ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಕವಿತೆ – ಹಳೆ ಪ್ರೇಮ ಅಬ್ಬೇಪಾರಿ ನಾಯಿ…

ಜೋಗಿ

ದಕ್ಷಿಣದಿಂದ ಬೀಳುವ ಬಿಸಿಲು
ಅಡಕೆ ಮರಗಳ ಗರಿಗಳನ್ನು
ಹಳದಿಯಾಗಿಸುವಂತೆ
ಅವಳ ನೆನಪು ಅವನ ವೃದ್ಧಾಪ್ಯವನ್ನು
ಕಡುವಾಗಿಸಿತ್ತು.
ಐವತ್ತೆಂಟು ವರುಷಗಳ ಹಿಂದೆ
ತನ್ನ ಎದೆಯನ್ನು ತೇವಗೊಳಿಸಿದ
ನಿಟ್ಟುಸಿರಿಗೆ
ಕಾರಣ ಹುಡುಕಬಾರದು ಎಂದು
ಕಿಟಕಿಯಿಂದ ಹೊರಗೆ ನೋಡಿದ.
ಹಳೆಯ ಪ್ರೇಮವೊಂದು
ಅಬ್ಬೇಪಾರಿ ನಾಯಿಯಂತೆ
ಒಳನುಗ್ಗಲು ಕಾಯುತ್ತಿತ್ತು.


ಮುದುಕ ಕಣ್ಣೆತ್ತಿ
ನಾಯಿಯತ್ತ ನೋಡಿದ.
ನಾಯಿಯೂ ಅವನನ್ನು ನೋಡಿತು,
ನಾಯಿಗೆ ಪೂರ್ವಜನ್ಮದ
ಸ್ಮರಣೆ ಇರುತ್ತದಂತೆ.
ತಾನು ಯಾವ ನಾಯಿಗೆ ಕಡಿಮೆ.
ಐವತ್ತೆಂಟು ವರುಷಗಳ ಮೇಲೂ
ಅವಳ ನೆನಪು

‍ಲೇಖಕರು avadhi

11 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading