ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಕಳೆದು ಹೋದ ಕೀಲಿ ಕೈ..

ಜಯಶ್ರೀ ಬಿ ಕದ್ರಿ

ಕಳೆದು ಹೋದ
ಭಿತ್ತಿ ಪತ್ರಿಕೆಯ
ಕೀಲಿ ಕೈ ಸಿಕ್ಕಿ
ಅಯೋಮಯ
ಆ ಕೀಲಿ ಕೈಗೆ
ಹುಡುಕಾಡಿ ತಡಕಾಡಿ
ಮರಳಿ ಹೊಸದೇ
ಕೀಲಿ ಕೈಪಡೆದು

ಎಲ್ಲ ಮರೆತಿರುವಾಗ
ಮರಳಿ ಸಿಕ್ಕಿದೆ
ಕಳೆದು ಹೋದ
ಕೀಲಿ ಕೈ
ಇರಲಿ ಈ ಕೀಲಿ ಕೈ ಕೂಡ
ಹಳೆಯ ನೆನಪುಗಳಂತೆ
ಬೇಡವಾದಾಗ ಅಚಾನಕ್ಕಾಗಿ ಸಿಗುವ
ಹಳೆಯ ಮೈತ್ರಿಗಳಂತೆ

ತಟ್ಟುವಾಗೆಲ್ಲ ಸುಮ್ಮನಿದ್ದು
ದೂರ ಹೋದಾಗ
ತೆರೆದುಕೊಳ್ಳುವ
ಬಾಗಿಲುಗಳಂತೆ
ಇರಲಿ ಈ ಕೀಲಿ ಕೈ ಕೂಡ
ಭರವಸೆಯ ಬಿಂದುವಂತೆ
ಕಳೆದು ಹೋದರೂ
ಮರಳಿ ಸಿಗಬಹುದಾದ
ಬೆಳಕಿನಂತೆ

‍ಲೇಖಕರು Admin

18 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading