಇರ್ರೀ ಇಂಟರೆಸ್ಟಿಂಗ ಇದೆ, ಓದುತ್ತಿದ್ದೇನೆ.” ಹೀಗೆ ಸಾಗುತ್ತಿತ್ತು ಈ ಪತ್ರಿಕೆಯನ್ನು ಓದುವ ಕಚ್ಚಾಟ. ನಾನೊ ಟೀ ಬಜ್ಜಿ ಸಂಪ್ಲೈಯರ್. ಎಲ್ಲರ ಓದು ಮುಗಿದ ಮೇಲೆ ನನ್ನ ಟೇಬಲ್ಲಿಗೆ ಪುಟಗಳು ಬರುತ್ತಿದ್ದವು ಚೆಲ್ಲಾಪಿಲ್ಲಿಯಾಗಿ‌. ಹಾಗೆ ನನಗೆ ತಾಕೀತು ಎಲ್ಲರಿಂದ; ಸರಿಯಾಗಿ ಜೋಡಿಸಿಡಿ ಬಾಯೋರೆ, ಯಾವ ಪೇಜೂ ಮಿಸ್ ಆಗಬಾರದು. ಆಮೇಲೆ ಅಲ್ಲಿರುವ ವಿಷದ ಬಗ್ಗೆ ಚಚೆ೯, ನಗು ದಿನವೆಲ್ಲ ಬ್ಯಾಂಕ ಪೂರ ಲಂಕೇಶಮಯ. ಶಾಖಾಧಿಕಾರಿಯವರೂ ಕೌಂಟರಿನಲ್ಲೇ ಠಿಕಾಣಿ. ಒಮ್ಮೊಮ್ಮೆ ಮಧ್ಯಾಹ್ನದ ಊಟ ಹೋಟೇಲ್ ನಲ್ಲಿ ಸೆಲೆಬ್ರೇಷನ್ ಖುಷಿಗೆ.

ಅಬ್ಬಾ! ಮೊದಲು ಇದೆಲ್ಲ ಹೊಸದು ನನಗೆ. ಯಾಕೆ ಈ ಪತ್ರಿಕೆ ಕಂಡರೆ ಇಷ್ಟೊಂದು ಕಚ್ಚಾಡುತ್ತಾರೆ ಅನಿಸುತ್ತಿತ್ತು. ಆದರೆ ಯಾವಾಗ ಈ ಪತ್ರಿಕೆ ಓದೊ ಹುಚ್ಚು ನನಗೂ ಹಿಡೀತು ನಾನೂ ಹಾಗೇ ಆದೆ.

ಅದೇನ್ರೀ ಯಾವುದೇ ವಿಷಯ ಕಣ್ಣಿಗೆ ಬೀಳಲಿ ನ್ಯಾಯಯುತವಾಗಿ ಖಂಡಿಸಿ ಆಡು ಭಾಷೆ ತೂರಿಸಿ ಬರೆಯುವುದರಲ್ಲಿ ಎತ್ತಿದ ಕೈ ನಮ್ಮ ಲಂಕೇಶಣ್ಣ. ಅಗಲವಾದ ಕಣ್ಣು, ಆ ಮೀಸೆ, ಆ ದಪ೯ ಮುಖಭಾವ ಹೇಗ್ರೀ ಮರೆಯೋಕೆ ಆಗುತ್ತೆ. “ಬದುಕಿನಾಚೆಗೂ ಬದುಕಿರುವರು” ಅವರು.

ಇದೋ ನನ್ನದೊಂದು ಹೃದಯಪೂವ೯ಕ ನಮನ!

#

ಇಲ್ಲಿರುವ ಎರಡೂ ಚಿತ್ರಕ್ಕೆ ಅದರದ್ದೇ ಆದ ಮಹತ್ವವಿದೆ 

ಮುಖಚಿತ್ರದಲ್ಲಿ ಲಂಕೇಶ್ ತಮ್ಮ ಪತ್ರಿಕೆಯ ಭಾಗವೇ ಆಗಿ ಹೋಗಿದ್ದ ಸತ್ಯಮೂರ್ತಿ ಆನಂದೂರು ಹಾಗೂ ಶೂದ್ರ ಶ್ರೀನಿವಾಸ್ ಅವರೊಂದಿಗಿದ್ದಾರೆ 

ಎರಡನೆಯದು ಪತ್ರಿಕೆಯ ಮಹತ್ವದ ವರದಿಗಾರರಾಗಿದ್ದ ಟಿ ಕೆ ತ್ಯಾಗರಾಜ್ ಅವರೊಂದಿಗಿದ್ದಾರೆ 

‍ಲೇಖಕರು admin

March 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

Trackbacks/Pingbacks

  1. ತುಂಬಾ ಹಿಂದೆ ಹೋಗಿಬಿಟ್ಟೆ ಲಂಕೇಶಣ್ಣಾ.. | – Sandhyadeepa…. - […] http://avadhimag.online/2016/03/11/%e0%b2%a4%e0%b3%81%e0%b2%82%e0%b2%ac%e0%b2%be-%e0%b2%b9%e0%b2%bf%e0%… […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: