ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿಲೋತ್ತಮೆ ಹೊಸ ಕವಿತೆ: ಅಪ್ಪನ ಅಂಗಿ

-ಎಂ.ಜಿ. ತಿಲೋತ್ತಮೆ

ಮಡಚಿಡುವಂತದಲ್ಲ
ಬಿಡಿಸಿ ಅಪ್ಪಿದಷ್ಟು
ನೋವಾಗುತ್ತೆ ಅಪ್ಪನ ಅಂಗಿ

ಅಮ್ಮನ ಮೊಗದಲ್ಲಿ
ನಗೆ ಹಾರಿರಬಹುದು
ಕಿಸಿ ತುಂಬಿದಾಗಲೆಲ್ಲ,
ಮಕ್ಕಳು ಕುಪ್ಪಳಿಸಿರಬಹುದು
ಜೇಬಲ್ಲಿ ಸಿಹಿ ಕಂಡಾಗಲೆಲ್ಲ,
ಅಣ್ಣ ಸಿಡುಕಿದ
ಮೀಸೆ ಚಿಗುರಿದಾಗ,
ಅಪ್ಪನ ನಗು ಮಾತ್ರ ಬದಲಾಗಲಿಲ್ಲ


ಅಮ್ಮ, ಅಪ್ಪನ ಅಂಗಿ ಕುಕ್ಕಿರಬಹುದು
ಜೇಬಿನ ಕೇಶಕ್ಕೂ
ಅಪ್ಪನಿಗೂ ನಂಟಿಲ್ಲ
ಸೋತ ಬೆವರ ಹನಿಗಳು
ಭುಜದಲ್ಲಿ ಅತ್ತಿರಬಹುದು
ನಾನು ಸಹ ನೋಡಿಲ್ಲ

ಗಡಸು ಧ್ವನಿಯ, ಗಂಭೀರ ಮುಖದ ಅಪ್ಪ
ಕಿರಿಕಿರಿ ಎನಿಸಿದರೂ,
ಮನೆಗೆ ಬಾರಲು ತಡವಾದ ಘಳಿಗೆ
ಎಲ್ಲರೂ ಎದೆಗುಂದವರು,
ಶಿಖರದಷ್ಟು ಧೈರ್ಯ ತುಂಬುವ ಅಪ್ಪ

ನೂರಾರು ಪುಕ್ಕ ಕಟ್ಟಿ
ಹಾರಿದ ಅಪ್ಪನ ಸಾಹಸ
ಯಾರು ಗಮನಿಸಿಲ್ಲ
ದಿಬ್ಬಣ ಹೊರಟಾಗ
ಅಪ್ಪನ ಅಂಗಿ ಖಾಲಿ ಖಾಲಿ

ಈಗ ತವರ ಹಾದೀಲಿ
ಬೆದರುಗೊಂಬೆ ತೊಟ್ಟಿದೆ ಅಪ್ಪನ ಅಂಗಿ

‍ಲೇಖಕರು nalike

4 August, 2020

7 Comments

  1. h r ramesha

    Last lines are so effective and suggestive

  2. T S SHRAVANA KUMARI

    ಚೆನ್ನಾಗಿದೆ

    • ಎಂ.ಜಿ.ತಿಲೋತ್ತಮೆ

      ಧನ್ಯವಾದ

    • ಎಂ.ಜಿ.ತಿಲೋತ್ತಮೆ

      ಧನ್ಯವಾದ

  3. Malati Bhat

    ಮನಸ್ಸಿಗೆ ನಾಟುವ ಕವಿತೆ

    • ಎಂ.ಜಿ.ತಿಲೋತ್ತಮೆ

      ಧನ್ಯವಾದ

  4. ರಾಜೀವ ನಾಯಕ

    ಕವಿತೆಯ ಪ್ರತಿ ಸಾಲೂ ಕರುಳನ್ನು ಮೀಟುವ, ಮನಸ್ಸನ್ನು ಆರ್ದ್ರಗೊಳಿಸುವ
    ಸಂವೇದನೆ ಹೊಂದಿದೆ…ಅಭಿನಂದನೆ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading