ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಬಿ ಕದ್ರಿ ಹೊಸ ಕವಿತೆ: ಕಹಿಯ  ನುಂಗುವುದೊಂದು ಕಲೆ

             ಜಯಶ್ರೀ ಬಿ ಕದ್ರಿ

ಕಹಿಯ  ನುಂಗುವುದೊಂದು ಕಲೆ

ಕಹಿ ಬೇವ ರಸವನ್ನು

ಆಟಿಯಾ ಮದ್ದನ್ನು

ನುಂಗಿ ನಗುವುದು ಮತ್ತೆ

ಜೇನಿನಂತೆ

ಕಹಿಯ ನುಂಗುವುದೊಂದು  ಕಲೆ

ಈಗೀಗ  ಕಹಿ ನುಂಗಿ

ಕಹಿಯ ಕಹಿಯೇ ಅಳಿದು

ಕಹಿಯೇ ಸಿಹಿಯಾಗುವ

ಪರಿ

ಕಹಿಯ ನುಂಗುವುದೊಂದು ಕಲೆ

 ಹಾಗಲದ ಕಹಿಯನ್ನು

 ಗುಳ್ಳ ಬದನೆಯ ಕಹಿಯ

 ಉಪ್ಪು ಖಾರದಿ ನೆನೆಸಿ

 ರುಚಿ  ತರುವೆನು

 ಕಹಿಯ ನುಂಗುವುದೊಂದು ಕಲೆ

ಮೆಲುನಗೆಯ ನವಿರಿನಲಿ

ಹೂ ಹಸಿರ ಪರದೆಯಲಿ

ಯಾವ ಕಹಿ ಎಲ್ಲಿಹುದು

ಎಂದುಲಿವೆನು

ಕಹಿಯ ನುಂಗುವುದೊಂದು ಕಲೆ 

 ಮೊಗದಲ್ಲಿ ಸಿರಿನಗೆಯು

 ಕಣ್ಣಿನಾಳದ ತೇವ

 ಮರೆಮಾಚಿ ಮತ್ತೆ

 ಕಹಿಯ ನುಂಗುವುದೊಂದು ಕಲೆ

‍ಲೇಖಕರು avadhi

1 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading