ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿಳಿಯುವ ಅಗತ್ಯವಿದೆ..

ಹಿಂದಿ: ನಿಧಿ ನರ್ವಾಲ್
ಕನ್ನಡಕ್ಕೆ: ಮಂಜುಳ ಕಿರುಗಾವಲು

ಉಳಿದುಕೊಂಡಿರುವೆಯೋ? ಉಳಿಸಿಕೊಂಡಿರುವರೋ
ಮಲಗಿರುವೆಯೋ ಮಲಗಿಸಿರುವರೋ
ಬಿದ್ದು ಬಿಟ್ಟೆಯೋ ಬೀಳಿಸಿದರೋ
ಸುಟ್ಟು ಹೋದೆಯೋ ಸುಡಲಾಯಿತೋ

ತಿಳಿಯುವ ಅಗತ್ಯವಿದೆ!
ಪ್ರಚೋದಗೊಂಡಿರುವೆಯೋ? ಪ್ರಚೋದಿಸಿರುವರೋ
ನಿನಗೆನೆಲ್ಲಾ ಅರ್ಥ ಮಾಡಿಸಲಾಯಿತೋ
ಭಾಗಿಯಾಗಿರುವರು ಇಲ್ಲಿ ಬೆರಳೆಣಿಕೆ ಮಂದಿ
ನೀನಾಗಿಯೇ ಬಂದಿರುವೆಯೋ? ಕರೆಯಲಾಯಿತೊ

ತಿಳಿಯುವ ಅಗತ್ಯವಿದೆ!
ಗುರಿಯೂ ಇದೆ ಉದ್ದೇಶವೂ ಇದೆ
ಜೀವಂತವೂ ಇರುವೆ!
ಮರೆತಿರುವೆಯೋ ಮರೆಸಲಾಯಿತೋ
ಕಣ್ಣುಗಳಲ್ಲಿ ಕಣ್ಣೀರು, ದುಃಖದ ಛಾಯೆ
ಬಾಡಿದ ಪುಷ್ಪಗಳು ಆವರಿಸಿವೆ ನಿನ್ನ
ನೀನಾಗಿ ಛಿದ್ರವಾಗಿರುವೆಯೋ? ನಾಶಗೊಳಿಸಿದರೋ


ತಿಳಿಯುವ ಅಗತ್ಯವಿದೆ
ತ್ಯಾಗಿಯಾಗಿರುವೆಯೋ? ಆರಿಸಿರುವೆಯೋ
ನೀ ಹೀಗೆ ಇದ್ದೆಯೋ? ಇರಿಸಲಾಯಿತೋ
ಅತ್ತೆಯೋ? ಅಳುವಂತೆ ಮಾಡಿದರೋ?
ಯಾರದೋ ಹೃದಯದಲ್ಲಿ ನೀ ನೆಲೆಸಿರುವೆ
ಆ ಭರವಸೆ, ಆ ವ್ಯಕ್ತಿ, ಆ ಜಾಗ
ನೀನೇ ಬಿಟ್ಟು ಬಂದೆಯೋ? ಓಡಿಸಿದರೋ

ತಿಳಿಯುವ ಅಗತ್ಯವಿದೆ
ಕೊನೆಯಾಯಿತೋ ಕೊನೆಗಾಣಿದರೋ
ರಾಜೀನಾಮೆ ನೀಡಿರುವೆಯೋ? ತೆಗೆದು ಹಾಕಿದರೋ
ಈ ಸುಳ್ಳು, ಈ ತಂತ್ರ, ಈ ಮೋಸ,ಈ ಕಪಟ
ನೀನೇ ಕಲಿತಿರುವೆಯೋ? ಕಲಿಸಿದರೋ?

ತಿಳಿಯುವ ಅಗತ್ಯವಿದೆ!
ನೀ ಸೋತೆಯೋ? ಸೋಲಿಸಲಾಯಿತೋ
ನೀ ಮಾತು ಕೇಳಿದಿಯೋ? ಹೇಳಲಾಯಿತೋ
ಇದೆಂಥ ನಿರ್ಧಾರ ತೆಗೆದುಕೊಳುತಿರುವ ನೀ
ನಿನ್ನ ಅರಿವಿನಿಂದಾಯಿತೋ? ನಿನ್ನ ಬದಲಿಸಿದರೋ

ತಿಳಿಯುವ ಅಗತ್ಯವಿದೆ
ಉಳಿದುಕೊಂಡಿರುವೆಯಾದರೆ ಹೊರಡುತ್ತಿಲ್ಲವೇಕೆ?
ಮಲಗಿರುವೆಯಾದರೆ ಏಳಲಾಗುತ್ತಿಲ್ಲವೇಕೆ
ನೀನಾ ಅದು, ನೀನಾ ಇದು
ಜೀವಂತವಾಗಿರುವೆಯಾದರೆ ಸಾಯುತ್ತಿಲ್ಲವೇಕೆ?

‍ಲೇಖಕರು nalike

2 August, 2020

2 Comments

  1. Govind

    ಗುಡ್.

    ‘ಕೊನೆಗಾಣಿಸಿದರೋ ‘
    ಆಗಬೇಕು ಅಂತ ಅನಿಸುತ್ತದೆ.ನೋಡಿ.

  2. JAGADEESHA M Betta

    ಬದುಕು… ಬವಣೆ. ಯಾರಿಗಾಗಿ ಈ ಪ್ರಶ್ನೆ?ಮನುಕುಲ ದಾರಿ ತಪ್ಪಿದೆ….!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading