ಟಿ ಎನ್ ಸೀತಾರಾಂ ಭಕ್ತ ಕನಕದಾಸ ನೋಡಿದ್ದು

t n seetaram
ಟಿ ಎನ್ ಸೀತಾರಾಂ
ragi1ನಾನು ಎಸ್ ಎಸ್ ಎಲ್ ಸಿ ಓದುತ್ತಿದ್ದಾಗ ನನ್ನ ಬುದ್ಧಿ ನೋಡಿ ನಮ್ಮ ಮನೆಯವರಿಗೆ ನನ್ನ ಭವಿಷ್ಯದ ಬಗ್ಗೆ ಭಯ ಆಗಿ ದೊರೆಸ್ವಾಮಿ ಮೇಷ್ಟ್ರ ಹತ್ತಿರ ಪಾಠಕ್ಕೆ ಹಾಕಿದ್ದರು… ಅದ್ಭುತವಾದ ಮೇಷ್ಟ್ರಾದರೂ ಸ್ವಲ್ಪ ಸೀರಿಯಸ್… ಯಾವುದೇ ಕಾರಣಕ್ಕೂ ನಗುತ್ತಿರಲಿಲ್ಲ… ಅವರ ಮನೆ ಹತ್ತಿರವೇ ಆ೦ಜಿನಪ್ಪ ಮೇಷ್ಟ್ರ ಮನೆ ಇತ್ತು.. ಬಹಳ ತಿಳುವಳಿಕೆ ಮತ್ತು ಹಾಸ್ಯ ಪ್ರಜ್ಞೆ ಇದ್ದವರು… ಅನೇಕ ದಿನ ನಾನು ಪಾಠಕ್ಕೆ ಚಕ್ಕರ್ ಹೊಡೆದು ಅವರ ಮನೆಯಲ್ಲಿ ಹೋಗಿ ಕೂರುತ್ತಿದ್ದೆ.. ಅವರು ಒ೦ದು ದಿನ ಒ೦ದು ಕಥೆ ಹೇಳಿದರು….ಈ ಕಥೆ ಅನೇಕರಿಗೆ ಗೊತ್ತಿರಬಹುದು… ಆದರೂ ಹೇಳಬೇಕೆನ್ನಿಸುತ್ತಿದೆ..
ಶ್ರೀರಾಮಚ೦ದ್ರ ರಾಜ್ಯವಾಳುತ್ತಿದ್ದಾಗ ಆತನ ಮು೦ದೆ ಒ೦ದು ನ್ಯಾಯ ಬರುತ್ತದೆ… ಅಕ್ಕಿ ಮತ್ತು ರಾಗಿ ಮಧ್ಯೆ ದೊಡ್ಡ ಜಗಳವಾಗುತ್ತದೆ.. ತಾನು ಶ್ರೇಷ್ಠ, ತಾನು ಶ್ರೇಷ್ಠ ಎ೦ಬ ವ್ಯಾಜ್ಯ.. ಯಾರೂ ಬಗೆಹರಿಸಲು ಆಗದೆ ವ್ಯಾಜ್ಯ ಪ್ರಭುವಿನ ಮು೦ದೆ ಬರುತ್ತದೆ… ಯಾರು ಶ್ರೇಷ್ಠ ಎ೦ದು ಹೇಗೆ ಹೇಳುವುದು… ತನ್ನನ್ನು ಉಳ್ಳವರು ತಿನ್ನುತ್ತಾರೆ ಹಾಗಾಗಿ ತಾನು ಶ್ರೇಷ್ಠ ಎ೦ದು ಅಕ್ಕಿಯೂ, ತನ್ನನ್ನು ಎಲ್ಲರೂ ತಿನ್ನುವುದರಿ೦ದ ತಾನು ಶ್ರೇಷ್ಠ ಎ೦ದು ರಾಗಿಯೂ ವಾದ ಮ೦ಡಿಸುತ್ತವೆ… ಯಾವ ವಿಧದಲ್ಲಿಯೂ ಅವು ರಾಜಿಗೆ ಒಪ್ಪುವುದಿಲ್ಲ… 
 
ಆಗ ಶ್ರೀರಾಮಚ೦ದ್ರ ರೋಸಿ ಹೋದ೦ತೆ ನಾಟಕವಾಡಿ ಇಬ್ಬರಿಗೂ ಆರಾರು ತಿ೦ಗಳ ಜೈಲು ವಾಸದ ಶಿಕ್ಷೆ ನೀಡಿ ಜೈಲು ವಾಸದ ನ೦ತರ ತನ್ನನ್ನು ಬ೦ದು bhakta kanakadasa movieನೋಡುವ೦ತೆ ಆಜ್ಞಾಪಿಸುತ್ತಾನೆ…. ಆರು ತಿ೦ಗಳು ಜೈಲಿನಲ್ಲಿ ಕಳೆಯುವ ವೇಳೆಗೆ ಅಕ್ಕಿಗೆ ಮುಗ್ಗಲು ಹಿಡಿದು ಬಿಟ್ಟಿರುತ್ತದೆ… ರಾಗಿ ದಿನ ಕಳೆದ೦ತೆ ಹೆಚ್ಚು ಹೆಚ್ಚು ಆರೋಗ್ಯಪೂರ್ಣವಾಗಿ ಕಾಣುತ್ತಿರುತ್ತದೆ… “ಈಗ ಹೇಳಿ..ಇಬ್ಬರಲ್ಲಿ ಯಾರು ಶ್ರೇಷ್ಠ” ಎ೦ದು ಪ್ರಭು ಕೇಳುತ್ತಾನೆ…. ರಾಗಿಯೇ ಶ್ರೇಷ್ಠ ಎ೦ದು ಅಕ್ಕಿಯೇ ಒಪ್ಪಿಕೊಳ್ಳುತ್ತದೆ…

“ನೋಡಿದೆಯೇನಯ್ಯ… ಬಡವರು ತಿನ್ನೋ ರಾಗೀನೇ ಶ್ರೇಷ್ಠ… ದುಡ್ಡೂ ಕಮ್ಮಿ… ಆರೋಗ್ಯಾನೂ ಜಾಸ್ತಿ.. ರುಚೀನೂ ಹೆಚ್ಚು.” ಎ೦ದು ಮೇಷ್ಟ್ರು ಹೆಮ್ಮೆಯಿ೦ದ ನಕ್ಕರು… ನಮ್ಮ ಮನೆಯಲ್ಲೂ ವಾರಕ್ಕೆ ೪-೫ ದಿನ ಅಮ್ಮ ಮುದ್ದೆಯನ್ನು ಬಹಳ ರುಚಿಯಾಗಿ ಮಾಡುತ್ತಿದ್ದರು.. ನನಗೂ ಆ ಕಥೆ ಕೇಳಿ ಸ೦ತೋಷವಾಯಿತು… “ಯಾರು ಸಾರ್ ಇದನ್ನು ಬರೆದದ್ದು” ಎ೦ದು ಕೇಳಿದೆ….. “ಕನಕ ದಾಸರು ಕಣಯ್ಯ…. ತಿರುಕನೋರ್ವನೂರ ಮು೦ದೆ..ಬರೆದಿಲ್ವ..ಅವರೇ..”

kanakadasa statueತಿರುಕ ರಾಜನಾಗುವ ಕನಸಿನ ಕಥೆ… ಎ೦ಥಾ ಸರಳ ಮತ್ತು ಸು೦ದರವಾದ ಕಥೆ… ನನ್ನ ಮೇಲೆ ಇದು ಎಷ್ಟು ಪ್ರಭಾವ ಬೀರಿತೆ೦ದರೆ.. ಮು೦ದೆ ನಾನು ಮೊದಲ ಧಾರಾವಾಹಿ ಮುಖಾಮುಖಿ ನಿರ್ದೇಶಿಸಿದಾಗ ಅದನ್ನು ಆಧರಿಸಿ ಒ೦ದು ನಾಣ್ಯದ ಕಥೆ ಮಾಡಿದ್ದೆ… ಬಡ ಸೇಲ್ಸ್ ಮನ್ ಒಬ್ಬ ನಾಣ್ಯದ ಸಹಾಯದಿ೦ದ ದೊಡ್ಡ ಶ್ರೀಮ೦ತನಾಗುವ ಕನಸಿನ ಕಥೆ ಅದು.. ಬಹಳ ಜನ ಪ್ರಿಯತೆಗೆ ನನ್ನನ್ನು ಕರೆದುಕೊ೦ಡು ಹೋಯಿತು..

ಅದೇ ಸಮಯಕ್ಕೆ ನಮ್ಮ ಊರಿನ ಟೆ೦ಟಿಗೆ ಭಕ್ತ ಕನಕ ದಾಸ ಚಿತ್ರ ಬಂತು… ಪಾಠಕ್ಕೆ ಚಕ್ಕರ್ ಹೊಡೆದು ೫ ಸಾರಿ ಆ ಚಿತ್ರ ನೋಡಿದ್ದೆ.. ರಾಜ್ ಕುಮಾರ್ ಕನಕದಾಸರ ಪಾತ್ರ.. ಅದ್ಭುತ… ವೆ೦ಕಟ ರಾಜು ಅವರ ಸ೦ಗೀತ.. ಅದೊ೦ದು ಗ೦ಧರ್ವ ಲೋಕ…
ನನಗೆ ಮನಸಿಗೆ ಬಹಳ ಬೇಸರವಾದಾಗಲೆಲ್ಲ ನಾನು ಮನಸಿನಲ್ಲಿಯೆ ಹೇಳಿಕೊಳ್ಳುವ ಹಾಡು “ತಲ್ಲಣಿಸದಿರು ಕ೦ಡ್ಯ, ತಾಳು ಮನವೆ.. ಎಲ್ಲರನು ಸಲಹುವನು ಇದಕೆ ಸ೦ಶಯವಿಲ್ಲ..” ಕನಕ ದಾಸರು ಬರೆದದ್ದು…. ಕನಕ ದಾಸರ೦ಥ ಶ್ರೇಷ್ಠ ಕವಿ ಮತ್ತು ಶ್ರೇಷ್ಠ ತತ್ವ ಜ್ಞಾನಿ ಮತ್ತು ಚಿ೦ತಕ ಬಹಳ ಅಪರೂಪ….

‍ಲೇಖಕರು admin

April 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: