ತಲೆ ಬಾಚ್ಕಳ್ಳಿ, ಪೌಡರ್ ಹಾಕೊಳ್ಳಿ..

ರಶ್ಮಿ ತೆಂಡುಲ್ಕರ್ 

rashmi tendulkar2ಬಾಲ್ಯದಲ್ಲಿ ಫೋಟೋ ತೆಗೆಸೋಕೆ ಅಂತ ಸ್ಟುಡಿಯೋಗೆ ಹೋಗುವ ಸಂಭ್ರಮವೇ ಬೇರೆ.

ಮನೆಯಿಂದ ರೆಡಿಯಾಗಿ ಹೋದರೂ, ಫೋಟೋಗ್ರಾಫರ್ ಹೋಗಿ ತಲೆ ಬಾಚ್ಕಳ್ಳಿ, ಪೌಡರ್ ಹಾಕೊಳ್ಳಿ ಅಂತಿದ್ದ. ಪೌಡರ್ ಹಾಕಿದ್ರೆ ತುಂಬಾ ಚೆನ್ನಾಗಿ ಫೋಟೋ ಬರುತ್ತದೆ, ಅಷ್ಟೇ ಅಲ್ಲ ಬೆಳ್ಳಗೆ ಕಾಣುವುದು ಮುಖ್ಯವಾಗಿತ್ತು. ಆ ಮೇಕಪ್ ರೂಮ್ ನಲ್ಲಿ cuticura ಪೌಡರ್ ಡಬ್ಬ ಮತ್ತು ಒಂದೆರಡು ಬಾಚಣಿಗೆ ಇರ್ತಿತ್ತು. ಅಮ್ಮ ಅದನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಕೂದಲು ಏನೂ ಆಗಿಲ್ಲ, ಪೌಡ್ರು ಹಾಕೊಳ್ಳುವುದೂ ಬೇಡ ಎಂದು ಫೋಟೋ ತೆಗೆಯಲು ರೆಡಿಯಾಗುತ್ತಿದ್ದೆವು.
ಫೋಟೋ ಯಾವುದೇ ಆಗಿರಲಿ, ಅಲ್ಲಿವರೆಗೆ ಸರಿಯಾಗಿ ಇದ್ದವಳಿಗೆ ಕ್ಯಾಮೆರಾ ರೆಡಿ ಆಗುತ್ತಿದ್ದಂತೆ ಪುಕುಪುಕು. ಕ್ಲಿಕ್ ಆಗುವ ಹೊತ್ತಿಗೆ ಕಣ್ಣು ಮುಚ್ಚಿ ಬಿಡುತ್ತೇನೋ ಎಂಬ ಭಯ. ಈ ಭಯದಿಂದಲೇ ಕೆಲವೊಂದು ಫೋಟೋದಲ್ಲಿ ಕಣ್ಣರಳಿಸಿರುವ ಫೋಟೋ, ಇನ್ನು ಕೆಲವುದರಲ್ಲಿ ಕಣ್ಣು ಮುಚ್ಚಿರುವುದೂ ಇದೆ. ಅದರಲ್ಲೂ ಬ್ಲಾಕ್ rashmi tendulkar with dadಆ್ಯಂಡ್ ವೈಟ್ ಫೋಟೋ ಅಂದ್ರೆ ನನಗೆ ಬಲು ಇಷ್ಟವಾಗಿತ್ತು. ಅಪ್ಪನ ಜತೆ ಫೋಟೋ ತೆಗೆದುಕೊಳ್ಳಲು ಹೋದ್ರೆ ಅಪ್ಪ ಪೌಡ್ರು ಹಾಕೋ ಅಂತಿದ್ರು…ಆದ್ರೆ ಯಾವುದೇ ಕಾರಣಕ್ಕೂ ಅಲ್ಲಿರುವ ಪೌಡ್ರು ಹಾಕಿಕೊಳ್ಳಲೇ ಬಾರದು. ಅದರಲ್ಲಿ ಕೀಟಾಣು ಇದೆ ಎಂದು ಅಮ್ಮ ಹೇಳುತ್ತಿದ್ದರು.

ಫೋಟೋ ತೆಗೆಯುವಾಗ ನೀನು ಕಣ್ಣು ಮುಚ್ಚಬೇಡ, ನೇರ ನೋಡ್ಬೇಕು…ಒಂದು ಫೋಟೋ ಆದ್ರೂ ಸರಿ ಬರ್ಲಿ ಅಂತ ಉಪದೇಶ ಸಿಗುತ್ತಲೇ ಇತ್ತು. ಅಪ್ಪನಂತೂ ಕುತ್ತಿಗೆ ಆ ಕಡೆ, ಈ ಕಡೆ, ಸ್ವಲ್ಪ ನಗು..ಹಲ್ಲು ಪೂರ್ತಿ ತೋರಿಸ್ಬೇಡ ಹಾಗೆ ಹೀಗೆ ಎಂದು ಹೇಳಿ ಕ್ಯಾಮೆರಾ ಮುಂದೆ ಕೂರಿಸುತ್ತಿದ್ದರು.

ಮೊನ್ನೆ ಮನೆಗೆ ಹೋದಾಗ ಅಪ್ಪನಿಗೆ ಸೆಲ್ಫಿ ಕ್ಲಿಕ್ಕಿಸುವುದು ಕಲಿಸಿ ಕೊಡ್ತಿದ್ದೆ. ಹಾಗೆ ನೋಡ್ಬೇಡಿ, ಕ್ಯಾಮೆರಾ ಇರುವುದು ಇಲ್ಲಿ..ಇಲ್ಲಿ ನೋಡಿ, ಮೊಬೈಲ್ ಕೈಯಲ್ಲಿ ಹಿಡಿದು ಸುಮ್ನೆ ನಗಬೇಕು ಹಾಗೆ ಅಲ್ಲಿ ಕ್ಲಿಕ್ ಮಾಡ್ಬೇಕು ಎಂದೆಲ್ಲಾ ಹೇಳಿ ಕೊಟ್ಟೆ. ಅದ್ಯಾವುದು ಸರಿ ಬರಲೇ ಇಲ್ಲ. ಕೊನೆಗೆ ಟೈಮರ್ ಇಟ್ಟು ಈಗ ಫೋನ್ ಕೈಯಲ್ಲಿ ಹಿಡಿದು ಸ್ಮೈಲ್ ಕೊಡಿ ಅಂದೆ. ಅಪ್ಪ ನಕ್ಕರು…ಹಾಗೆ ಅಪ್ಪನ ಮೊದಲ ಸೆಲ್ಫಿ ಕ್ಲಿಕ್ಕಿಸಿದ್ದಾಯ್ತು…

ಪೋಸ್ ಕೊಡೋಕೆ ನಿನ್ನಪ್ಪನೇನು ಕಮ್ಮಿಯಿಲ್ಲ ಅಂದ್ರು ಅಮ್ಮ…

ನಾ ಸೆಲ್ಫಿ ಕ್ಲಿಕ್ಕಿಸಿದೆ ನೋಡಿಲ್ಲಿ ಎಂದು ಅಪ್ಪ ಫೋಟೋ ತೋರಿಸಿದ್ರು… ಸ್ಟುಡಿಯೋದಲ್ಲಿ ಫೋಟೋ ತೆಗಿಸಿ ಅದರ ಕಾಪಿ ತಂದಾಗ ಖುಷಿಯಿಂದ ನೋಡಿ ನಗುತ್ತಿದ್ದ ಬಾಲ್ಯದ ಆ ನಗು..ಅಪ್ಪ ಅಮ್ಮನ ನಗುವಿನಲ್ಲಿ ಮತ್ತೆ ಕಾಣಿಸಿಕೊಂಡಿತು.

‍ಲೇಖಕರು Admin

February 10, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಶಮ, ನಂದಿಬೆಟ್ಟ

    ನೀ ಹೀಗೆ ಬರೆಯೋದು ಬದುಕನ್ನ ಮೊಗೆ ಮೊಗೆದು ಕುಡಿಯೋದು ಕಂಡಾಗೆಲ್ಲ ಅಸಿಡಿಟಿ ಕಣೆ ಸುಂದ್ರೀ

    ಪ್ರತಿಕ್ರಿಯೆ
  2. sangeetha raviraj

    ಆಪ್ತವಾಯಿತು ಬರಹ. ನನ್ನ. ಅನುಭವ ವು ಹೀಗೆಯೆ ಸುಮಾರಾಗಿ ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: