ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಹುಲಿ ಸವಾರಿ…

ಜಯಶ್ರೀ ಬಿ ಕದ್ರಿ

ಇಲ್ಲಿಎಲ್ಲರದು
ಹುಲಿಸವಾರಿ
ಇಳಿಯುವಂತಿಲ್ಲ
ಕೆರಳುವ೦ತಿಲ್ಲ
ಬರಿದೆಧೈರ್ಯದ
ವೇಷ ಆವೇಶವೆಲ್ಲ

ಜಾತ್ರೆ ಮುಗಿಯುವ ವರೆಗೆ
ಕರಗಕುಣಿಯಲೆ ಬೇಕು
ನಡು ಹೊಳೆಯ ಅಂಬಿಗನು
ಹುಟ್ಟು ಹಾಕಲೆಬೇಕು

ಒಡಲು ಸೀಳುವುದ
ಸೃಷ್ಠಿ ಸಹಿಸಲೆ ಬೇಕು
ಸದ್ದಿರದತಿವಿತಕ್ಕೆ
ಅವಡುಗಚ್ಚಲೆ ಬೇಕು

ಹುಲಿಸವಾರಿಯ ಹಾಡು
ಮನುಜರೆಲ್ಲರ ಪಾಡು
ಯುಗಗಳುರುಳಿದರೂ
ಆವರ್ತ ಸತ್ಯ

‍ಲೇಖಕರು Admin

26 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading