ಡೈಲಿ ಬುಕ್ : ಹನುಮಂತ ಹಾಲಿಗೇರಿಯವರ ’ಊರು ಸುಟ್ಟರೂ ಹನುಮಪ್ಪ ಹೊರಗ’

ಪುಸ್ತಕ ಬಿಡುಗಡೆ

ಹನುಮಂತ ಹಾಲಿಗೇರಿ ಅವರ ನಾಟಕ ’ಊರು ಸುಟ್ಟರೂ ಹನುಮಪ್ಪ ಹೊರಗ’ ಈಗ ಪುಸ್ತಕ ರೂಪದಲ್ಲಿ

ಪುಸ್ತಕದ ಮುಖಪುಟ, ಬೆನ್ನುಡಿ ಮತ್ತು ಬಿಡುಗಡೆಯ ದಿನ ನಟರಾಜ ಹೊನ್ನವಳ್ಳಿ ಅವರು ಆಡಿದ ಮಾತು ’ಅವಧಿ’ ಓದುಗರಿಗಾಗಿ


ಎಲ್ಲರಿಗೂ ನಮಸ್ಕಾರ. ವೇದಿಕೆ ಮೇಲಿರುವ ಕನ್ನಡದ ಮುಖ್ಯ ಕವಿಗಳು ಮತ್ತು ಸಂಸ್ಕೃತಿ ಚಿಂತಕರಾದ ಶ್ರೀ ಎಸ್. ಜಿ. ಸಿದ್ದರಾಮಯ್ಯನವರೇ, ಇನ್ನೊಬ್ಬರು ಬಹುಕಾಲದ ಪತ್ರಕರ್ತ ಮಿತ್ರರಾದ ಶ್ರೀ ದಿಲಾವರ್ ರಾಮದುರ್ಗರವರೇ, ನಾಟಕಕಾರರಾಗಿ ರಂಗಭೂಮಿಗೆ ನಾಟಕ ರಚನೆಯ ಮೂಲಕ ಪ್ರವೇಶ ಪಡೆದಿರುವ ಶ್ರೀ ಹನುಮಂತ ಹಾಲಗೇರಿಯವರೇ ಮತ್ತು ನನ್ನ ಸ್ನೇಹಿತರೆ. ಕನ್ನಡದ ಕತೆಗಾರರೂ ಆಗಿರುವ ಶ್ರೀ ಹನುಮಂತು ಹಾಲಗೇರಿಯವರ ‘ಊರು ಸುಟ್ಟರೂ ಹನುಮಪ್ಪ ಹೊರಗೆ’ ನಾಟಕವನ್ನು ನಾನು ಈ ದಿನ ಬಹು ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ. ಆದರೆ ಕನ್ನಡದ ಹೊಸ ತಲೆಮಾರಿನ ನಿದರ್ೇಶಕರಾದ ಶ್ರೀ ಹಡಪದ್ ಮತ್ತು ಶ್ರೀ ಯತೀಶ್ ಚಾಮರಾಜನಗರ ಮತ್ತವರ ನಟ-ನಟಿಯರ ತಂಡ ಜನಮಾನಸದ ಮುಂದಿಟ್ಟು ಹತ್ತಾರು ಪ್ರದರ್ಶನ ಕೊಡುವ ಮೂಲಕ ಈಗಾಗಲೇ ಈ ನಾಟಕವನ್ನು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ನನ್ನ ಈ ಬಿಡುಗಡೆ ಒಂದು ರೀತಿಯ ಸಾಂಕೇತಿಕ. ಜನರ ಮುಂದೆ ಬಿಡುಗಡೆ ಪಡೆದು ಪಾಸಾಗುವ ಭಾಗ್ಯ ಎಲ್ಲ ನಾಟಕಾರರಿಗೂ, ಎಲ್ಲಾ ನಾಟಕಕ್ಕೂ ಸಿಕ್ಕುವುದಿಲ್ಲ. ಅಂತಹ ವಿಶೇಷ ಭಾಗ್ಯವನ್ನು ಪಡೆದ ಈ ನಾಟಕ-ರಂಗಭೂಮಿಯ ಒಳಗೆ ಬಂದು ನಾಟಕ ರಚನೆಗೆ ಬೇಕಾದ ಹೊಸ ಲಯವನ್ನು, ವಸ್ತು-ವಿಶೇಷಗಳನ್ನು ನವೀನ ಪಾತ್ರ ಮಾದರಿಗಳನ್ನು ತರಲು ಪ್ರಯತ್ನಿಸಿದಂತಿದೆ ಎಂದು ಈ ನಾಟಕ ಓದುವ ಮೂಲಕ ನನಗೆ ಅನ್ನಿಸಿದೆ. ಹಾಗಾಗಿ ಮೊದಲಿಗೆ ನಾಟಕಾರರಿಗೆ ಅಭಿನಂದಿಸುತ್ತೇನೆ.
ನಾಟಕ ಅಥವಾ ಕಾವ್ಯ ಅನ್ನುವುದು ಮಾತು ಅಥವಾ ಸಂಭಾಷಣೆಗಳ ಮೊತ್ತವಲ್ಲ; ಬದಲಾಗಿ ಎಲ್ಲ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ರೀತಿನೀತಿಯ ಅಪೇಕ್ಷೆ, ಬದುಕು, ಆಕಾಂಕ್ಷೆ, ದುರಂತಗಳ, ಪಲ್ಲಟಗಳ ಪ್ರತಿಮೆಯಾಗಿ, ರೂಪಕವಾಗಿ, ಎಣಥಣಚಿಠಿಠಣಠಟಿಗಳ ಒಟ್ಟು ಮೊತ್ತವಾಗಿ ತನ್ನನ್ನೇ ತಾನು ರೂಪಿಸಿಕೊಂಡಿದ್ದರ ವಿರಾಟ್ ಕಥನ ಇದು. ನಾಟಕವನ್ನು ಕೃತಿಕಾರ ರೂಪಿಸಿದ್ದರೂ ಮೇಲಿನವುಗಳೆಲ್ಲ ಸೇರಿ ಆ ಕೃತಿಯನ್ನು ರೂಪಿಸಿರುತ್ತದೆ ಎಂಬುದು ಅಷ್ಟೇ ಸತ್ಯ. ಈ ರೀತಿಯ ಸಿಂಥಿಸಿಸ್ ಬರೀ ಸಾಹಿತ್ಯಕ್ಕಷ್ಟೇ ಅಲ್ಲದೆ ರಾಜಕಾರಣಕ್ಕೂ, ಇತರ ಕಲೆಗಳಿಗೂ ಕೂಡ ಸಂಬಂಧ ಪಟ್ಟಿರುತ್ತದೆ.
ಯಾವುದೇ ಸಾಹಿತ್ಯ ಕೃತಿ ರೂಪುಗೊಳ್ಳಲು ಆ ಕೃತಿಯ ಒಡಲೊಳಗೆ ಅಂದಿನ ಸಮಾಜ, ರಾಜಕಾರಣ, ಸಾಂಸ್ಕೃತಿಕ ಪರಿಪ್ರ್ಯೇಕ್ಷದಲ್ಲಿ ನಡೆಯುವ ಎಲ್ಲ ವಿದ್ಯಮಾನಗಳು ಯಾವುದ್ಯಾವುದೋ ರೂಪಗಳ ಮೂಲಕ ಹಾಜರಾಗಿರುತ್ತವೆ ಎಂಬುದು ಮುಖ್ಯವಾದ ವಿಚಾರ. ಆ ಕೃತಿಕಾರ ತನ್ನ ಸಿದ್ಧಾಂತಗಳಿಗೆ ಬದ್ಧನಾಗಿ ಆ ಕೃತಿಯನ್ನು ರೂಪಿಸುತ್ತಿದ್ದರೆ ಆ ಕೃತಿಯು ಒಂದು ರೀತಿಯ ಬಂಧನಕ್ಕೆ ಒಳಗಾದಂತೆ ವತರ್ಿಸುತ್ತಿರುತ್ತವೆ ಜೊತೆಗೆ ಕಪ್ಪು ಬಿಳುಪು ಬದುಕನ್ನಷ್ಟೇ ಸೃಷ್ಟಿಸುತ್ತದೆ. ಹಾಗಾಗಿ ಕೃತಿಕಾರ ಘನವಾದ ಮನಸ್ಸಿನವನೂ, ಸರಳವಾದ ತೀಮರ್ಾನಕ್ಕೆ ಬರದಂತವನೂ, ವಿಶಾಲ ದೃಷ್ಟಿಯವನೂ ಎಲ್ಲವನ್ನೂ ವ್ಯವಧಾನದಿಂದ ನೋಡುವವನೂ, ತನ್ನನ್ನು ತಾನೇ ಈ ಜಗತ್ತಿನ ಜೊತೆ ಠಿಡಿಠಛಟಜಟಚಿಣದಜ ಮಾಡಿಕೊಳ್ಳುವವನೂ, ಅತ್ಯಂತ ಸೂಕ್ಷ್ಮ ಮನಸ್ಸಿನವನೂ ಆಗಿರಬೇಕಾಗುತ್ತದೆ. ಹಾಗಾದಾಗ ಆ ಕೃತಿಯೊಂದು ಸಮಾಜದ ಜೊತೆ ಸೇರಿಹೋಗುತ್ತದೆ, ಆ ಕೃತಿ ಹಾಗೂ ಸಮಾಜ ಸಹ ಬಾಳ್ವೆ ಮಾಡುತ್ತದೆ.
ಈ ದಿನ ಬಿಡುಗಡೆಯಾಗಿರುವ ನಾಟಕ ‘ಊರು ಸುಟ್ಟರೂ ಹನುಮಪ್ಪ ಹೊರೆಗೆ’ ದೇವರು-ಧರ್ಮ, ಆಸ್ತಿಕ-ನಾಸ್ತಿಕ ಸಂಘರ್ಷವನ್ನು ಮುಖ್ಯ ಭಿತ್ತಿಯಾಗಿ ಇಟ್ಟುಕೊಂಡಿರುವ ಈ ನಾಟಕ ಒಂದು ಪ್ರಹಸನ ರೂಪದಲ್ಲಿದೆ. ದೇವರು, ಧರ್ಮ, ಊರು, ಜನ, ಜಾತಿ-ವರ್ಗ ಎಲ್ಲವನ್ನೂ ಲೇವಡಿ ಮಾಡುತ್ತಾ, ವಿಡಂಬಿಸುತ್ತಾ ಸಾಗುವ ಈ ನಾಟಕ ಒಂದು ರೀತಿಯಲ್ಲಿ ಸಮಕಾಲೀನ ರಾಜಕೀಯ ನಾಟಕದ ಮಾದರಿಯಲ್ಲಿದೆ, ದೇವರು, ಧರ್ಮ, ದೇವಸ್ಥಾನದ ಜಗಳ-ಸಂಘರ್ಷಗಳು ಇನ್ನೂ ನಡೆಯುತ್ತಿರುವ ಈ ಹೊತ್ತಿನ ಇಂಡಿಯಾದಲ್ಲಿ ಈ ನಾಟಕದ ಪಾತ್ರಧಾರಿ ಹುಚಮಲ್ಲನ ಮೂಲಕ ಹೊಸ ತಾತ್ವಿಕ ಪ್ರಶ್ನೆಗಳನ್ನೆತ್ತುವ ಧೈರ್ಯವನ್ನು ತೋರಿಸುತ್ತದೆ. ಹಾಗಾಗಿ ಈ ನಾಟಕ ಮೊದಲ ಓದಿನಲ್ಲಿಯೇ ಗಮನ ಸೆಳೆಯುತ್ತಾ ಹೋಗುತ್ತದೆ. ಜೊತೆಗೆ ಈ ನಾಟಕದುದ್ದಕ್ಕೂ ಬಳಸುವ ಬಾಗಿಲಕೋಟೆಯ ಜವಾರಿ ಕನ್ನಡ ಭಾಷೆ ಕಿವಿಗೆ ಬಿದ್ದು ಕನ್ನಡದ ಹೊಸ ಭಾಷಾ ಲಯವನ್ನು ಕೇಳಿದ ಬೆರಗನ್ನು ಹುಟ್ಟಿಸುತ್ತದೆ.
ಈ ನಾಟಕದಲ್ಲಿ ಎರಡು ಊರುಗಳ ನಡುವಿನ ದೇವರ ಜಗಳ ಮನೆ-ಮನದ ಜಗಳವಾಗಿ, ಜನ-ಜನರ ಜಗಳವಾಗಿ, ಜನ-ಪ್ರಭುತ್ವದ ಜಗಳವಾಗಿ ಕೊನೆಗೆ ದೇವರಿಗೆ ನಿಲ್ಲಲು ನೆಲೆಯಿಲ್ಲದೆ ಅನಾಥವಾಗುವ ಪರಿ ಈ ನಾಟಕದಲ್ಲಿದೆ. ದೇವರಿಲ್ಲದ ಭೀತಿಯಿಂದ ಶುರುವಾಗುವ ಊರ ಜಗಳ ದೇವರನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದು ಮುಟ್ಟುತ್ತದೆ. ಈ ಹಿಂದೆ ಕನ್ನಡದಲ್ಲಿ ಎರಡು ಮುಖ್ಯ ಕತೆಗಳನ್ನು ಓದಿದ್ದು ನನಗೆ ನೆನಪಾಗುತ್ತದೆ. ಒಂದು; ಮಾಸ್ತಿಯವರ ‘ಇಲ್ಲಿಯ ತೀಪರ್ು’ ಮತ್ತು ಎರಡು; ಶ್ರೀ ಕೃಷ್ಣ ಆಲನಹಳ್ಳಿಯವರ ‘ಸುಟ್ಟ ತಿಕದ ದೇವರು’. ಆದರೆ ಈ ಎರಡು ಕತೆಗಳಿಗೂ ಪ್ರಸ್ತುತ ಈ ನಾಟಕ ಸಂಬಂಧವಿಲ್ಲ. ಆದರೆ ಈ ಮೂರು ಕತೆಗಳು ದೇವರನ್ನು ಕುರಿತ ಲಘು ವಿನೋದದ ಕತೆಗಳು ಜೊತೆಗೆ ಹೊಸ ತಾತ್ವಿಕ ಪ್ರಶ್ನೆಗಳನ್ನು ಎತ್ತಿದ ಕತೆಗಳೂ ಎಂದು ಹೇಳಬಹುದು. ಹಾಗೆಯೇ ಜಿ. ಬಿ. ಜೋಷಿಯವರ ನಾಟಕ ‘ಆ ಊರು ಈ ಊರು’ ಕೂಡ ನೆನಪಿಗೆ ಬರುತ್ತದೆ. ಆದರೆ ಆ ಊರು ಈ ಊರು ನಾಟಕ – ಎರಡು ಊರುಗಳ ಜನರ ಸಂಬಂಧವನ್ನು ಶೋಧಿಸುವ ನಾಟಕ.
ದೇವರು, ಧರ್ಮದ ಜೊತೆಗಿನ ಜನರ ಮಾತು- ಕ್ರಿಯೆ, ಒಡನಾಟ, ಆಚರಣೆ ಇವತ್ತು ನಿನ್ನೆಯದಲ್ಲಿ. ಅದಕ್ಕೆ ಮನುಷ್ಯನ ಹುಟ್ಟಿನಷ್ಟೇ ದೀರ್ಘ ಇತಿಹಾಸವಿದೆ. ವೈದಿಕ ಸಂಪ್ರದಾಯ ದೇವರನ್ನ ಊಧ್ರ್ವಮುಖಿಯಾಗಿ ಕಲ್ಪಿಸಿಕೊಂಡು ಅದರ ಜೊತೆ ಒಡನಾಡಿದರೆ; 12ನೇ ಶತಮಾನದ ನಮ್ಮ ವಚನ ಚಳವಳಿ ದೇವರನ್ನು ಭೂಮಿಗಿಳಿಸಿದ್ದು, ದೇವರ ಜೊತೆ ಆಪ್ತ ಮಾತುಕತೆ ಸಾಧ್ಯ ಎನ್ನುವುದನ್ನು ತಮ್ಮ ಕ್ರಿಯೆಯ ಮೂಲಕ ತೋರಿಸಿದರು. ಒಂದು ಪಂಥ ದೇವರ ಕೇಂದ್ರೀಕರಣದ ಬಗ್ಗೆ ಹೇಳಿದರೆ ಇನ್ನೊಂದು ದೇವರ ವಿಕೇಂದ್ರೀಕರಣದ ಬಗ್ಗೆ ತನ್ನ ಗಮನವನ್ನು ಕೊಡುತ್ತದೆ. ಕುಂಬಾರ ಗುಂಡಯ್ಯನ ಮುಂದೆ ಬಂದು ಈಶ್ವರ ಕುಣಿಯುತ್ತಾನೆ ಎನ್ನುವುದು ದೇವರು ಮತ್ತು ಮನುಷ್ಯನ ಅನ್ಯೋನ್ಯ ಸಂಬಂಧದ ರೀತಿಯನ್ನು ತಿಳಿಸುತ್ತದೆ. ಒಡಿಸ್ಸಾದ ಪುರಿಯ ಜಗನ್ನಾಥ ದೇವರ ಸುತ್ತ ದಂಗೆಯ ಕಥೆಗಳೇ ತುಂಬಿವೆ. ‘ದಾರು ಪ್ರತಿಮಾ ನಾ ಪೂಜಿವೆ’ – ಅಂದರೆ ಕಟ್ಟಿಗೆ ದೇವರನ್ನು ಪೂಜಿಸುವುದಿಲ್ಲ ಅಂತ ಒಂದು ಅದಿವಾಸಿ ಪಂಗಡವೇ ದೇವರ ನಿರಾಕರಣೆಯನ್ನು ಮಾಡುತ್ತದೆ. ಆದರೆ ಹಾಲಿಗೇರಿಯವರ ನಾಟಕ ಇನ್ನೂ ಮುಂದೆ ಹೋಗಿ ದೇವರ ನಿರಾಕರಣೆಯ ಮಾರ್ಗವನ್ನು ಸೂಚಿಸಿಬಿಡುತ್ತಾರೆ.
ವಿನೋದದ ದಾಟಿಯಲ್ಲಿ ಪ್ರಾರಂಭವಾಗಿ ದುರಂತದ ಛಾಯೆಯಲ್ಲಿ ಮುಗಿಯುವ ಈ ನಾಟಕ ನೂರು ದೇವರುಗಳನ್ನೆಲ್ಲ ನೂಕಾಚೆ ದೂರ. . . .ಎನ್ನುವ ಆಶಯವನ್ನು ಒಪ್ಪಿ, ಮೆಚ್ಚಿದಂತಿರುವ ನಾಟಕಕಾರರು ಅಂದಂದಿನ ತುತರ್ಿಗೆ ಬದ್ಧರಾಗಿ ಬರೆಯುವ ಹಂಗಿಗೆ ಒಳಗಾದವರಿಗೆ ಸಾಮಾನ್ಯವಾಗಿ ಪಾತ್ರಗಳ ರಚನೆ ಏಕೋರೂಪಿಯಾಗುವ ಅಪಾಯವನ್ನು ಎದುರಿಸಿದ್ದಾರೆ. ಈ ಏಕರೂಪತೆ ಪಾತ್ರ, ಮಾತು, ಕ್ರಿಯೆ, ನಂಬಿಕೆ ಎಲ್ಲಕ್ಕೂ ವ್ಯಾಪಿಸಿ ಬರೀ ಕಪ್ಪು-ಬಿಳುಪಿನ ಚಿತ್ರವನ್ನಷ್ಟೇ ಕೊಡುತ್ತದೆ. ಪಾತ್ರಗಳ ಸೃಷ್ಟಿ, ಅದರ ಚಲನೆ, ಪಾತ್ರದ ವಾಸ್ತವ ಇವುಗಳ ಮೇಲೆ ಗಮನಕೊಡದಿದ್ದರೆ ಮನುಷ್ಯನ ಸ್ವಭಾವದ ಚಿತ್ರಣ ಕಷ್ಟವಾಗಿ ಬಿಡುತ್ತದೆ. ಈ ನಾಟಕದಲ್ಲಿಯೂ ಕೂಡ ಈ ಅಪಾಯಗಳು ಇವೆ. ಆದರೆ ಅದನ್ನು ಮೀರುವ ಸೂಚನೆಯೂ ನಾಟಕದಲ್ಲಿದೆ.
 

‍ಲೇಖಕರು G

April 6, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: