‘ಟೇಕ್ ಎ ಬುಕ್, ಲೀವ್ ಎ ಬುಕ್’

ಕುಮಾರ್ ಮದ್ದೂರ್

ಮಿಜೋರಾಂ ರಾಜ್ಯದ ಗ್ರಂಥಾಲಯದ ಅಧಿಕಾರಿಗಳಾದ ಡಾ.ಲಾಮ್ ಜುವಾಲ ಮತ್ತು ಡಾ.ಲಾಲೈ ಸಂಗ್ಜಲಿ ಎನ್ನುವವರು ಅಮೇರಿಕಾಕ್ಕೆ ಭೇಟಿ ಕೊಟ್ಟಾಗ ಅಲ್ಲಿಯ ಜನಗಳು ರಸ್ತೆ ಬದಿಯ ಗ್ರಂಥಾಲಯಗಳನ್ನೂ ಉಪಯೋಗಿಸುವ ರೀತಿ ನೀತಿ ಸದುಪಯೋಗ ಪಡಿಸಿಕೊಳ್ಳುವುದಾ ಕಂಡು ನಮ್ಮಲ್ಲೂ ಈ ರೀತಿ ಮಾಡಬೇಕು ಎಂದು ಕನಸು ಕಾಣುತ್ತಾರೆ.

ಅಮೇರಿಕಾದಿಂದ ಹಿಂದಿರುಗಿ ಬಂದಮೇಲೆ ಪ್ರಾಯೋಗಿಕವಾಗಿ 2016 _2017ರ ಸಾಲಿನಲ್ಲಿ ರಾಜಧಾನಿ ಐಜುವಲಾ ನಗರದ ಮುಖ್ಯ ರಸ್ತೆಯಲ್ಲಿ 20 ಪುಸ್ತಕ ಒಳಗೊಂಡ ಎರಡು ಮಿನಿ ಗ್ರಂಥಾಲಯ ಸ್ಥಾಪಿಸುತ್ತಾರೆ. ಈ ಗ್ರಂಥಾಲಯದ ಯೋಜನೆಗೆ ‘ಟೇಕ್ ಎ ಬುಕ್, ಲೀವ್ ಎ ಬುಕ್ ‘ ಎನ್ನುವ ಹೆಸರು ನೀಡುತ್ತಾರೆ.

ಈ ಯೋಜನೆ ಜನಪ್ರಿಯಗೊಂಡ ಮೇಲೆ ನಗರದ ಮುಖ್ಯ ರಸ್ತೆಗಳ ಬದಿಯಲ್ಲಿ ಇನ್ನಷ್ಟು ಮಿನಿ ಗ್ರಂಥಾಲಯ ಸ್ಥಾಪಿಸಲು ಮುಂದಾಗುತ್ತಾರೆ.
2017 ರಲ್ಲೀ ನಿಧನ ಹೊಂದಿದ ಪುಸ್ತಕ ಪ್ರಿಯ ರೆವೆರೆಂಡ್ ಫಾದರ್ ಸಿ. ಲಿಯಾನ್ ಮಿಂಗ್ ತುಂಗ ರವರ ಜ್ಞಾಪಾಕರ್ಥವಾಗಿ 2019 ರಲ್ಲಿ ಅವರ ಮಗ ಸರ್ಕಾರದ ಜೊತೆ ಕೈ ಜೋಡಿಸಿ ಇನ್ನಷ್ಟು ಮಿನಿ ಗ್ರಂಥಾಲಯ ನಿರ್ಮಾಣ ಮಾಡಲು ಹಣದ ಸಹಾಯ ಮಾಡುತ್ತಾರೆ.

ಓದುಗರ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ಅಲ್ಲಿಯ ಪುಸ್ತಕ ಪ್ರಿಯರೇ ಸ್ವಯಂ ಪ್ರೇರಿತರಾಗಿ ಪುಸ್ತಕಗಳನ್ನೂ ಗ್ರಂಥಾಲಯಕ್ಕೆ ದಾನ ಮಾಡಲು ಪ್ರಾರಂಭಿಸಿದರು. ಸದುಪಯೋಗ ಮತ್ತು ಜನರ ಶಿಸ್ತು ಪ್ರಾಮಾಣಿಕತೆ ಅರಿತು ಕಾಲೇಜ್ ಕ್ಯಾಂಪಸ್ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಇಂಥ ಮೀನಿ ಗ್ರಂಥಾಲಯಗಳನ್ನೂ ನಿರ್ಮಿಸುತ್ತಾರೆ. ಜನರ ಪುಸ್ತಕ ಪ್ರಿಯತೆ ಮನಗಂಡ ಅಲ್ಲಿಯ ಚಾಂಪೈ ವಿಧಾಸಭಾ ಕ್ಷೇತ್ರದ ಶಾಸಕ ಜೆಡ್.ಆರ್ ಥೈಮ್ ಸಂಗ 2020 ರಲ್ಲಿ 25000 ರೂಪಾಯಿಗಳ ಸಹಾಯ ಧನ ನೀಡುತ್ತಾರೆ.

ಪುಸ್ತಕ ಓದುವುದರಿಂದ ಜನರಿಗೆ ಮಿಜೋ ಮೌಲ್ಯಗಳು, ಸಂಸ್ಕೃತಿ ಉಳಿಸಿ ಬೆಳೆಸಲು ಸಹಕಾರಿಯಾಯಿತು. ಓದುಗರ ಸಂಖ್ಯೆ ಬೆಳೆದಂತೆ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆಯುವವರ ಸಂಖ್ಯೆ ಕೂಡ ಇತರ ಕ್ಷೇತ್ರಕ್ಕಿಂತ ಮಿಜೋ ಜನರಲ್ಲಿ ಅಧಿಕವಾಯಿತು.
ನೈತಿಕತೆ, ಶಿಸ್ತು, ಪ್ರಾಮಾಣಿಕತೆ, ಗೌರವ, ನಾಗರೀಕತೆ ಬೆಳೆಯಲು ಓದುವ ಕ್ರಿಯೆ ಕೂಡ ಸಹಕಾರಿಯಾಯಿತು.

ಇಂಥ ಓದುವ ಕ್ರಿಯೆ ನಮ್ಮಲ್ಲೂ ಎಲ್ಲೆಡೆ ಹಬ್ಬಲೀ, ಸೃಜನಾತ್ಮಕ ಸಾಹಿತ್ಯ ಓದುಗರನ್ನು ತನ್ನೆಡೆಗೆ ಸೆಳೆಯಲೀ ಆ ಮೂಲಕ ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯ ವೃದ್ಧಿಸಲೀ. ಸಕಾರಾತ್ಮಕ ಚಟುವಟಿಕೆಯ ರೂವಾರಿಗಳಾದ ಮಿಜೋರಾಂನ ಗ್ರಂಥಾಲಯದ ಅಧಿಕಾರಿಗಳಿಗೆ ಮತ್ತು ಪುಸ್ತಕ ಪ್ರಿಯ ಮೀಜೋ ಜನಗಳಿಗೆ ಅಪ್ಪಟ ಕನ್ನಡಿಗ ಓದುಗ ಪ್ರಿಯರ ಪರವಾಗಿ ಅಭಿನಂದನೆಗಳು.

ಈ ಗ್ರಂಥಾಲಯ ಯೋಜನೆ ಪುಟ್ಟದಾಗಿ ಮಾಡಿದರೂ ಅದರ ಉಪಯೋಗ ಬಹಳ ದೊಡ್ಡ ಮಟ್ಟದಲ್ಲಿ ಆಗಿರುವುದು ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯ ಒಂದು ಭಾಗವಾಗಿರುವ ಪುಟ್ಟ ರಾಜ್ಯ ಮಿಜೋರಾಂ ಎನ್ನುವುದು ನಮಗೆ ಮತ್ತು ಗ್ರಂಥಾಲಯದ ಅಧಿಕಾರಿಗಳಿಗೆ, ರಾಜಕಾರಿಣಿಗಳಿಗೆ ಅದರಲ್ಲೂ ಗ್ರಂಥಾಲಯ ಖಾತೆ ಹೊಂದಿರುವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಇದು ತಿಳಿಯಲಿ ಎನ್ನುವುದೇ ಈ ಬರಹದ ಉದ್ದೇಶ.

‍ಲೇಖಕರು Avadhi

May 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: