ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಂಬಾ ದಿನ ಕಾಡುವ ಸಿನಿಮಾ 'Shoplifters'

ರೇಣುಕಾ ಚಿತ್ರದುರ್ಗ 
ಕುಟುಂಬ ಎಂದರೇನು ಎಂಬುದಕ್ಕೆ ಹೊಸ ಡೆಫಿನಿಷನ್ ಬರೆದ ಸಿನಿಮಾ #Shoplifters (ಜಪಾನಿ ಭಾಷೆ).
ಸಿನಿಮಾ ನೋಡ್ತ ನೋಡ್ತ ಕತೆಯ ಒಂದೊಂದೇ ಎಳೆಗಳು ಈರುಳ್ಳಿ ಸಿಪ್ಪೆ ಬಿಡಿಸಿದಂತೆ ಅನಾವರಣಗೊಳ್ತ ಹೋಗ್ತವೆ.
ಬಡವರ ಬದುಕನ್ನು ಆ ಪುಟ್ಟ ರೂಮಿನ ತುಂಬಾ ಒಟ್ಟಿಕೊಂಡಿರುವ ಸಾಮಾನುಗಳ ಮಧ್ಯದಿಂದ ಹೇಳಿದ್ದಾರೆ. ಕುಟುಂಬದ ಸದಸ್ಯರು ಸದಾ ಏನಾದರೊಂದನ್ನು ಮೆಲ್ಲುತ್ತಲೇ ಇರುತ್ತಾರೆ. ಚಿತ್ರದ ಅನೇಕ ದೃಶ್ಯಗಳು ಊಟ ಮಾಡುತ್ತಿರುವ ಸನ್ನಿವೇಶಗಳಿಂದ ತುಂಬಿವೆ. ಊಟ ಮಾಡುತ್ತಲೆ ಮಾನವೀಯತೆ ಪ್ರಕಟಿಸುವ, ನಮ್ಮಲ್ಲಿ ಪಾಸಿಟಿವ್’ತನವನ್ನು ತುಂಬುವ ರೀತಿ ಅದ್ಭುತ.
ಪುಟ್ಟ ಮಗುವಿನ ಶೋಷಣೆ ನೋವು ತರುತ್ತೆ, ಅಂತಹ ಬಡತನದಲ್ಲು ಅವಳನ್ನು ಮನೆಯ ಸದಸ್ಯಳಾಗಿ ಒಪ್ಪುವ ರೀತಿ ಚಂದ. ಆ ಕುಟುಂಬದ ಹೆಣ್ಣು ಮಗಳೊಬ್ಬಳು ಬಾರ್ ಡ್ಯಾನ್ಸ್ ವೃತ್ತಿಯನ್ನು ಸಾಮಾನ್ಯ ವೃತ್ತಿಗಳಂತೆ ಒಪ್ಪಿ ಅಪ್ಪುತ್ತಾಳೆ.
ಸಿನಿಮಾದ ಕತೆ ಮತ್ತು ದೃಶ್ಯಗಳು ಸರಿಯಾ? ತಪ್ಪ? ಯಾವುದನ್ನು ತೀರ್ಮಾನಿಸದಂತಹ ವಿಷಾದ ಮನೋಭಾವವನ್ನು ನಮ್ಮೊಳಗೆ ತುಂಬಿಸಿ ಸಿನಿಮಾ ಮುಗಿಯುತ್ತದೆ.
ತುಂಬಾ ದಿನ ಕಾಡುವ ಸಿನಿಮಾ..

 

‍ಲೇಖಕರು avadhi

8 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading