ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ತುಂಬಾ ನೋವುಗಳಿವೆ ಈ ಮಣ್ಣಿಗೆ…' ಎಂ ಎಂ ಶೇಕ್ ಗಜ಼ಲ್

ಗಜಲ್

ಎಂ ಎಂ ಶೇಖ್ ಯಾದಗಿರಿ

ತಂಪಿಗೆ ಎದೆ ತುಂಬಾ ಹರಡಿದ್ದವರು ನಾವು ಸಾಕಿ
ಬಿಸಿಲಿಗೆ ಮೋಡಗಳ ಹೆಣೆದವರು ನಾವು ಸಾಕಿ
 
ಕಣ್ಣಿನ ಆ ಭಾಷೆಯನ್ನು ಕೃತಿಗಿಳಿಸಿದ ಪ್ರಶಂಸೆಯಿದೆ
ನೋವುಗಳನ್ನು ನಲಿವಾಗಿ ಮಣಿಸಿದವರು ನಾವು ಸಾಕಿ

ನಮ್ಮಲ್ಲೆಷ್ಟೋ ಮನಸ್ತಾಪದ ವೈಷಮ್ಯಗಳಿದ್ದವು
ಒಗ್ಗಟ್ಟಿನಿಂದ ಎಲ್ಲವನ್ನೂ ಹಣೆದವರು ನಾವು ಸಾಕಿ
 
ತುಂಬಾ ನೋವುಗಳಿವೆ ಈ ಮಣ್ಣಿಗೆ ಅರ್ಥಯಿಸಿಕೊಳ್ಳಿ
ವಾತ್ಸಲ್ಯದ ಮಾತೊಂದಕ್ಕೆ ಮಣಿದವರು ನಾವು ಸಾಕಿ
 
ಉದುರಿ ಬಿದ್ದ ಭಾಂಧವ್ಯಗಳ ಚಿಂತೆಯಾಗಿದೆ
ಹೆಗಲಿಗೆ ಹೆಗಲು ಕೊಟ್ಟು ಕುಣಿದವರು ನಾವು ಸಾಕಿ.

‍ಲೇಖಕರು G

25 February, 2014

6 Comments

  1. smitha Amrithraj

    istavaytu kavite-smitha

  2. Swarna

    ಚಂದದ ಸಾಲುಗಳು

  3. Basava Halli

    nice

  4. gururaj katriguppe

    vah, vah, vah,….

  5. mmshaik

    ellarigu thanks..!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading