‘ತಲ್ಲೂರು’ ಸಂಭ್ರಮ

 

ಕಲಾವಿದನೊಬ್ಬ ತೀವ್ರವಾದ ಶ್ರದ್ಧೆಯಿಂದ ಕೆಲ್ಸಮಾಡಿದಾಗ ಮಾತ್ರ ಬೆಳೆಯಲು ಸಾಧ್ಯ. ಕಲೆಯನ್ನೇ ಬದುಕಾಗಿಸಿಕೊಂಡದ್ದರಿಂದಾಗಿ ಕಲಾವಿದ ತಲ್ಲೂರು ಎಲ್ ಎನ್ ಇಷ್ಟೊಂದು ಬೆಳೆಯಲು ಸಾಧ್ಯವಾಯಿತು ಎಂದು  ಹಿರಿಯ ಕಲಾವಿದ ಹಾಗೂ ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದ ಆಧುನಿಕ ಕಲೆಗಳ ವಿಭಾಗದ ನಿವೃತ್ತ ನಿರ್ದೇಶಕ ಶ್ರೀ ದಿಲೀಪ್ ರಾನಡೆ ಹೇಳಿದರು.

ಶುಕ್ರವಾರ ಸಂಜೆ ಮಣಿಪಾಲದಲ್ಲಿ ಕಲಾವಿದ ತಲ್ಲೂರು ಎಲ್ ಎನ್ ಅವರ ಕುರಿತಾದ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಕಳೆದ ಇಪ್ಪತ್ತು ವರ್ಷಗಳಲ್ಲಿ ತಲ್ಲೂರು ಕಲಾವಿದರಾಗಿ ಬೆಳೆದದ್ದನ್ನು ವಿವರಿಸಿದರಲ್ಲದೇ ಮಣಿಪಾಲದಲ್ಲಿ ಅವರ ಸಾರ್ವಜನಿಕ ಶಿಲ್ಪವೊಂದನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಮಣಿಪಾಲ್ ಟೆಕ್ನಾಲಜೀಸ್ ಸಂಸ್ಥೆಯನ್ನು ಅಭಿನಂದಿಸಿದರು.

ಮತ್ತೊಬ್ಬರು ಅತಿಥಿ ನಾಡೋಜ ಶ್ರೀ. ಕೆ. ಪಿ. ರಾವ್ ಅವರು ಮಾತನಾಡಿ, ತಲ್ಲೂರು ಅವರ ಸೂಕ್ಷ್ಮಗ್ರಾಹಿ ವ್ಯಕ್ತಿತ್ವವನ್ನು ಗುರುತಿಸಿದರಲ್ಲದೇ ಇತರರ ಯೋಚನೆಗಳನ್ನು ಕೇಳುವ ಕಿವಿ ಹಾಗೂ ಅದನ್ನು ಗ್ರಹಿಸುವ ಎಳೆಯರ ಉತ್ಸಾಹ ಎರಡೂ ಕೂಡ ತಲ್ಲೂರು ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಗುರುತಿಸಿದರು.

ಮಣಿಪಾಲ್ ಬಳಗದ ಶ್ರೀಮತಿ ವನಿತಾ ಪೈ ಅವರು ಮಾತನಾಡಿ, ತಲ್ಲೂರು ಅವರು ಕಲಾವಿದರಾಗಿ ಗಮನದಲ್ಲಿರಿಸಿಕೊಳ್ಳಬೇಕಾದ ದೇಶದ ಮೂರುನಾಲ್ಕು ಮಂದಿಯಲ್ಲಿ ಒಬ್ಬರೆಂದು ಕಲೋದ್ಯಮದ ಸಮೀಕ್ಷೆಗಳು ಗುರುತಿಸಿವೆ. ಅಂತಹ ಕಲಾವಿದ ಈ ಭಾಗದವರಾಗಿರುವುದು ಮತ್ತು ಅವರು ಮಣಿಪಾಲ ಬಳಗದ ಹಿರಿಯರಾದ ಉಪೇಂದ್ರ ಪೈ ಅವರ ಸ್ಮಾರಕ ವೃತ್ತವನ್ನು ವಿನ್ಯಾಸ ಮಾಡಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ತಲ್ಲೂರು ಎಲ್ ಎನ್ ಪುಸ್ತಕವನ್ನು ಪತ್ರಕರ್ತ ರಾಜಾರಾಂ ತಲ್ಲೂರು ಸಂಪಾದಿಸಿದ್ದು, ಅದರಲ್ಲಿ ಹರ್ಷ್ ಫಾಯ್, ಪೀಟರ್ ನ್ಯಾಗಿ, ಡಾ| ಹೊಲ್ಲಿ ಷಾಫರ್ ಮತ್ತಿತರ ಹಿರಿಯ ಕಲಾವಿಮರ್ಶಕರ ಲೇಖನಗಳು ಹಾಗೂ ತಲ್ಲೂರು ಅವರು “ಆರ್ಥಿಕತೆ” ವಿಷಯದಲ್ಲಿ ರಚಿಸಿದ ಕಲಾಕೃತಿಗಳ ಚಿತ್ರಗಳು ಇವೆ.

ಸಮಾರಂಭದಲ್ಲಿ ಬೆಂಗಳೂರಿನ ಕಲಾ ವಿಮರ್ಶಕ ಗಿರಿಧರ ಖಾಸನೀಸ್, ಖ್ಯಾತ ಛಾಯಾಗ್ರಾಹಕ ಮಲ್ಲಿಕಾರ್ಜುನ ಕಡಕೋಳ, ಕಲಾವಿದೆ ಶಾಂತಾಮಣಿ, ಇಂಗ್ಲಂಡಿನ ಕ್ಯುರೇಟರ್ ಮೇರಿ ಜಾರ್ಜ್, ಮುಂಬಯಿಯ ಕಲಾವಿದ ಭುವನೇಶ್, ಪತ್ರಕರ್ತ ಸತೀಶ್ ಚಪ್ಪರಿಕೆ, ಉಡುಪಿ ಜಂಗಮ ಮಠದ ಡಾ| ಯು. ಸಿ. ನಿರಂಜನ, ಗ್ಯಾಲರಿಸ್ಟ್ ಡಾ|ಕಿರಣ ಆಚಾರ್ಯ, ಛಾಯಾಗ್ರಾಹಕ ಡಾ| ಕೃಷ್ಣಮೋಹನ್, ಸಂವಹನ ತಜ್ಞ ಶ್ರೀ. ರಾಜೇಂದ್ರ ಬೇಂದ್ರೆ, ಹಿರಿಯ ಕಲಾವಿದ ರಮೇಶ್ ರಾವ್, ಕಲಾವಿದರಾದ ಸಕುಪಾಂಗಾಳ, ಪುರುಶೋತ್ತಮ ಅಡ್ವೆ, ರಾಜೇಂದ್ರ ಕೇದಗೆ, ಕುಸುಮಾಧರ ಸೋನ ಮತ್ತಿತರ ಹಲವು  ಕಲಾವಿದರು, ಕಲಾಸಕ್ತರು ಪಾಲ್ಗೊಂಡಿದ್ದರು.

 

 

‍ಲೇಖಕರು Avadhi GK

February 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Rajendra Bendre

    A truly commendable achievement that makes us proud. An artist who does not compromise on the language that his heart speaks!

    Contemporary art that subtly lures the observer into being part of the art! Of course the work of a maestro…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: