ಈ ಶ್ರೀಕ೦ಠ ಅವರ ಹಾಸ್ಯ ಕಾರ್ಯಕ್ರಮ ಕಾಮಿಡಿ ಖಾನಾವಳಿ ನಿನ್ನೆ ವೀಕ್ಷಿಸಿದೆ . ತುಂಬಾ ಖುಷಿ ಕೊಡ್ತು. ಈ ಕಾರ್ಯಕ್ರಮದಲ್ಲಿ ನಾಲ್ಕು ಮುಖ್ಯ ಪಾತ್ರಧಾರಿಗಳು. ಶ್ರೀ ಖಾನಾವಳಿಯ ಮಾಲೀಕ , ಅಲ್ಲಿಗೆ ಒಬ್ಬ ಪುಡಿ ರೌಡಿ ತನ್ನ ಹಿಂಬಾಲಕನ ಜೊತೆ ಬರ್ತಾನೆ. ರೌಡಿ ಪಾತ್ರಧಾರಿ ಕಲಾವಿದ ನಮ್ಮ ಲೂಸ್ ಮಾದನ ಬ್ರದರ್ ರೀತಿ ಇರೋದು, ಅದೇ ಸಣ್ಣ, ಅದೇ ಬಳುಕಾಡೋದು . ಅಣ್ಣ..! ಅಂತ ಅವಾಜ್ ಹಾಕೋದು, ಆದ್ರೆ ಆತ ಭಯಂಕರ ಹೆದರು ಪುಕ್ಲ. ಅಲ್ಲಿಗೆ ಬಂದ ಕ್ರೈಂ ರಿಪೋರ್ಟರ್ ಆತನನ್ನು ಸಂದರ್ಶಿಸ್ತಾನೆ. ಅಣ್ಣ ಗೊತ್ತಾ ! ಎನ್ನುತ್ತಾ ಮಾತಾಡುವ ರೀತಿ-ಆ ರೀತಿ ಕಾರ್ಯಕ್ರಮಕ್ಕೆ ಮಜ ಕೊಡ್ತು. ಮಧ್ಯ ಮಧ್ಯ ಸಾಧು ಕೋಕಿಲ ಅವರ ಸಿನಿಮಾಗಳ ತುಣುಕುಗಳು. ತುಂಬಾ ಚೆನ್ನಾಗಿ ಮಿಕ್ಸ್ ಏನ್ ಮ್ಯಾಚ್ ಮಾಡಿದ್ದರು . ಸಾಧು ಕೋಕಿಲ ಸಖತ್ ಇಷ್ಟ ಆಗ್ತಾರ, ಅದರಲ್ಲೂ ಹಾಸ್ಯದ ಸನ್ನಿವೇಶಗಳಲ್ಲಿ ಅವರು ಗಂಭೀರವಾಗಿ ಇರುವ೦ತೆ ಇರುವ ಪಾತ್ರಗಳು ಹೆಚ್ಚು ಮಜ ನೀಡುತ್ತದೆ. ಒಟ್ಟಾರೆ ಖಾನಾವಳಿ ಅರ್ಧಗಂಟೆಯಲ್ಲಿ ರುಚಿಯಾದ ರೊಟ್ಟಿ ಊಟ ಕೊಡ್ತು. ಕಾರ್ಯಕ್ರಮ ಸಿದ್ಧ ಮಾಡೋದು ಅಂದ್ರೆ ಹೀಗೆ ಕಣ್ರೀ! ಪೂರ್ಣ ಓದಿಗೆ- ಮೀಡಿಯಾ ಮೈಂಡ್ ]]>
0 ಪ್ರತಿಕ್ರಿಯೆಗಳು