ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ : ಏನೆ ಹೇಳಿ ಪ್ರಣಯ ರಾಜ ಇಂದಿಗೂ ವೆರಿ ಸ್ಮಾರ್ಟ್ ಲುಕಿಂಗ್

@@ ಈ ಟೀವಿ ಕನ್ನಡ ವಾಹಿನಿಯಲ್ಲಿ ನಟ ಶ್ರೀನಾಥ್ ಅವರ ಆಟೋಗ್ರಾಫ್  ಪ್ಲೀಸ್ ಕಾರ್ಯಕ್ರಮ ಪ್ರಸಾರ ಆಯಿತು.ತುಂಬಾ ಚೆನ್ನಾಗಿತ್ತು ರಿ.  ಅಯ್ಯೋ ಹೊರಗಡೆ ಹೀಗೆ ಮನೆಯಲ್ಲಿ ಯಾವ ರೀತಿ ಇರ್ತಾರೋ ಎನ್ನುವ ಮಾತು ಸ್ವಲ್ಪ ಹೆಚ್ಚೇ ಆಡ್ತೀವಿ ನಾವು . ಅದು ಮನುಷ್ಯನ ಸಹಜ ಸ್ವಭಾವ. ಆದ್ರೆ ಶ್ರೀನಾಥ್ ಅವರ ವೃದ್ಧ ತಂದೆ, ಅವರಿಗೆ ನೈಂಟಿ ಪ್ಲಸ್ ಆಗಿತ್ತು, ಎಷ್ಟು ಚೆನ್ನಾಗಿ ಕಾರ್ಯಕ್ರಮದಲ್ಲಿ ಇನ್ವಾಲ್ವ್ ಆದ್ರು ಗೊತ್ತೇ . ಅದ್ಭುತ :-) .  ಮಕ್ಕಳು ನೋಡಿಕೊಳ್ಳುವುದು ವಿಶೇಷ ಸಂಗತಿಯಲ್ಲ ಆದರೆ ಸೊಸೆ ಗೀತ ಸಹ ಮಾವನವರ ಬಗ್ಗೆಇಟ್ಟ ಕಾಳಜಿ  ನಾಟಕ ಎಂದು ಅನ್ನಿಸಲಿಲ್ಲ ಬಿಡಿ. ನಾನು ಕೇಳಿದಂತೆ ಶ್ರೀನಾಥ್ ಸ್ವಲ ಹೆಚ್ಚೇ ಸ್ನೇಹ ಜೀವಿ ಪ್ರಾಯಶ:  ಆ ಒಂದು ಗುಣ ಅವರನ್ನು ಹೆಚ್ಚು ಜನಪ್ರಿಯ ಮಾಡಿದೆ ಎಂದು ಕಾಣುತ್ತದೆ. ಶ್ರೀನಾಥ್  ಅವರ ಮಗಳು ಅಮೇರಿಕಾದಲ್ಲಿ ಇದ್ದಾರೆ, ಅವರು ಮಾಡಿದ ಮುದ್ರಿತ ದೃಶ್ಯ ಪ್ರಸಾರ ಮಾಡಿದರು, ಆ ಹೆಣ್ಣುಮಗಳು ಹೇಳಿದ್ದಿಷ್ಟೇ, ಏನೆ ಹೇಳಿ ಅಪ್ಪ ನೀವು ಕಳಿಸಿಕೊಟ್ಟ ಪ್ರೀತಿ , ವಿಶ್ವಾಸ , ಸಹನೆ  ಯಾವುದೇ ಉತ್ತಮ ಗುಣ ಆಗಿರಲಿ ನಾನು ಅದನ್ನು ಅನುಸರಿಸುತ್ತಿದ್ದೇನೆ. …! ಹೀಗೆ ತಂದೆಯ ಮೇಲಿನ ಪ್ರೀತಿಯನ್ನು ವ್ಯಕ್ತ ಪಡಿಸಿದರು. ತಂದೆ ಕಂಡ್ರೆ ಮಕ್ಕಳಿಗೆ ಇಷ್ಟ ಇದ್ದೆ ಇರುತ್ತದೆ, ಆದರೆ ಕೆಲವು ಅಪ್ಪಗಳು ತುಂಬಾ ಸ್ಪೆಷಲ್  ಇರ್ತಾರೆ, ಶ್ರೀ ಆ ರೀತಿಯ ಅಪ್ಪ  ಎನ್ನುವುದು ಕಾರ್ಯಕ್ರಮದಲ್ಲಿ ಅವರ ಮಕ್ಕಳು ತಿಳಿಸಿದ ಪ್ರಸಂಗಗಳಿಂದ ತಿಳಿಯಿತು. ಏನೆ ಹೇಳಿ ಪ್ರಣಯ ರಾಜ ಇಂದಿಗೂ ವೆರಿ ಸ್ಮಾರ್ಟ್  ಲುಕಿಂಗ್. ಪೂರ್ಣ ಓದಿಗೆ :ಮೀಡಿಯಾ ಮೈಂಡ್]]>

‍ಲೇಖಕರು G

29 December, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading