ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತತ್ರಾಣಿಯಂತ ಬೆಂದ  ಜೀವ ನಿನ್ನದು..

ಅವ್ವ ಅದೊಂದು ಅದ್ಭುತ ಭಾವ

ಮೌನೇಶ ಕನಸುಗಾರ

ಹೃದಯದಳು ಕೇಳತಿಲ್ಲವೇಕಿಮನಕೆ
ಕೋಪ-ತಾಪಗಳ ತಾಳಿ
ಬದುಕುತಿರುವ ಜೀವಕೆ..!

ಅವ್ವನ ಕಣ್ಣಿನಂಚಿನ ಕಂಬನಿ
ಜಾರುತಿರೆ ಜಲಪಾತವೆ ಜಾರಿದ
ಭಾಸ ಕಣ್ಣೆಂಬ ಕಣಿವೆಯಿಂದ..!

ಯಾವತ್ತು ಉಪ್ಪು ಅಲೆಯೊಂದನು
ಈ ಹೃದಯದಡಿಗೆ ಅಪ್ಪಳಿಸದಿರಮ್ಮ
ಬಡಿತ ನಿಲ್ಲಲುಬಹುದು.!

ನಿನ್ನೊಡಲ ಮಡಿಲಲಿ
ಕುಳಿತು ತುತ್ತು ಅನ್ನವ ತಿನ್ನುವಾಸೆ
ಯಾಕೊ ಇವತ್ತು ಊಟಕ್ಕೆ
ಉಪ್ಪು ಹೆಚ್ಚಾದಂತಾಗಿದೆ..!
ಕಣ್ಣೀರು ಬೆರತಂತಿದೆ..!

ಅಮ್ಮನೆಂಬ ಭಾವಕೆ
ತುಟಿ ಕಂಪಿಸಿವೆ
ಕಣ್ಣ ತೇವಗೊಂಡಿವೆ
ಕೈಗಳೆಕೊ ಭಾವದಾಕ್ಷರಗಳ
ಮೊರೆ ಹೋಗುತಿವೆ..!

ಮೊದಲ ನೋಟದ ಪ್ರೇಮಕ್ಕೂ
ಹೆಚ್ಚು ನಿ..
ಕಲ್ಪನೆಯಲಿಯೆ ಪ್ರೀತಿಯ
ಧಾರೆಯೆರೆದವಳು..!
ಇರುವಾಗ ನಿನ್ನೊಡಲೊಳು..!

ನಿನಗೆರಡು ಗುಂಡಿಗೆ ನಿನ್ನ
ಒಡಲೊಳಗೆ ನಾನಿರುವಾಗ
ಮೆಚ್ಚಲೆ ಬೇಕಮ್ಮ ಕರುಳ
ಬಳ್ಳಿಯ ಹುರಿ ಕೊಯ್ದು
ಜನ್ಮವಿತ್ತಾಗ..!

ತತ್ರಾಣಿಯಂತ ಬೆಂದ
ಜೀವ ನಿನ್ನದು
ನಮಗೆಲ್ಲಾ ಪ್ರೀತಿ
ಧಾರೆಯೆರೆದವಳು..!

ಕಂದೀಲ ಬೆಳಕಿಗೆ ಸುಟ್ಟ ಬತ್ತಿಯ
ಬಾಳು ನಿನ್ನದು
ಆ ಬೆಳಕುಂಡು ಬೆಳೆದ
ಬದುಕು ನನ್ನದು‌..!

ಕುಡುಗೋಲ ಹಿಡಿಯು ಹಿಡಿದಿಟ್ಟಿದೆ
ನಿನ್ನ ಬೆರಳಚ್ಚು..!
ನಾ ಕಂಡಾಗ ಕಳೆ ಕಳೆದ
ಹೊಲದಂಚು..!

ಮಿಂಚಿತ್ತು ಎದೆ ಹಾಲು ತಾಕಿ
ನನ್ನೀ ತುಟಿಯು.!
ಎಳೆ ಬಿಸಿಲು ನೆಲ ಸೋಕುವ
ಮುನ್ನ
ಸಮುದ್ರ ಮಂಥನದಿ ಬಂದ
ಅಮೃತಕೂ ಹೆಚ್ಚು ಆ ಪಾನ..!

ಪದಗಳೆಲ್ಲಿಂದ ಹುಡುಕಲಿ
ನಿನ್ನ ಬಗ್ಗೆ ಬರೆಯಲು
ಗ್ರಂಥವೂ ಕಡಿಮಿಯಾದಿತು
ನಿನ್ನೊಡಲ ಪ್ರೀತಿ-ನೋವಿಗೂ..!

‍ಲೇಖಕರು avadhi

15 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading