ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೀಪಲ್ಲಿ 'ರಾಮಾ ರಾಮಾ ರೇ'

ಅರಕಲಗೂಡು ಜಯಕುಮಾರ್ 

‘ರಾಮಾ ರಾಮಾ ರೇ’ ಸಿನಿಮಾ ‘ಬೆಳ್ಳಿ ಸಿನಿಮಾ ಬೆಳ್ಳಿ ಮಾತು’ ಶೀರ್ಷಿಕೆಯಡಿ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಏರ್ಪಾಡಾಗಿತ್ತು. ಚಿತ್ರ ಪ್ರದರ್ಶನ ಮುಗಿದ ಮೇಲೆ ಮಾತುಕತೆ ಶುರುವಾಯ್ತು.
ಪ್ರೇಕ್ಷಕರ ಪ್ರಶ್ನೆ: ಚಿತ್ರ ಎಲ್ಲಿ ಶೂಟಿಂಗ್ ಮಾಡಿದ್ರಿ?
ನಿರ್ದೇಶಕ ಸತ್ಯಪ್ರಕಾಶ್ : ಬಿಜಾಪುರದಿಂದ 50ಕಿಮಿ ದೂರ ಸೋಲಾಪುರ ಹತ್ತಿರ.
ಪ್ರೇಕ್ಷಕ: ಆದ್ರೆ ಚಿತ್ರದಲ್ಲಿ ಎಲ್ಲಿಯೂ ಅಲ್ಲಿನ ಭಾಷೇನಾ ಬಳಸಿಲ್ವಲ್ರೀ, ಆ ಭಾಗದ ಜನ accept ಮಾಡಿದ್ರಾ?
ನಿರ್ದೇಶಕ: ಈ ಸಿನಿಮಾ ಬಿಜಾಪುರದ್ದು ಅಥವ ಉತ್ತರ ಕರ್ನಾಟಕದ್ದು ಅಂತ ಎಲ್ಲಿಯೂ ಹೇಳಿಲ್ಲವಲ್ಲ😀 ಈ ಚಿತ್ರದ ಭಾಷೆ ಕಾಣುವ ನೋಟ ಜಗತ್ತಿನ ಯಾವ ಭಾಗದ್ದು ಆಗಬಹುದು ಪಾತ್ರಗಳು ಯಾರವೂ ಆಗಬಹುದು. ಅವರವರ ನೆಲೆಗಟ್ಟಿನಲ್ಲಿ ಅವರವರಿಗೆ ಕಂಡಂತೆ ಸರಿ ತಪ್ಪುಗಳ ವಿಶ್ಲೇಷಣೆ ನಡೆಯ ಬಹುದು, ಅಂತಿಮವಾಗಿ ಸಿಗುವ ತಾರ್ಕಿಕ ಅಂತ್ಯವೇ ಸತ್ಯ.
ಪ್ರೇಕ್ಷಕ: ಅದು ಸರಿ ಇಡೀ ಸಿನಿಮಾ ಬರೀ ಜೀಪಿನಲ್ಲೆ ಯಾಕೆ ನಡೆಯುತ್ತೆ?
ನಿರ್ದೇಶಕ:😇 ಜೀಪು ಕೂಡ ಒಂದು ಪಾತ್ರವೇ ಆಗಿದೆ, ಪಾತ್ರಗಳ ಜೊತೆ ಸಾಗುವ ಜೀಪು ಹೊಸ ಜನ್ಮಕ್ಕೆ ಸಾಕ್ಷಿ ಆಗುತ್ತದೆ, ಓಡಿ ಬರುವ ಪ್ರೇಮಿಗಳಿಗೆ ತಪ್ಪಿಸಿಕೊಳ್ಳಲು ಆಸರೆ ಆಗುತ್ತದೆ, ಜೈಲಿನಿಂದ ಓಡಿ ಹೋಗುವ ಖೈದಿಗೆ ಹಾದಿ ಸವೆಸಲು ಜೊತೆಯಾಗುತ್ತದೆ, ಭಿನ್ನ ಮನಸ್ಸುಗಳನ್ನು ಬೆಸೆಯುವ ಸಾಗುವ ಸಾರಥಿಯಾಗುತ್ತದೆ, ಅಂತಿಮವಾಗಿ ತಾರ್ಕಿಕ ಅಂತ್ಯಕ್ಕೂ ಸಾಕ್ಷಿಯಾಗುತ್ತದೆ, ಹೀಗಿರುವಾಗ ಜೀಪನ್ನು ಕೇವಲ ಜೀಪು ಆಗಿ ಪರಿಗಣಿಸದಿರಿ.
ಬಹುಶ ಇದಕ್ಕಿಂತ ಹೆಚ್ಚಿನ ಮಾತುಗಳು ಪಕ್ವ ಮನಸ್ಸುಗಳಿಗೆ ಅಗತ್ಯವಿಲ್ಲ ಎಂದೆನಿಸಿತ್ತು

‍ಲೇಖಕರು avadhi

5 March, 2017

1 Comment

  1. ಡಿ.ಎಸ್.ರಾಮಸ್ವಾಮಿ

    ಸಿನಿಮಾದಲ್ಲಿ ಜೀಪು ಕೂಡ ಒಂದು ಪಾತ್ರವೆಂದು ಅರಿಯದವರೂ ಪ್ರಶ್ನೆ ಕೇಳುತ್ತಾರಲ್ಲ ಅನ್ನುವುದೇ ಸೋಜಿಗ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading