ನಿಸಾರ್ ಸರ್: ರಾಜ್ ಮತ್ತು ಬಿರಿಯಾನಿಯ ಘಮ

ರಾಜ್ ಗೆ ನಿಸಾರ್ ಮನೆಯ ಬಿರಿಯಾನಿ ಊಟ

ಗೋಪಿನಾಥ ರಾವ್, ಬೆಂಗಳೂರು

ರಾಜ್ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡವರು ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್. ಹಾಗೇ ರಾಜ್ ಗೆ ನಿಸಾರ್ ಬಗ್ಗೆ ಎಲ್ಲಿಲ್ಲದ ಪ್ರೀತಿ. ಕವಿ, ಕಲಾವಿದರ ಬಗ್ಗೆ ರಾಜ್ ಗೆ ಅಪಾರ ಗೌರವ. ಪರಸ್ಪರ ಇಬ್ಬರಲ್ಲೂ ಅಂಥ ನಿರ್ಮಲ ಸ್ನೇಹಭಾವ ಇತ್ತು. ರಾಜ್ ಕುಮಾರ್ ಅವರನ್ನು ತಮ್ಮ ಮನೆಯ ಊಟಕ್ಕೆ ಒಮ್ಮೆ ಆಹ್ವಾನಿಸಿದರು ನಿಸಾರ್.

ಘಮಭರಿತ ಬಿಸಿಬಿಸಿ ಬಿರಿಯಾನಿ ಊಟ ನಿಸಾರರ ಮನೆಯಲ್ಲಿ ರಾಜ್ ಗಾಗಿ ಸಿದ್ದವಾಗಿತ್ತು. ಮಾಂಸದ ಊಟದಲ್ಲಿ ಒಂದು ಕೈ ಮೇಲೆ ಎಂಬಂತೆ ಬಿರಿಯಾನಿಯನ್ನು ಅವತ್ತು ಚಪ್ಪರಿಸಿ ತಿಂದಿದ್ದರು ರಾಜ್. ಊಟ ಮುಗಿದ ಬಳಿಕ ಪಾರ್ವತಮ್ಮ ರಾಜ್ ಕುಮಾರ್ ಕೈತೊಳೆಯಲು ಹೋದರು.ಆದರೆ ರಾಜ್ ಕುಮಾರ್ ಮಾತ್ರ ಕೈತೊಳೆಯಲಿಲ್ಲ. ಎಲ್ಲರಿಗೂ ಆಶ್ಚರ್ಯ.

ಕಡೆಗೆ ‘ಯಾಕ್ರೀ, ಕೈ ತೊಳೆಯಲಿಲ್ಲ?’ ಎಂದು ಪಾರ್ವತಮ್ಮ ಕುತೂಹಲ ತಡೆಯಲಾಗದೆ ಕೇಳಿಯೇ ಬಿಟ್ಟರು.ಇದನ್ನು ಗಮನಿಸುತ್ತಿದ್ದ ನಿಸಾರ್ ಮನೆಯಲ್ಲಿದ್ದ ಎಲ್ಲರಿಗೂ ರಾಜ್ ಕುಮಾರ್ ಏನು ಹೇಳುತ್ತಾರೆ ಎಂಬುದನ್ನು ಕೇಳುವುದಕ್ಕೆ ಕಿವಿಗೊಟ್ಟರು. ನಿಸಾರರಿಗೆ ಒಂದು ರೀತಿ ಆತಂಕ. ‘ಏನಾದರೂ ಊಟದಲ್ಲಿ ವ್ಯತ್ಯಾಸವಾಯಿತಾ?’ ಎಂದು ಆಲೋಚಿಸುತ್ತಿದ್ದರು.

ಎಲ್ಲರೂ ತನ್ನತ್ತಲೇ ದೃಷ್ಟಿ ನೆಟ್ಟಿರುವುದನ್ನು ಗ್ರಹಿಸಿಕೊಂಡ ರಾಜ್ ಕುಮಾರ್ “ಪಾರ್ವತೀ, ಗೆಳೆಯ ನಿಸಾರ್ ನಮಗೆ ಅದ್ಭುತ ಬಿರಿಯಾನಿ ಊಟ ಮಾಡಿಸಿದ್ದಾರೆ. ನಾನು ಈಗಲೇ ಕೈ ತೊಳೆದು ಬಿಟ್ಟರೆ ಅದರ ಘಮ್ಮನೆಯ ಗಮ್ಮತ್ತನ್ನು ಕಳೆದುಕೊಂಡುಬಿಡುತ್ತೇನೆ. ಕಡೆಯ ಪಕ್ಷ ಅದರ ಸವಿಸವಿ ಊಟದ ಘಮಲು ಸಂಜೆವರೆಗಾದರೂ ಇರಲಿ” ಎನ್ನುತ್ತಾ ಮತ್ತೊಮ್ಮೆ ಕೈ ಮೂಸಿಕೊಂಡರು. ರಾಜ್ ಅವರ ಇಂಥ ರುಚಿಕಟ್ಟು ಊಟದ ಸವಿನೆನಪು ನಿಸಾರರಲ್ಲಿ ಶಾಶ್ವತವಾಗಿ ಉಳಿದು ಹೋಯ್ತು. ನಿಸಾರರಲ್ಲಿ ರಾಜ್ ಬಗ್ಗೆ ಇವತ್ತಿಗೂ ಧನ್ಯತಾ ಭಾವವಿದೆ.

ಪರಮೇಶ್ವರ ಗುರುಸ್ವಾಮಿ ಪ್ರತಿಕ್ರಿಯೆ 

ಇದು ತಪ್ಪು ಚಿತ್ರಣ. ಮೇ ಫ್ಲವರ್ ನ ಫಿಷ್ ಮಾರ್ಕೆಟ್ ಎಂಬ ಸೆಶನ್ ನಲ್ಲಿ ನಿಸಾರ್ ರವರು ಹಂಚಿಕೊಂಡದ್ದು ಹೀಗಿದೆ : ಬಿರಿಯಾನಿ ಸವಿದ ಮೇಲೆ ರಾಜ್ ರವರು ಸೋಪು ಹಚ್ಚದೆ ಕೈ ತೊಳೆದುಕೊಳ್ಳುತ್ತಾ ರೆ. ನಿಸಾರ್ ರವರು ಸೋಪು ಬಳಸಿ ಎಂದು ಕೇಳಿಕಂಡಾಗ ಸೋಪು ಹಚ್ಚಿದರೆ ಬಿರಿಯಾನಿಯ ಘಮ ಹೋಗಿಬಿಡುತ್ತದೆ. ಹಾಗೇ ತೊಳೆದುಕೊಂಡರೆ ಸಂಜೆಯವರೆಗು ಬಿರಿಯಾನಿಯ ಘಮ ಇರುತ್ತದೆ. ತಮಗೆ ಅದೇ ಇಷ್ಟ ಎಂದಿದ್ದರಂತೆ.

‍ಲೇಖಕರು g

May 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಪರಮೇಶ್ವರ ಗುರುಸ್ವಾಮಿ

    ಇದು ತಪ್ಪು ಚಿತ್ರಣ. ಮೇ ಫ್ಲವರ್ ನ ಫಿಷ್ ಮಾರ್ಕೆಟ್ ಎಂಬ ಸೆಶನ್ ನಲ್ಲಿ ನಿಸಾರ್ ರವರು ಹಂಚಿಕೊಂಡದ್ದು ಹೀಗಿದೆ : ಬಿರಿಯಾನಿ ಸವಿದ ಮೇಲೆ ರಾಜ್ ರವರು ಸೋಪು ಹಚ್ಚದೆ ಕೈ ತೊಳೆದುಕೊಳ್ಳುತ್ತಾ ರೆ. ನಿಸಾರ್ ರವರು ಸೋಪು ಬಳಸಿ ಎಂದು ಕೇಳಿಕಂಡಾಗ ಸೋಪು ಹಚ್ಚಿದರೆ ಬಿರಿಯಾನಿಯ ಘಮ ಹೋಗಿಬಿಡುತ್ತದೆ. ಹಾಗೇ ತೊಳೆದುಕೊಂಡರೆ ಸಂಜೆಯವರೆಗು ಬಿರಿಯಾನಿಯ ಘಮ ಇರುತ್ತದೆ. ತಮಗೆ ಅದೇ ಇಷ್ಟ ಎಂದಿದ್ದರಂತೆ.
    ಗೋಪಿನಾಥ ರಾಯರೆ, ರಾಜ್ ರವರು ಬಿರಿಯಾನಿ ಚಪ್ಪರಿಸಿ ಸಂಜೆಯವರೆಗು ಕೈ ತೊಳೆಯದ ಕೊಳಕರೆಂದು ಹೇಳಲು ಪ್ರಯತ್ನಿಸುತ್ತಿದ್ದೀರ ?

    ಪ್ರತಿಕ್ರಿಯೆ
  2. ಪರಮೇಶ್ವರ ಗುರುಸ್ವಾಮಿ

  3. KM

    ಕೆಲವು ಸಲ ಸಮಯ ಸಂದರ್ಭದ ಬಗ್ಗೆ ತಿಳಿಸುವಾಗ ಹೆಚ್ಚು ಕಮ್ಮಿ ಯಾಗೊದಿದೆ. ಗೋಪಿನಾಥ ರಾಯರಿಗೂ ಇದೇ ಆದದ್ದು. ಆದರೂ ರಾಜಕುಮಾರ್ ಬಗ್ಗೆ ತಪ್ಪು ಭಾವನೆ ಬರಲೆಂದು ಅವರು ಹೇಳಿದನ್ತಿಲ್ಲ. …ಎನಿದ್ದರು ಬಿರಿಯಾನಿ ಎಂದಾಗ ಬಾಯಲ್ಲಿ ನೀರೂರುವುದೆನ್ನುವುದು ನನ್ನ ಮಟ್ಟಿಗೆ ಸರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: