ಟೈಮ್ ಪಾಸ್ ಕಡ್ಲೆ ಕಾಯ್ : show ಬನ್ ಗಯಾ ಸರ್ಕಾರ್ !

ಸೂತ್ರಧಾರ ರಾಮಯ್ಯ

u.p.ಗೆ ಸೇರಿದ ದೌಂಡಿಯ ಖೇಡದ ದೇವಾಲಯದ ಮುಂದೆ, ಇಪ್ಪತ್ತು ‘ಮೀಟರ್’ ಆಳದಲ್ಲಿ, ಒಂದು ‘ಔನ್ಸ್’ ಕಡಿಮೆ ಇರದಂತೆ ಬರೋಬ್ಬರಿ ಒಂದು ಸಾವಿರ ‘ಟನ್’ ಚಿನ್ನವನ್ನು ಹುದುಗಿಸಿಡಲಾಗಿದೆ. ಅದನ್ನು ಅಗೆದು ತೆಗೆದು ಸದ್ವಿನಿಯೋಗ ಮಾಡಿ ಅಂತಾ ಸತ್ ಪುರುಷರೊಬ್ಬರು ಸಾಧು ಶೋಬನ್ ಸರ್ಕಾರ್ ಅವರ ಕನಸಲ್ಲಿ ಬಂದು ಹೇಳಿದ್ದೇ ತಡ, ಈ ಕಾರ್ಯ ಸಾಧುವೆ? ಎಂದೂ ಯೋಚಿಸದ ಆ ಸನ್ಯಾಸಿ ತನ್ನ ಅಪಾರ ಪ್ರಭಾವ ಬಳಸಿದ್ದು ಎಷ್ಟೆಂದರೆ, ಸಾಮಾನ್ಯ ಜನವಿರಲಿ-ಸ್ವಯಂ ಕೇಂದ್ರ, ರಾಜ್ಯ ಸರ್ಕಾರಗಳೇ ಕಾರ್ಯತತ್ಪರವಾದವು. ತನ್ನ ಬದುಕಲ್ಲಿ ಪೂರಾ ತತ್ವ ಹೇಳಿಕೊಂಡಿರಬೇಕಿದ್ದ ಸಾಧು ಪುರಾತತ್ವ ಇಲಾಖೆಗೇ ನಂಬಿಕೆ ‘ಮೂಢ’ ಸಿದ್ದು ಸೋಜಿಗವೇ ಸೈ! ‘ಸರ್ವೆ’ಜನ ಸುಖಿ no ಭವಂತು ಎಂಬಂತೆ, ಪಾಪ! ಆರ್ಖಿಯಾಲಾಜಿಕಲ್ ಮತ್ತು ಜಿಯಾಲಾಜಿಕಲ್ ‘ಸರ್ವೆ ಜನಾ’ ಸಾಧುವಿನ ಎಮ್ಟಿ ನಂಬಿಕೆಗಳನ್ನು ಬಯಲಾಗಿಸಲು ಮಮ್ಟಿ ಹಿಡಿದು ಮಣ್ಣು ಬಗೆದರು! ಯೆಲ್ಲೋ ಮೆಟಲ್ ಮಹಿಮೆಯೇ ಹಾಗೆ; ಗೋರಿ, ಪಿರಮಿಡ್, ಕೊತ್ತಲ ಕೋಟೆ, ಹಾಳುಬಿದ್ದರಮನೆ ಅನ್ನದೆ, ಮನುಕುಲ ಅದರ ಹಿಂದೆ ಬಿದ್ದಿದೆ ಎಲ್ಲೋ; ಅದು ‘ಯೆಲ್ಲೋ’ ಅನ್ನುತ್ತ, ‘ತೋಡಿ’ ತೋಡಿ ರೋಗಾಲಾಪನೆಯಲ್ಲಿ ಗುಲ್ಲೆಬ್ಬಿಸುತ್ತಾ – ಮುಟ್ಟಿದ್ದೆಲ್ಲ ಚಿನ್ನವಾಗುವುದೇನೋ ಎಂಬ ಭ್ರಮೆಯಲ್ಲಿ!
ಅಲ್ಲಾ, ಇವರಿಗಾದರೂ ಬೇಡವೇ ತರ್ಕ? ಜಿಯಾ ಲಾಜಿಕಲ್ , ಆರ್ಕಿಯಾ ಲಾಜಿಕಲ್ ಅಂತಾ ಹೆಸರಿಟ್ಟುಕೊಂಡು, ಲಾಜಿಕಲ್ ಆಗಿ ಥಿಂಕ್ ಮಾಡದೆ, ಅನಾರ್ಕಿಯಲಾಜಿಕಲ್ಲಾದರಲ್ಲಾ! ಎಂದು ಕ್ರಿಟಿ ಕಲ್ಲಾಗಿ ಹೇಳುವಂತಾಗಿದೆ.

ಒಂದು ಸಣ್ಣ ಪ್ರಾಂತ್ಯದ ಅರಸು ಎಲ್ಲಿಂದ ತಂದಾ ಅಷ್ಟೊಂದು ಚಿನ್ನ? ಹದ್ದಿನ ಕಣ್ಣಿನ ಪರಂಗಿಗಳಿಗೆ ಕಾಣದಂತೆ ಅಷ್ಟು ಆಳದಲ್ಲಿ ಹೇಗೆ ಹುದುಗಿಸಿಟ್ಟ? Republic Of Bellari ಯ (ROB) ಬಹುMoney ಸುಲ್ತಾನರಿಂದ ಕೊಳ್ಳೆ ಹೊಡೆದಿದ್ದನೆ? ಇಲ್ಲಾ, ಬೆಂಗಳೂರು ಸುತ್ತಲೂ ಭೂಕಬಳಿಕೆ ಮಾಡಿ ಬಂಗಾರ ಬೆಳೆದಂತಾ ಪ್ರಭುತ್ವ ಏನಾದರು ಇತ್ತ ಅಲ್ಲಿನ ರಾಜಾ ರಾಮ್ ಭಕ್ಷಣೆಗೆ? ಎಂಬೆಲ್ಲ ತರ್ಕವನ್ನೇ ಮಾಡದೆ ಎರಡೂ ಇಲಾಖೆಯವರು ‘ಗಿಮ್ಮಿಕ್ಸ್’ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಸೇರಿಬಿಟ್ಟರಲ್ಲಾ! ತಪ್ಪೆವರದಿರಾ ಎಂದು ಕೇಳುತ್ತಿದ್ದಾರೆ ಲೆಫ್ಟ್ ತಿಂಕಿಂಗ್ ಜನ. ಯಾರೆಲ್ಲಾದರು ನೆಗೆದು ಬಿದ್ದ್ಹೋಗಲಿ, (ಅವರು ತೋಡಿದ ಗುಂಡಿಗೆ?) ಪ್ರಶ್ನೆ ಅದಲ್ಲ; u.p ಪ್ರಸ್ತುತವೂ, u.p.a ಹಾಸ ದಿಂದಲೂ ಕೂಡಿದ ದೌನ್ಡಿಯಾದ ಆಪರೇಶನ್ ಸಕ್ಸಸ್ ? ನಿಂದ ಸ್ಪೂರ್ತಿ ಪಡೆದು ಇಲ್ಲಿ , ನಮ್ಮ ಕರನಾಟಕದಲ್ಲಿ ಬೈಲಹೊಂಗಲದ ರಾಯಣ್ಣನ ವೀರಗಲ್ಲು ಕಿತ್ತೆಸದು ಗುಂಡಿ ತೋಡಿದ್ದಾರಂತೆ!
ದೊಡ್ಡಬಳ್ಳಾಪುರದ ಹೊನ್ನಾವರದಲ್ಲಿ ಮಾಸ್ತಿಕಲ್ಲು ದೇವರಗುಡಿ ಅಗೆದು ಮಣ್ಣು ಹೊಯ್ದು ಕೊಂಡಿದ್ದಾರಂತೆ? ಜನ ಮರಳು ತ್ತಿದ್ದಾರಂತೆ ಮೂಢರ ಜಾತ್ರೆಗೆ! ಅಂಧ ಹಾಗೆ. ಅದೂ ಮುಂಡಾ ಮೋಚ್ಕೊಂಡ್ ಹೋಗ್ಲಿ, ಸಮಸ್ಯೆ ಏನಂದರೆ, ಕರ್ನಾಟಕದ ಕೆಲವು ‘ಇಪ್ಪತ್ನಾಲ್ಕು ಬೈ ಏಳು’ ಚಾನಲ್ಲುಗಳು ಜನರನ್ನು ಸೈಂಟಿಫಿಕ್ ಟೆಂಪರ್ ಮೆಂಟ್ ‘ಪಾತ್’ ನಿಂದ ಮೂಢ ನಂಬಿಕೆಯ, ಅಂಧ ಶ್ರದ್ದೆಯ ‘ಆಳಕ್ಕೆ’ ಐ ಮೀನ್ ಪಾತ್ ಆಳಕ್ಕೆ ಒಯ್ದು ಬಿಟ್ಟಿರುವುದರಿಂದ ಪ್ರಭಾವಿತರಾದ ಜನಾ ನಿಧಿ ಆಸೆಗೆ ಬಲಿ ಬಿದ್ದು, ಕೈಲಿ ಗುದ್ದಲಿ ಹಾರೆ ಸನಿಕೆ ಹಿಡಿದು, ಅದ್ಯಾವ ಮಠ, ಮಂದಿರಾ , ಗುರುಪೀಠ, ಗೋರಿ ದೇವಾಲಯಗಳ ಪಾಯಕ್ಕೇ ಅಪಾಯ ತಂದೊಡ್ಡುತ್ತಾರೋ, ಆಯಾ ಟೀವಿಯ ಆಸ್ಥಾನ? ವಿದ್ವಾನರೆ ಹೇಳಬೇಕು.., ಅನ್ನುವದನ್ನ ನಿಮ್ಮಲ್ಲಿ ತೋಡಿಕೊಂಡಿದ್ದೇನೆ.. ಜೈ ಮುಂದ್ !
END ಗುಟುಕು
ಟ್ರೂಮನ್ ಹೇಳಿದ್ದಲ್ಲ.
ಬದುಕಿನಲ್ಲಿ ಇಷ್ಟು ಮಾತ್ರ ಟ್ರೂ: ನಮ್ಮ ಬಳಿ ದುಡ್ಡು ಕಾಸು ಇದ್ದಾಗಲಷ್ಟೇ
ನೆನ್ ಟ್ರೂ, ಇಷ್ ಟ್ರೂ. ಯಾವಾಗ ಕೈ ಬರಿದಾಯ್ತೋ, ಜನ ನಮ್ಮ ಗೊಡವೆ ಬಿಟ್ ಟ್ರೂ ಅಂತಲೇ? ಅಂತ ಕೇಳಿದ್ರೆ, ಇಟ್ಸ್ ಬಟ್ರೂ ಅಂತಾರೆ ತಿರುಮಲದ ವೆಂಕಟಾಚಲ ಶೆಟ್ರೂ.
 

‍ಲೇಖಕರು G

October 26, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

4 ಪ್ರತಿಕ್ರಿಯೆಗಳು

  1. suthradhara ramaiah

    Thank you Aravind and Kiran. Thanks for the response. Glad you liked it:)

    ಪ್ರತಿಕ್ರಿಯೆ
  2. Raj

    Good one. Need more such pun filled fun episodes, in present India all we can do is just laugh. There is a saying, when you fall into river by accident, just take a bath!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: