ಜ್ಯೋತಿ ಇರ್ವತ್ತೂರು
ಕೃಷ್ಣ ನಿನ್ನ
ಪ್ರೀತಿಯ ಗುಂಗಲ್ಲಿ
ಸಿಲುಕಿರುವ ನನಗೆ
ಪ್ರಪಂಚದ ಅರಿವಿಲ್ಲ
ನಿನ್ನ ಹೆಸರಲ್ಲಿ ಮೂಡುವ ಕನಸಲ್ಲೂ
ನಮ್ಮಿಬ್ಬರದು ಎರಡೇ ಹೆಜ್ಜೆಗಳು..
ನನ್ನತನ ನಾನೆಂಬ ಹಂಗಿಲ್ಲ
ಸ್ವಂತಿಕೆ ಕಳೆದುಕೊಂಡೇನೆಂಬ ಕೊರಗಿಲ್ಲ

ನಿರ್ಮಲ ಪ್ರೀತಿಯ
ವ್ಯಾಖ್ಯಾನದಲ್ಲಿ ಸೊಕ್ಕಿಲ್ಲ
ಅಹಂ ಹತ್ತಿರ ಸುಳಿಯೋದಿಲ್ಲ.
ಯಾಕೆಂದರೆ ನಾನೇ ನೀನು.
ನೀನೇ ನಾನು…






ಚಿಕ್ಕ ಚೊಕ್ಕ ಕವಿತೆ