ಹಿಡಿದಿಹೆನು ಕೈಯಲಿ ಹೃದಯ ಬಟ್ಟಲು, ಬಟ್ಟ ಬಯಲಲಿ ನಿಂತ ಒಬ್ಬಂಟಿ ಬಿಕ್ಷುಕ …

ಹೃದಯ ಬಟ್ಟಲಲ್ಲಿ ಅವರೆ

ಅನಿಲ ತಾಳಿಕೋಟಿ
ನಾರ್ತ್ ಕೆರೋಲಿನಾ , USA

’ಅಬಕ ಅವರೇ, ಆರಾಮಾ?’
ಕೇಳಿದಾಕ್ಷಣ, ಕಬ್ಬಿಣದ ಸರಳೊಂದ
ನಿಗಿನಿಗಿಸಿ ಮಲಗಿಸಿದೆ ನನ್ನೆದೆಯ ಮೇಲೆ
ಸಿಡಿದು ಚೂರಾಗಿ ಸಿಗಿದು ಸುಟ್ಟು ಕರಕಲಾಯ್ತು.
ಮಾತೆ, ತಾಯಿ ಕಣ್ ಬಿಟ್ಟಳು, ಮಳೆ ಸುರಿಸಿದಳು
ನನ್ಮೇಲೆ ಕೊಡೆಯಿಟ್ಟು ಸರಿದು ನಿಂತೆ ನೀ ನಸುನಗುತ
ಅಳಿದುಳಿದ ಹೃದಯದ ಚೂರು-ಪಾರು ನಾನೀಗ.
 
ಕಣ್ಣಕಣ್ಣಲಿಟ್ಟು ಕೈ ಕೈ ಹಿಡಿದು ಆಡಿದ ದಿನಗಳೆಷ್ಟೋ?
ಇಡಲುಂಟೆ ಲೆಖ್ಖ, ಹುಟ್ಟಿದಾರಭ್ಯ ನನಗಂಟಿದ ನಂಟ?
ನೆನಪಿದೆಯೆ ಆ ದಿನ, ಗಿರಿ ಗಿರಿ ಸುತ್ತುತ್ತಿದ್ದ
ಗಾಲಿಯಚ್ಚಿನಲಿ ಸಿಲುಕಿ ನಲುಗಿದ ನಿನ್ನ ಕೋಮಲ ಪಾದ
ಮಧ್ಯ ಬೀದಿಯಲಿ ವಿಹ್ವಲವಾಗಿ ಕಿರುಚಿದ್ದು ನೀನಾ, ನಾನಾ?
ವಾರಗಟ್ಟಲೆ ಹಚ್ಚಿ ಮಲಾಮ ನಾನಾಗಿದ್ದೆ ನಿನ್ನ ಗುಲಾಮ.

ಪುಟ್ಟ ಕೈಯಲ್ಲಿ ಎಲ್ಲಾ ಮುಚ್ಚಿಟ್ಟು ನೀ ಮಾಡಿದೆ ರಟ್ಟು ಗುಟ್ಟು.
ಓದಿದ್ದು ಪುಸ್ತಕದ ಹೊದಿಕೆ ಮಾತ್ರ ಒಳಗಿನದೆಲ್ಲಾ
ನನಗರಿವಾಗದ, ಅರ್ಥೈಸಲಾಗದ ಭಾಷೆಯ ಪ್ರಭಾವ.
ಪ್ರಭಾವಳಿಯಲ್ಲಿ ನಾ ಸುತ್ತುತ್ತಿರುವೆ ಸತ್ತಂತೆ
ಮನಸೆಲ್ಲಾ ಕೇಂದ್ರಾಭಿಗಾಮಿಯಾಗಿ ಅಂದಿನಿಂದ.
 
ಸುಡು ಸುಡು ನೆತ್ತಿಯ ಸೂರ್ಯ
ಬೆವರೊರಿಸಿ ನಾ ಸೇರಿದೆ ನಿನ್ನ ಗೂಡ.
ತಂಪು ತಂಪಾದ ನೆಲ
ಮತ್ತೆ ಮತ್ತೆ ಸುತ್ತಿ ಸುತ್ತಿ ಸಿಡಿಸುತಲಿರುವ ಚಕ್ರ ಫಂಖ
ಸಟ್ಟನೆ ಇಟ್ಟೆ ಡುಣ್ಣನೆಯ ಕೋಲೊಂದ
ಕಳಚಿ ಬಿದ್ದು ನಾ ಚಲಿಸುತಿಹೆ ದೂರ-ದೂರ ಬಲು ದೂರ.
ಒಂದೇ ಒಂದು ಸಾರಿ ನೋಡಲಾರೆಯಾ ಕಣ್ಣರಳಿಸಿ
ಎಲ್ಲ ಭೌತ ನಿಯಮ ಮೀರಿ
ವೃತ್ತಾಂತದಿಂದ ನಡೇದೇನು ಕೇಂದ್ರದತ್ತ
ಮೀರಲುಂಟೆ ಭೂತ ಭಾವಗಳ, ಕಳಚಲುಂಟೆ ಭಾಧ್ಯತೆಗಳ?
ಚೂರು ಚೂರುಗಳ ತೇಪಿಸಿ ವಾಂಛೆ ಆಶೆಗಳ ಲೇಪಿಸಿ
ಹಿಡಿದಿಹೆನು ಕೈಯಲಿ ಹೃದಯ ಬಟ್ಟಲು
ಬಟ್ಟ ಬಯಲಲಿ ನಿಂತ ಒಬ್ಬಂಟಿ ಬಿಕ್ಷುಕ
ನಡೆದು ಬಂದು ನೀನಿಟ್ಟೆ ಅದರಲಿ ಅವರೇ, ಅವರೆ, ಅ ವರೆ.
 
 
 

‍ಲೇಖಕರು G

October 26, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಸುಮನ್ ದೇಸಾಯಿ

    ” ವಾರಗಟ್ಟಲೆ ಹಚ್ಚಿ ಮಲಾಮ ನಾನಾಗಿದ್ದೆ ನಿನ್ನ ಗುಲಾಮ.” ಎಂಥಾ ಚಂದದ ಸಾಲುಗಳು… ಇಷ್ಟ ಆತು. ಛಂದ ಬರೆದೀರಿ….

    ಪ್ರತಿಕ್ರಿಯೆ
  2. D.Ravivarma

    ಚೂರು ಚೂರುಗಳ ತೇಪಿಸಿ ವಾಂಛೆ ಆಶೆಗಳ ಲೇಪಿಸಿ
    ಹಿಡಿದಿಹೆನು ಕೈಯಲಿ ಹೃದಯ ಬಟ್ಟಲು
    ಬಟ್ಟ ಬಯಲಲಿ ನಿಂತ ಒಬ್ಬಂಟಿ ಬಿಕ್ಷುಕ
    ನಡೆದು ಬಂದು ನೀನಿಟ್ಟೆ ಅದರಲಿ ಅವರೇ, ಅವರೆ, ಅ ವರೆ….manamuttuva manakaaduva chintane….

    ಪ್ರತಿಕ್ರಿಯೆ
  3. Prasad

    ಅನಿಲ್ ,
    ನಿಮ್ಮ ಕವನ ತುಂಬಾ ಇಷ್ಟವಾಯಿತು .
    – ಪ್ರಸಾದ್ ( ಹಾವೇರಿ )

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: