ಜ್ಯೋತಿ ಬೊಮ್ಮನಹಳ್ಳಿ
ಅಂತರಾಳ ಅರಿವ ಹೊತ್ತಿನಲಿ
ನೀ ನಡೆದೆ ಬೆಳೆಕಿನೆಡೆ…
ಬೆಳಕೆಂದು ತಿಳಿಯದ ಮೂಢ ನಾನು!
ಗಿರಿ ಕಂದರ ಕಾಡು ಮೇಡನಲೆವ
ಸಂತನಂತೆ …..
ಬಿಟ್ಟು ಹೋಗದಿರು ನವಿಲುಗರಿಯಾ
ಆತ್ಮರಸಿ ಈ ರಾಧೆಯಾ …
ದೂರದಲ್ಲೆಲ್ಲೂ ಮೊರೆವ ಕೂಗು,
ಉಸಿರಿಲ್ಲದ ರಾಧಾ- ಮೋಹನನ ಆತ್ಮನಾದದಂತೆ.

ಮತ್ತೇರಿಸಲು ಮದಿರೆಬೇಕೇ ಎಂದು ಪ್ರಶ್ನಿಸಿದವಳಿಗೆ
ನಿನ್ನ ನೋಟವೊಂದೇ ಸಾಕು ಎಂದಿದ್ದ
ಮಾಧವ ……
ಮದಿರೆ, ಮಾನಿನಿ, ಮಾಧವ,
ಮಕಾರ, ಮಮತೆಯ ಒಡಲು…
ನಿನ್ನ ಏಕಾಂತ ನನ್ನ ಲೋಕಾಂತವೇ ಆದ ಕ್ಷಣ ..
ಏಕಾಂತ ಲೋಕಾಂತವಾದ ಭಾವ …
ನೀನೇ ನಾನಾ ? ನಾನೇ ನೀ-ನಾದ
ಹೊತ್ತದು …
ಬುದ್ಧನಂತೆ ಎದ್ದು ನೀ ಹೊರಟು ನಿಂತರೆ
ಯಶೋಧರೆ ನಾನಾಗಲಾರೆ..






ಚೆನ್ನಾಗಿದೆ