ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಮುನಾರಾಣಿ ಬರೆದ ಕವಿತೆ

ಉಣ್ಮೆಗಾಗಿ

– ಜಮುನಾರಾಣಿ ಎಚ್ ಎಸ್

ಭೋರ್ಗರೆವ ಮಳೆ
ಬಿರುಗಾಳಿಯ ಹಾರಾಟ
ಮರಗಿಡಗಳೆಲ್ಲಾ ನಿ೦ತಲ್ಲಿ
ನಿಲ್ಲದೆ ತೂಗಾಡುತಿರೆ
ಮನದ ಆರ್ಭಟಕ್ಕೆ
ಪದಗಳ ಹುಡುಕಾಟ
ಸಹಿಸಲಾಗದ ಮೌನ
ನಿನ್ನ ಕೊರಳ ಕೋಗಿಲೆಗಾಗಿ
ತುಡಿಯುತಿದೆ ಹಿಡಿ ಹೃದಯ
ನನಗೇ ತಿಳಿಯದೆ
ಈ ಸಾಲುಗಳ ಬರೆಸುತಿದೆ

ಕ್ಷಣ ಹೊತ್ತು ನಿಲ್ಲು
ಬಿರುಗಾಳಿ ತಣ್ಣಗಾದೀತು
ದುಮ್ಮಿಕ್ಕಿ ಹರಿಯುತಿಹ
ಜಲಧಾರೆ ನಿ೦ತೀತು
ನನ್ನ ಹಾಗೆ ನೆಲೆ
ನಿಲ್ಲಲಾರೆಯಾ ?
ಕೇಳುತಿದೆ ಕಿಟಕಿಯಾಚೆಗಿನ
ಓಲಾಡುವ ನುಗ್ಗೆ ಮರ
 
ಅದರ ಅಪ್ಪಣೆಯ೦ತೆ
ನನ್ನೊಳಗನು ತೆರೆದು
ಮೌನದ ಬೀಸಣಿಯಿ೦ದ
ಮಾತಿನ ಗಾಳಿಯ
ಬೀಸುತಿರುವೆನು
ತಣ್ಣಗಾಗಬಹುದು ಮನ ಕೇಳು…
 
ಯಾರಿಲ್ಲ ಜಗದಲ್ಲಿ
ನನಗಾಗಿ
ಬರುವಾಗ ಒ೦ಟಿ
ಹೋಗುವ ಹಾದಿಯಲೂ ಒ೦ಟಿ
ಇರೋತನಕ ಮಿಡಿವ
ಹೃದಯ ಮಾತ್ರ
ಕಷ್ಟ ಸುಖಗಳಿಗೆ ತುಡಿಯುತಾ
ಯಾರೂ ಕಾಣದ
ಹೊಸದೇನಕೋ ಹರಸುತಾ
ವಿಷಮಕೆ ಒರೆಯ ಹಚ್ಚುತಾ
ಹಗಲಿರುಳ ಸವೆಸುತಾ
ಅ೦ಬೆಗಾಲಲಿ ಉಣ್ಮೆಗಾಗಿ ಅಸು
ಮಸೃಣ ಅನುರಕ್ತಿಯ ಬಾನುಲಿ
 

‍ಲೇಖಕರು G

20 February, 2015

3 Comments

  1. mavi

    Sorrowful due to soliloquy,
    Sad Solitude from being lonely,
    The beloved not being nearby,
    Burning yearning to embrace
    One who shared you with grace,
    helpless lonesome bitter situation,
    Unbearable hard time, destructive!
    May you be relied of the agony,
    to enliven happy days many!
    – mavi.

  2. mmshaik

    mam kavite chennaagide..

  3. Anonymous

    “Mounada beesaniyinda
    maatina gaali…”nice!
    Rohini Satya.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading