ಜೋಗಿಗೆ ಪ್ರತಿಕ್ರಿಯೆ: ನಾನೇಕೆ ಓದುತ್ತೇನೆ ಎಂದು ಯೋಚಿಸಿದ್ದಿದೆ…

ಭಾನುವಾರ ಪ್ರಕಟವಾದ ಜೋಗಿ ಅವರ ಅಂಕಣ – ಬರಹದ ಹಣೆಬರಹ

ಅದು ಇಲ್ಲಿದೆ https://bit.ly/3Aoqm5b

ಇದನ್ನು ಓದಿ ಆಕಾಶವಾಣಿಯ ಬಿ ಕೆ ಸುಮತಿ ಅವರು ಪ್ರತಿಕ್ರಿಯಿಸಿದ್ದು ಹೀಗೆ-

ಬಿ ಕೆ ಸುಮತಿ

ಜೋಗಿ ಅವರಿಗೆ ನಮಸ್ಕಾರ…
ಎಷ್ಟೋ ಬಾರಿ ನಾನೇಕೆ ಓದುತ್ತೇನೆ ಎಂದು ಯೋಚಿಸಿದ್ದಿದೆ. ಕಾರ್ಯಕ್ರಮಗಳಲ್ಲಿ ನೀವೇಕೆ ಓದುತ್ತೀರಿ ಎಂಬ bites ಪಡೆದು ಹೆಣೆದದ್ದು ಇದೆ.
ಪುಸ್ತಕದಿನದ ಸಾಪ್ತಾಹಿಕಗಳಲ್ಲಿ ಪ್ರತಿ ವರ್ಷ ಒಂದಲ್ಲ ಒಂದು ಪತ್ರಿಕೆ ಇಂಥ ನಾನೇಕೆ ಓದುತ್ತೇನೆ ಅಭಿಪ್ರಾಯಗಳನ್ನು, ಏನು ಓದಿದಿರಿ, ಈ ವರ್ಷ top, ಲೇಖಕರು ಏನು ಓದಿದರು, ಇಂಥವು ಪ್ರಕಟ ಆಗುತ್ತವೆ.

ಹಾಗೇ ನಿಮಗಿಷ್ಟದ ಲೇಖಕರು, ಲೇಖಕರಿಗೆ ಏನು ಇಷ್ಟ, ಅಂಥ ಸಂಗತಿಗಳು, ಲೇಖಕರು, ಅವರ ಫ್ಯಾಮಿಲಿ, ಅವರ ಕೋಟು, ಬೂಟು, ಹಾಟು
ಇಂತಹ ಅನೇಕ ವಿಚಾರಗಳನ್ನು ನಾವು ಓದುತ್ತೇವೆ. ಆದರೆ.. miss ಆಗುತ್ತಿರುವುದು ಏನು..

ಏನು.. ಹಿಂದಿಗೂ, ಇಂದಿಗೂ ಏನು ಕಾಣಿಸುತ್ತಿಲ್ಲ, What is that missing fact.. ಅಂತ ಪತ್ತೇದಾರಿ ಮಾಡಲು ಹೊರಟರೆ..
ನನಗನ್ನಿಸುವುದು.. ಸತ್ಯ ಕಾಣೆಯಾಗಿದೆ.

Market orientation.
ಎಲ್ಲೆಲ್ಲೂ ‘money ಮಂಥನವೇ’ ಹೊರತು ಮನಮಂಥನ ಕಾಣೆಯಾಗಿದೆ. ಪತ್ರಿಕೆಗಳು, ಜಾಹಿರಾತಿಗೆ ಮಣೆ ಹಾಕಬೇಕಾಗಿದೆ. ಹಿಂದೆ ಲೇಖಕರು ಪತ್ರಿಕೆಗಳಿಗೆ ಬರೆದು ಕಳಿಸಿದರೆ, ಭಯ ಭಕ್ತಿ ಇಂದ compose ಮಾಡಿ, ಅದನ್ನು ಪ್ರಕಟಿಸುವ, ಸಂಭಾವನೆ ಕಳಿಸುವ ಪದ್ಧತಿ ಇತ್ತು.
ಇವತ್ತು ಅಕಸ್ಮಾತ್ ಎಷ್ಟೇ ಒಳ್ಳೆ ಬರಹ ಬರೆದಿದ್ದರೂ ಪತ್ರಿಕೆಗಳು ಲೇಖಕರೆ type ಮಾಡಿ unicode ನಲ್ಲಿ ಕಳಿಸಿ ಎಂದು ಕೇಳುತ್ತವೆ. ಸಂಪಾದಕರ ಸ್ನೇಹವಲಯದ ಅಥವಾ ಆ ವಿಭಾಗದವನಿಗೆ ಅನುಕೂಲಕರವಾಗಿ ಪರಿಣಮಿಸಬಲ್ಲ ಲೇಖನ, ಪುಸ್ತಕ ಪ್ರಕಟವಾಗುತ್ತದೆ.
Computer ತಿಳಿಯದವನ ಬರಹ ಯಾರಿಗೂ ಬೇಡ.

Social media ದಲ್ಲಿ ಯಾವನೋ ಚೆನ್ನಾಗಿ ಬರೆದಿದ್ದರೆ ಅವರನ್ನು ಲೇಖನ ಕಳಿಸಲು ಕೇಳುತ್ತಾರೆ ಎಂಬ ಮಾತು ನನ್ನ ಗೆಳತಿ ಹೇಳಿದ್ದು.
ಇನ್ನು, ಯಾವ ಮಹತ್ವದ ಘಟನೆ ಆದರೂ ಒಂದು set of people ಬರೆಯುತ್ತಾರೆ. ನಾಳೆ ಪತ್ರಿಕೆಯಲ್ಲಿ ಬರುವುದನ್ನು ಇಂದೇ ಊಹಿಸಬಹುದು. ಅಷ್ಟು ನೀರಸ ಮತ್ತು ಯಾಂತ್ರಿಕ. ಇನ್ನು ಪುಸ್ತಕ ಪ್ರಕಟಣೆ, ಅದು ದೊಡ್ಡ ಜಾಲ. ಎಷ್ಟೋ ಜನ ಏನೇನೋ ಅನುಭವಿಸಿದ್ದಾರೆ ಬಿಡಿ, ನಿಮಗೆ ತಿಳಿಯದ್ದು ಏನಿದೆ.

ಆಡಿಯೋ books, you tube ಓದು,
ಲೇಖಕರ, ಪತ್ರಕರ್ತರ, ಪ್ರಕಾಶಕರ ಬೇಕು ಬೇಡ ಬಿನ್ನಾಣಗಳು.. ಗುಣಮಟ್ಟ ಎಲ್ಲಿದೆ ಎಂದು ದೂರ್ಬೀನು ಹಾಕಿ ಹುಡುಕಬೇಕಾಗಿದೆ.
ಇಷ್ಟರ ನಡುವೆ left right ಹೆಜ್ಜೆ ಹಾಕಬೇಕು ಓದುಗ. ಅವನು ಸುಮ್ಮನಿದ್ದರೂ, ಓದಿದರೂ, ಓದದಿದ್ದರೂ ಲೇಖಕ ಕಾಡುತ್ತಾನೆ.
ಯಾಕೆಂದರೆ ಇದು ‘ಓದು’ ಎನ್ನೋಕ್ಕಿಂತ ‘ಓಡು’ ಅನ್ನುವ ಯುಗ. ಲೇಖಕ ಓಡಿಸುತ್ತಾನೆ.

ನಿರಂತರ ಓದುವ ಓದುಗನಿಗೆ ಎಲ್ಲ ಬೇಗ ಬೇಗ ಅರ್ಥ ಆಗುತ್ತೆ. ಅವನು ಲೇಖಕನಿಂದಲೇ ಹುಟ್ಟಿ ಲೇಖಕನಿಂದಲೇ ಸತ್ತುಹೋಗುತ್ತಾನೆ.
ಲೇಖಕ ಬೆಳೆಯುತ್ತಿಲ್ಲ. ಓದುಗ ಬೆಳೆಯುತ್ತಿದ್ದಾನೆ. ಲೇಖಕನಲ್ಲಿ ಸತ್ಯ ಇಲ್ಲ. ಓದುಗನಲ್ಲಿ ಸತ್ಯ ಇದೆ. ಲೇಖಕ ಕೃಷಿ ಮಾಡುತ್ತಿಲ್ಲ. ಓದುಗ ಮಾಡುತ್ತಾನೆ. ಲೇಖಕ ಗುಂಪು ಕಟ್ಟುತ್ತಾನೆ.

ಓದುಗ ಎಲ್ಲರನ್ನೂ ಇಷ್ಟಪಡುತ್ತಾನೆ. ‘ಕೊನೆಯ ಕ್ಷಣದಲ್ಲಿ’ ಬರೆದು ಕೊಟ್ಟೆ ಎಂದು ಹೇಳುತ್ತಾರೆ ಅಂಕಣಕಾರರು. ಅಂದರೆ ಅವರ ತಯಾರಿ ಏನು. ಸಂತೆ ಹೊತ್ತಿಗೆ ಮೂರು ಮೊಳವೆ. ಅಥವಾ ಏನು ಬರೆದರೂ ನಡೆಯುತ್ತೆ ಎಂಬ ಉಡಾಫೆಯೇ.

ಮೊನ್ನೆ ಒಬ್ಬ ಯುವಸ್ನೇಹಿತ ಹೇಳಿದ, ನನಗೆ ಅನಿಸಿದ್ದು ನಾನು ಹೇಳಲು ಭಾಷೆ ಇದ್ದರೆ ಸಾಕು, ನಾನು ಹಿಂದಿನದ್ದೆಲ್ಲ ಓದಬೇಕೆಂದಿಲ್ಲ,
I prefer to write than to read. ಎಂದುಎಲ್ಲರೂ ಬರೆಯುತ್ತಾರೆ ಈಗ. ಮತ್ತು ಕೇಳುತ್ತಾರೆ.. like subscribe ಎಂದು. ಅಲ್ಲಪ್ಪ ನನಗೆ ಇಷ್ಟ ಆಗದಿದ್ದರೆ like ಹೇಗೆ ಒತ್ತಲಿ?

ಹೀಗೆ ಕೇಳಿದರೆ ನಿಮ್ಮನ್ನು block ಮಾಡಿಬಿಡುತ್ತಾರೆ. ಚಿಂತಿಸುವ, ವಿಚಾರ ಮಾಡುವ ವ್ಯವಧಾನ ಎಲ್ಲಿದೆ? ಹೀಗಾಗಿಯೇ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ‘ಎತ್ತಿ ಎತ್ತಿ’ ಕೊಡುವ ಸಂಪ್ರದಾಯ ಹೆಚ್ಚುತ್ತಿದೆ. ಬಿತ್ತುವವರು ಇಲ್ಲ. ಬಿತ್ತುವವರು ಬಂದಾಗ, ಬಿತ್ತನೆಗೆ ಮಹತ್ವ ಸಿಕ್ಕಾಗ ಲೇಖಕರು, ಓದುಗರು ಮತ್ತೊಮ್ಮೆ ಕೈ ಕೈ ಹಿಡಿದು ಕೂಡುತ್ತಾರೆ.

‍ಲೇಖಕರು Admin

July 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: