-ಹೆಚ್ ಎಂ ಮಯಬ್ರಹ್ಮಚಾರ್
ನಾಟಕ ಬೆಂಗ್ಳೂರ್ -18ರ ರಂಗಸಂಭ್ರಮದ ಹನ್ನೊಂದನೇ ನಾಟಕ “ತಾರ” ರಾಘವೇಂದ್ರ ಜೆ ರವರ ನಿರ್ದೇಶನದಲ್ಲಿ ‘ಅಭಿನಯ ತರಂಗ’ವು ದಿನಾಂಕ 15/12/ 2025 ರಂದು ಕಲಾಗ್ರಾಮ ಸಮುಚ್ಚಯ ಭವನ, ಮಲ್ಲತಹಳ್ಳಿಯಲ್ಲಿ ಪ್ರದರ್ಶಿಸಿತು.
ತಾರ ಅದೊಂದು ತಾರೆ. ನಕ್ಷತ್ರ ಲೋಕದಲ್ಲಿ ಮಿನುಗುವ ಮಿಣುಕು ದೀಪ. ಅವಳ ಬಗ್ಗೆ ಅತಿಯಾದ ಪ್ರೀತಿ ತೋರುವ ತಂದೆ. ಎಷ್ಟೇ ಪ್ರೀತಿ ಮಮತೆಯಿಂದ ನೋಡಿಕೊಂಡರೂ ತಾಯಿ ಭಾರತಿ ಯ ಬಗ್ಗೆ ಗಂಡ ಪಟೇಲ್ ಗೆ ಅದೇಕೋ ತಿರಸ್ಕಾರದ ಮನೋಭಾವ. ಆಕೆ ಮಾನಸಿಕ ಅಸ್ವಸ್ಥಳು ಇನ್ನು ಮಕ್ಕಳು ಚಂದನ್- ತಾರಾ ರನ್ನು ಹೇಗೆ ನೋಡಿಕೊಂಡಾಳು ಎನ್ನುವ ಅನಾಧಾರಣೆಗಿಂತ ಭಾರತಿ ಯ ತಂದೆ ಕಡೆಯಿಂದ ಕೋಟ್ಯಂತರ ರೂಪಾಯಿಗಳ ಆಸ್ತಿ ಮತ್ತು ಅದರ ಸಂಪೂರ್ಣ ಒಡೆತನವನ್ನು ಮೊಮ್ಮಗ ಚಂದನನಿಗೆ ವಿಲ್ ಮಾಡಿ, ತಾರ ಳಿಗೆ ಏನೂ ಇಡದಂತೆ ಮಾಡಿರುವ ತಾರತಮ್ಯ ಪಟೇಲ್ ಭಾರತಿಯವರ ದಾಂಪತ್ಯದಲ್ಲಿ ಬಿರುಕು ಹೆಚ್ಚಲು ಕಾರಣವಾಗುವುದು.
‘ತಾರ’ ನಾಟಕವು ಒಂದು ಅಪರೂಪದ ಕಥೆಯನ್ನಾಧರಿಸಿದೆ. ಸಯಾಮಿ ಅವಳಿಗಳು (Cojoined twins) ಗರ್ಭಾವಸ್ಥೆಯಲ್ಲಿ ಒಂದೇ ಫಲವತ್ತಾದ ಮೊಟ್ಟೆಯು ಒಂದೇ ಅಂಡಾಣು ಮತ್ತು ವೀರ್ಯಾಣು ವಿನಿಂದ ಫಲವತ್ತಾದ ಭ್ರೂಣವು ಎರಡು ಪ್ರತ್ಯೇಕ ಭ್ರೂಣಗಳಾಗಿ ವಿಭಜನೆ ಯಾಗುವಾಗ ಬೇರ್ಪಡದೇ ಹೋದರೆ ಅವಳಿಗಳ ಜನನವಾಗುತ್ತದೆ.ಎದೆ, ಹೊಟ್ಟೆ,ಸೊಂಟದ ಭಾಗದಲ್ಲಿ ದೈಹಿಕವಾಗಿ ಜೋಡಿಸಲ್ಪಟ್ಟಿರುತ್ತಾರೆ.ಶಸ್ತ್ರ ಚಿಕಿತ್ಸೆ ಮೂಲಕ ಅವಳಿಗಳನ್ನು ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಒಬ್ಬರನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವ ವೈಜ್ಞಾನಿಕ ಕಥಾಹಂದರವೇ ನಾಟಕದ ವಸ್ತು. ಇಲ್ಲಿ ಗಂಡಿಗೆ ಪ್ರಾಶಸ್ತ್ಯ ಕೊಟ್ಟು,ಹೆಣ್ಣಿನ ಬಗ್ಗೆ ಇರುವ ಸಮಾಜದ ಅನಾಧಾರಣೆಯನ್ನು ಪ್ರಶ್ನಿಸುವ ನಾಟಕ ‘ತಾರ’.
. ತನ್ನ ಮಕ್ಕಳ ಬಗ್ಗೆ ಅತಿಯಾದ ಪ್ರೀತಿ ತೋರುವ ಮತ್ತು ಹೆಂಡತಿಯನ್ನು ಕಡೆಗಣಿಸುವ ಪಟೇಲ್ ಪಾತ್ರಧಾರಿಯಾಗಿ ಎಚ್ ಡಿ ವಿಧುರ್ ಅವರ ಅಮೋಘವಾದ ಅಭಿನಯ,ಭಾರತಿ ಪಾತ್ರದಲ್ಲಿ ದಿವ್ಯಶ್ರೀ ಅವರು ಮಾನಸಿಕ ರೋಗಿಯಾಗಿ ಮಕ್ಕಳ ಮೇಲೆ ಮಮತೆ ಪ್ರೀತಿಗಳನ್ನು ತೋರಿಸುವ ಕಕ್ಕುಲತೆಯ ಅವರ ಅಭಿನಯ ತಲ್ಲೀನತೆ ಮೆಚ್ಚುವಂಥದ್ದು.ಚಂದನ್- ತಾರಾ ಪಾತ್ರಗಳಲ್ಲಿ ಪ್ರಮೋದ್ ಆರ್ – ಅಪರ್ಣ ವಿದ್ಯಾರಣ್ಯ ಅಣ್ಣ – ತಂಗಿಯರ ಪಾತ್ರದಲ್ಲಿ ಒಬ್ಬರಿಗೊಬ್ಬರು ಕಾಲೆಳೆ ಯುತ್ತಾ,ತಮಾಷೆಯಾಗಿ ಪಾತ್ರಗಳಲ್ಲಿ ಜೀವಿಸಿದ್ದಾರೆ. ಇನ್ನು ಸ್ನೇಹಿತೆಯಾಗಿ ರೂಪಾಳ ಪಾತ್ರದಲ್ಲಿ ಅನನ್ಯ ಬಬ್ಲಿಯಾಗಿ ಚಿನಕುರಳಿಯಾಗಿ ಅಭಿನಯಿಸುತ್ತಾ, ಅಲ್ಲಲ್ಲಿ ಅವಳ ಮುಗ್ಧತನದ ಮಾತುಗಳು ತನಗೆ ತಾನೇ ಪ್ರಶ್ನಿಸಿಕೊಳ್ಳುವ ಮಾತುಗಾರಿಕೆಯಲ್ಲಿ, ಹಾಲಿನಲ್ಲಿ ಆದ್ದಿ ಹೆಣ್ಣು ಮಕ್ಕಳನ್ನು ಸಾಯಿಸಿ ಅದು ನೆತ್ತಿಗೇರಿ ಹೀಗಾಯಿತು ಎನ್ನುವ ಹಿರಿಯರ ಕ್ರೌರ್ಯವನ್ನು ಅನಾವರಣಗೊಳಿಸುವ ಮುಗ್ಧತೆಯ ಅಭಿನಯ ಮಾತುಗಾರಿಕೆಯಲ್ಲಿ ಪ್ರೇಕ್ಷಕರನ್ನು ನಗಿಸುತ್ತ ಅವರಿಗೆ ಹತ್ತಿರವಾಗುತ್ತಾಳೆ. ಡ್ಯಾನ್ ಆಗಿ ಹರ್ಷವರ್ಧನ್ ಡಾಕ್ಟರ್ ಆಗಿ ಲಕ್ಷ್ಯ ನಾಟಕದ ಕೊನೆವರೆಗೂ ಪಾತ್ರಗಳಲ್ಲಿ ತನ್ಮಯತೆಯಿಂದ ಅಭಿನಯಿಸಿದ್ದಾರೆ.
ನಿರ್ದೇಶನ. ಅನುವಾದ ವಿನ್ಯಾಸದಲ್ಲಿ ರಾಘವೇಂದ್ರ ಜೆ ರವರು ಮೊದಲ ಪ್ರಯತ್ನದಲ್ಲೇ ರಂಗಭೂಮಿ ಒಬ್ಬ ಉತ್ತಮ ನಿರ್ದೇಶಕನನ್ನು ಪಡೆದುಕೊಂಡಿದೆ.ಸಮಾಜದ ಸಂಕೀರ್ಣತೆಯನ್ನು ಬಿಂಬಿಸುವ ಒಬ್ಬ ಸಮರ್ಥ ನಾಟಕಕಾರ ಮಹೇಶ್ ಧತ್ತಾನಿ. ಮಂಜುನಾಥ್ ರವರ ಬೆಳಕು ನಾಟಕಕ್ಕೆ ಪೂರಕವಾಗಿದೆ.ಸಂಗೀತದ ಆಲಾಪಗಳು ನಾಟಕದ ಸನ್ನಿವೇಶಗಳ ಭಾವುಕತೆಯನ್ನು ಹೆಚ್ಚಿಸಿವೆ. ಒಂದು ಉತ್ತಮ ನಾಟಕವು ರೂಪಗೊಳ್ಳುವಲ್ಲಿ ರಂಗನಿರ್ವಣೆ ಮಾಡಿರುವ ಯೋಗೇಶ್ ರವರ ಕಾಳಜಿ ಮೆಚ್ಚುವಂಥದ್ದು.
ನಾಟಕ ಬೆಂಗ್ಳೂರ್ -18 ರ ರಂಗ ಸಂಭ್ರಮಕ್ಕೆ ಸ್ವಾಗತವನ್ನು ಆಚಾರ್ ಮಾಡಿದರು. ಗುಂಡಣ್ಣನವರು ನೆನಪಿನ ಕಾಣಿಕೆಯನ್ನು ನಿರ್ದೇಶಕರಿಗೆ ನೀಡಿ ಗೌರವಿಸಿದರು. ಸಹಯೋಗ-ಕರ್ನಾಟಕ ನಾಟಕ ಅಕಾಡೆಮಿ ಮತ್ತು ಸಹಕಾರ – ಬಹುರೂಪಿ ಪ್ರಕಾಶನಕ್ಕೆ ಆಚಾರ್ ವಂದನೆಗಳನ್ನು ಸಲ್ಲಿಸಿದರು.






0 Comments