ಗೆಳೆಯರೇ, ನಾನು ಮುಂಬಯಿಯಲ್ಲಿ ಎಂ.ಎ. ಮಾಡುತ್ತಿದ್ದ ಸಂದರ್ಭದಲ್ಲಿ ಬರೆದ ಕವಿತೆ ಇದು. ಬಳಿಕ ನನ್ನ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು’ ಕೃತಿಯಲ್ಲಿ ಈ ಕವನ ಪ್ರಕಟಗೊಂಡಿತು. 1996ರಲ್ಲಿ ಈ ಕೃತಿಗೆ ‘ಮುದ್ದಣ ಕಾವ್ಯ ಪ್ರಶಸ್ತಿ’ಯೂ ದೊರಕಿತ್ತು.
ನನ್ನ ತೀರಾ ಹಳೆಯ ಈ ಕವಿತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಹಂಚಿಕೊಂಡಿದ್ದೇನೆ.
-ಬಿ ಎಂ ಬಷೀರ್
ಗುಜರಿ ಅಂಗಡಿ
ನನ್ನ ಪುಟ್ಟ ತಂಗಿಗೀಗ ತಿಳಿದು ಹೋಗಿದೆ
ನಾ ಕೊಟ್ಟ ನವಿಲು ಗರಿಗೆ ಎಂದೂ
ಜೀವ ಬರುವುದಿಲ್ಲ ಎಂದು
ಪತ್ರದಲ್ಲಿ ತಿಳಿಸಿದ್ದಾಳೆ
ನಾನೀಗ ಬೆಳೆದಿದ್ದೇನೆ!
ಹಾರಿ ಬಿಟ್ಟ ಗಾಳಿಪಟ
ದೈತ್ಯ ವೃಕ್ಷದ ಎದೆಗೂಡೊಳಗೆ ಸಿಕ್ಕಿ
ಹರಿದು ಚೆಲ್ಲಾಪಿಲ್ಲಿಯಾದ ಬಗೆ;
ನಿನ್ನೆಯ ಮುಂಗಾರು ಮಳೆ ತಿಳಿಸಿ ಹೋಗಿದೆ…
ನೀ ಕೊಟ್ಟ ಕಾಗದದ ದೋಣಿ
ಅದರೊಳಗೇ ಕರಗಿ ಕಡಲ ಸೇರಿದೆ!
–
ತಿಳಿಸಿದ್ದಾಳೆ-
ಏಳು ಕೋಟೆಯ ಒಳಗಿರುವ
ಮಲ್ಲಿಗೆ ತೂಕದ ರಾಜಕುಮಾರಿ
ಕುದುರೆಯೇರಿ ಬರುವ ರಾಜಕುವರನ
ಕಾದು-ಸೋತು
ತಾನೇ ಕೋಟೆಯೇರುವ ಹುನ್ನಾರ ನಡೆಸಿದ
ಹೊಸ ಕಥೆ!
ಪಶ್ಚಿಮದ ಗಾಳಿ ಅವಳ ಕೆನ್ನೆ ಸವರಿ
ಉಸುರಿದ ಬಗೆ
ತಿಳಿಸಿದ್ದಾಳೆ ಪತ್ರದಲ್ಲಿ….
–
ನೀ ಮುತ್ತಿಕ್ಕಿದ ಹಾಲ್ಗೆನ್ನೆಯಲ್ಲೀಗ
ಮೊಡವೆಯೆದ್ದು ಕೀವು ತುಂಬಿದೆ
ಅದೀಗ ಒಡೆಯುವುದಕ್ಕೆ ಕಾದು ನಿಂತಿದೆ!]]>
ತಂಗಿ ಬರೆದಿದ್ದಾಳೆ..
ನಿಮಗೆ ಇವೂ ಇಷ್ಟವಾಗಬಹುದು…




ಬೆಳದಾಗ ಬಂದ ಹಿಂದಿನ ನೆನಪು.,ಚೆನ್ನಾಗಿದೆ
ಬಹಳ ಮುದ್ದಾಗಿದೆ ಕವನ..
nice one