’ಅರವಿ ಒಗಿಯೋ ಪ್ರಸಂಗ’

– ಸೂರ್ಯಕಾಂತ ಬಳ್ಳಾರಿ

ಮುಗಳಿಹಾಳ


ಸರ್ ಜಳಕ ಮಾಡಾಕ ಹೋಗಾಣ್ರೀ ಅಂತ ರೂಮಲ್ಲಿ ಇದ್ದ ಮಕ್ಕಳೆಲ್ಲ ಕೇಳಿದ್ರು. ಆಯ್ತು ನಡೀರಿ ಅಂತ ಹೇಳಿದ್ದೇ ತಡ ಎಲ್ಲರೂ ಅಡುಗೆ ಕೋಣೆಗೆ ದೌಡಾಯಿಸಿದರು. ‘ಏ ಅಲ್ಲೇನ್ ಕೆಲ್ಸಾನೋ ನಿಮಗ? ಬರ್ರಿ ಮತ ಹೋಗೋಣು’ ಅಂತ ಹೇಳ್ದೆ. ‘ಸರಾ ಮಂಜಾ ಉಪ್ಪು ತೊಗೊಂಡಾನ್ರಿ, ದುಂಡ್ಯಾ ಕಾರಪುಡಿ ತಗೊಂತದಾನ್ರಿ’ ಅಂದ ಮಯ್ಯಾ. ಲೇ ಜಳಕ ಮಾಡಾಕ ಇವ್ಯಾಕ್ರೋ ಅಂದ್ರೆ, ಅಲ್ಲಿ ಹುಂಚೆಣ್ಣು ಸಿಗ್ತದಲ್ರಿ ಅದನ್ನ ತಿನ್ನಾಕ್ರಿ ಅಂತಂದ ದುಂಡ್ಯಾ ಪೇಪರ್ನೊಳಗ ಕಾರಪುಡಿ ಮಡಚಿ ಇಟ್ಕೊಳ್ತ. ಸರಿ ನಡೀರಿ ಅಂತ ಕೊಳೆ ಆಗಿದ್ದ ಅಷ್ಟೂ ಬಟ್ಟೆಗಳನ್ನ ಬ್ಯಾಗಿಗೆ ತುರ್ಕೊಳ್ಳಾಕ ಹೇಳಿ ನಂಗ ಬೇಕಾಗಿದ್ದ ಸಾಮಾಗ್ರಿ ತರಲು ಅಂಗಡಿ ಕಡೆ ಹೊಂಟೆ.
ಮೊನ್ನೆ ತಾನೆ ಕೊಟ್ಟ ಸಕರ್ಾರದ ಸೈಕಲ್ಗಳನ್ನ ದುಂಡ್ಯಾ, ಮಯ್ಯಾ ಹೆಗಲಿಗೊಂದೊಂದು ಬ್ಯಾಗು ಏರಿಸಿಕೊಂಡು ಹತ್ತಿದರು. ಸರಿ ನಾನು, ಸಂಜಾ, ಮಂಜಾ ನಾನೇ ಕೊಂಡ್ಕೊಂಡ ಬೈಕನ್ನೇರಿ ಕೆನಾಲ್ ಕಡೆಗೆ ನಡದ್ವಿ. ಹೋಗಿ ನೋಡಿದ್ರ ಕೆನಾಲಿನಾಗ್ ನೀರೇ ಇಲ್ಲ. ಛಲೋ ಆತ ಬಿಡ್ರಿ ನೀರಿಲ್ಲದ್ದು. ನನಗ ಈಜು ಬರೋದಿಲ್ಲ ಅನ್ನೋದಾದ್ರು ಗೊತ್ತಾಗ್ಲಿಲ್ಲ. ಏ ಏನ್ಮಾಡೋನ್ರಪ, ಎಲ್ಲಿಗೋಗೋಣು ನಮ್ಮ ಸ್ವಚ್ಛತಾ ಆಂದೋಲನ ಮಾಡಾಕ ಅನ್ನೋದ ತಡ ಸರಾ ಶಿವ್ಯಾಗೋಳ ಹೊಲದಂತ್ಯಾಕ ಹಳ್ಳ ಐತ್ರಿ. ಅಲ್ಲಿ ಮೀನೂ ಸಿಗ್ತಾವಂತ. ಅರವಿ ಒಗದು ಮೀನು ಹಿಡಿಯೋಣ್ರಿ ಸರಾ ಅಂದ್ರು. ಬೇರೆ ದಾರಿಯಿಲ್ಲದೇ ಅವರು ಹೇಳಿದ ಕಡೆ ಬೈಕ್ ಓಡಿಸಿದೆ. ಹೋಗ್ತಾ ದಾರಿಯಲ್ಲಿ ಹುಂಚಿಮರ ನೋಡಿ ಸೈಕಲ್ಗಳು ಆಟೋಮೆಟಿಕ್ ನಿಂತ್ವು. ಎಲ್ಲರೂ ನಾಮುಂದು ತಾಮುಂದು ಅಂತ ಕಲ್ಲ್ ತೂರಾಕ ಹತ್ರು, ಸರಿ ನಾನೇನು ಕಡಿಮೆ ಅಂತ ಒಂಡೆರಡು ಕಲ್ಲು ಗುರಿ ಇಟ್ಟು ಹೊಡ್ದೆ ನೋಡ್ರಿ. ಇಟ್ಟ ಗುರಿಯಿಂದ ಫರ್ಲಾಂಗ್ ದೂರದಾಗ ಹೊಂಟ್ವು. ಇನ್ನ ಪ್ರಯತ್ನ ಮಾಡಿದ್ರೆ ಹುಡುಗರು ನಗತಾರಂತ ಸುಮ್ನೆ ಬಂದು ಬೈಕಿಗೊರಗಿ ನಿಂತೆ.. ಆ ಕಡೆಯಿಂದ ಯಾರೋ ಬಂದ್ರು. ಅವರನ್ನ ನೋಡಿದವರನೇ ಲೇ ಓಡು ಓಡು, ಮಗನ ಕಸ್ಕೋತಾರ ನೋಡು ಅಂತ ಹ್ಯಾವೀಲೆ ಓಡಾಕತ್ರು. ಬರ್ತಿದ್ದ ಹಿರೀ ಮನ್ಷ ಯಾವೂರಾರಲೇ ಮಕ್ಕಳ, ಹುಂಚೆಣ್ಣ ಕಂಡೀರೋ ಇಲ್ಲೋ, ಬರ್ರಿ ನಿಮ್ಮನ್ನ…. ಊರಿಂದ ಈಟ ದೂರಿದ್ರೂ ಈ ಮಕ್ಕಳ ಧಾನಲಿ ತಪ್ಪವಲ್ದ ಅಂತ ಬಯ್ಕೋತಾನೆ ನನ್ನಕಡೆ ಬಂದ್ರು. ಸರಾ ಇಲ್ಲೆ ನಿಂತ್ ನೋಡಾಕತ್ತೀರಿ. ನಿಮ್ಮುಂದೇನ ಇವರು ಹಿಂಗ ಮಾಡ್ತಾರು. ನೀವಾರ ಹೇಳ್ಬಾರದೇನ್ರಿ ಅಂದ್ರು. ಹೌದು ನಾನೇ ಹೇಳಿದ್ದು ಅಂತ ಹೆಂಗ್ಹೇಳೋದು. ಹೌದೌದು ನಾನೂ ಏನಾರ ಮಾಡ್ತಾರ ಇವ್ರು ಅಂತ ನೋಡಾಕತ್ತೀನಿ ಅಂದೆ. ಅವರು ಏನೇನೊ ಗೊಣಕ್ಕೋತ ಹೋದ್ರು.
ಹಳ್ಳದ ದಂಡಿಗೆ ಬಂದ್ವಿ. ನೋಡಾಕ ಎಷ್ಟ ಛಲೋ ಐತಲಾ ಈ ಜಗಾ. ಇಷ್ಟ ದಿನಾ ಬಂದೇ ಇರಲಿಲ್ಲ, ಭಾರೀ ಔಟಿಂಗ್ ಆತ ಬಿಡ್ರಿ ಅಂತ ಮನಸಿನ್ಯಾಗ ಹೇಳ್ಕೊಂಡೆ. ಹಳ್ಳದಲ್ಲೆಲ್ಲ ಆಪ್ ಬೆಳದಿತ್ತು. ಹಂ.. ಆಪ್ ಬೆಳದೈತಿ ನಿಜ. ದಿಲ್ಲಿ ತುಂಬ ಬೆಳೆದ ನಿಂತೈತಿ. ಆ ಆಪ್ ಅಲ್ಲಿದು. ಆಪ್ ಅನ್ನೋ ಹುಲ್ಲು. ಸಾ ಇಲ್ಲಷ್ಟೇ ಯಾಕ್ ಬೆಳದೈತಿ ಅಂತ ಸಂಜಾ ಕೇಳ್ದ. ನೀರಿದ್ದಲ್ಲಿ ಬೆಳಿತೈತಪಾ ಅಂತ ಹೇಳಿ ಬ್ಯಾಗಿನಿಂದ ಅರವಿ ತೆಗ್ಯಾಕ ಕುಂತ್ನಿ. ಸಾರ ಈ ಆಪ್ ಮಲಪ್ರಭಾ ಡ್ಯಾಮ್ನಾಗ ಯಾವಾಗ್ಲೂ ನೀರಿದ್ರೂ ಯಾಕ ಬೆಳದಿಲ್ರಿ ಅಂದ ಮಂಜಾ. ಲೇ ಸುಮ್ನ ಅರವಿ ಒಗ್ಯಾವರೋ ಇಲ್ಲ ಕಡತ ಬೇಕೋ ಅಂತ ಗದರಿಸಿ ನನ್ನ ತಿಳುವಳಿಕೆ ಕೊರತೆ ಮುಚ್ಚಿದ್ನಿ. ಎಲ್ಲರೂ ಅಂದ್ರ ಹುಡುಗ್ರ ಅಷ್ಟ ಅರವಿ ಕಳದು ಚಡ್ಡಿ ಮ್ಯಾಲ ನನ್ನ ಅರವಿ ತೊಳಿಯಾಕ ನಿಂತ್ರು. ಸಾರ್ ಒಂದಾ ಕಲ್ಲೈತ್ರಿ. ಇದು ನಂಗಾತು ಅಂತ ಕಬ್ಜಾ ಮಾಡ್ಕಂಡು ನಿಂತ ದುಂಡ್ಯಾ. ಏ ಕಲ್ಲಿಗೇನ ಕಡಿಮಿ ತಡಿ ನಾನೂ ತರ್ತೀನಿ ಅಂತ ಎತ್ತಾಕ ನೀಗುವಷ್ಟು ದೊಡ್ಡದನ್ನ ತಂದ ಮಯ್ಯಾ. ಸಾ ಇದ ಪೂತರ್ಿ ಕಪ್ಪಿಮಾಸ ಕಟ್ಯತ್ರಿ ಅಂದ ಮಂಜಾ, ಲೇ ಒಂದು ಕಲ್ಲ್ ತಗೊಂಡ್ ತಿಕ್ ಹೊಕ್ಕೈತಿ ಅಂದೆ. ಎಷ್ಟೇ ತಿಕ್ಕಿದ್ರೂ ಅದೇನ್ ಹಸನಾಗ್ಲಿಲ್ಲ. ಸರಿ ಇಷ್ಟಕೊಂದ ಅರವಿ ಹೆಂಗ್ ಒಗಿಯೋನ್ರಲೇ ಅಂತ ನಾನು ಪೇಚಾಡುತ್ತಿರುವಾಗಲೇ ಒಬ್ಬೊಬ್ಬರು ಒಂದೊಂದು ಅಂಗಿ ತಗೋಂಡ ಹಾಕ್ಕೋಳ್ಳಾಕತ್ರು. ಲೇ ತೊಳಿರೋ ಅಂದ್ರೆ ನನ್ನಂಗಿಗೋಳ್ನ ಯಾಕ ಹಾಕ್ಕೋಳ್ಳಾಕತ್ತೀರಿ ಅಂದೆ. ಸರ ಈಗ ನೋಡ್ರಿ ಅಂತ ಎಲ್ರೂ ನೀರಿನೊಳಗ ಉಳ್ಳಾಡಕ್ ಸುರು ಮಾಡಿದ್ರು. ಲೇ ಮಂಜಾ ನೀ ಮೊದ್ಲು ನನ್ನ ಅಂಗೀಗ ಸಾಬ್ನ ಹಚ್ಚ, ಮಯ್ಯಾ ನೀ ಇಲ್ಲಿ ಬಾ ನಾ ನಿನ್ನ ಅಂಗೀಗ ಹಚ್ತೀನಿ ಅಂದ ದುಂಡ್ಯಾ. ಅಬ್ಬಾ ಸಾರ್ಥಕ ಆತಪ. ಅರಿವಿ ಒಗಿಯೋ ಪಸಂದ ಐಡಿಯಾ ಹುಡುಕೀರಿ ಮಕ್ಕಳ ಅಂದ ನೋಡಾಕತ್ನಿ. ಸಂಜಾ ಈಗ ನೀ ಬಗ್ಗ ಅರಿವಿ ಕುಕ್ಕತೀನಿ ಅಂತ ಒಬ್ಬರ ಬೆನ್ನಮೇಲೆ ಒಬ್ಬರು ಅರವಿ ಕುಕ್ಕಿ ಕುಕ್ಕಿ ಹಸನ ಮಾಡಾಕತ್ರು. ಸರಾ ಇಂವ ಬೇಕಂತ್ಲೇ ಜೋರಾಗಿ ಕುಕ್ಕಾತಾನ್ರಿ ಅನ್ನೋದು ಸಂಜಾನ ಕಂಪ್ಲೇಂಟು. ಏ ಯವ್ವ ಹಿಂಗ ಕುಕ್ಕಲಿಲ್ಲಂದ್ರ ಹಸನಾಗೋದಿಲ್ಲ ಅಂದ ಮಯ್ಯಾ.
ಸರ ಈ ಪ್ಯಾಂಟ್ ಈಟುದ್ದ ಯಾಕೈತ್ರಿ ಅಂತ ಕೇಳ್ದ ಮಂಜಾ ನನ್ನ ಪೈಜಾಮ ಹಿಡ್ಕೊಂಡು. ನನ್ನ ಕುತಿಗೀಗಿ ಕಟ್ಟೀದ್ರೂ ಉದ್ದ ಆಕ್ಕೈತ್ರಿ ಅಂದ. ಏ ಇದು ರಿಂಕಲ್ ಪ್ಯಾಂಟ್, ಹಾಕ್ಕೋಂಡ ಮ್ಯಾಲ ಕರೆಸ್ಟ್ ಆಕ್ಕೈತಿ ಅಂದ ದುಂಡ್ಯಾ. ನಿಂಗ್ಹೆಂಗ ಗೊತ್ತಪ ಮಂಜಾನ ಮರುಪ್ರಶ್ನೆ. ಎಲ್ರೂ ಗೊಳ್ ಅಂತ ನಗಾಕತ್ರು. ಯಾಕ್ರಲೇ ಅಂದೆ. ಸಾ ಇಂವ ನೀವಿಲ್ದಾಗ ಹಾಕ್ಕೊಂಡಿದ್ರಿ ರೂಮ್ನಾಗ. ಏನಾ ಯವ್ವಾ ನೀ ಆ ಅಂಗಿ ಹಾಕ್ಕೊಂಡಿದ್ದಿಲ್ಲೇನ ಅಂತ ದುಂಡ್ಯಾ ಗುಟ್ಟು ರಟ್ಟು ಮಾಡೋದು ಅನಿವಾರ್ಯ ಆದಾಗ ಹೇಳ್ದ. ಸರಿ ಬಿಡ್ರಿ, ಈ ಅರವಿನಾದ್ರೂ ನಾನಷ್ಟೇ ಹಾಕ್ತೀನಿ ಅಂದ್ಕೊಂಡಿದ್ದೆ. ನೀವೂ ಹಾಕಿ ಫ್ಯಾಷನ್ ಷೋ ಮಾಡ್ತಿರ್ತೀರಿ. ಸರ ಈ ಬ್ಲಾಕ್ ಸ್ವೆಟರಿನ್ಯಾಗ ಛಳಿ ಬಾಳ ಆಕ್ಕೈತಲ್ರಿ ಅಂದ ಮಯ್ಯಾ. ಲೇ ಯಪ್ಪ ಸುಮ್ನ ಕೆಲಸ ಮಾಡ್ರೋ ಅಂದೆ ಸಂಕಟದಲ್ಲಿ.
ಸರ ನನ್ನ ಸಾಬ್ನಾ ಕಾಣವಲ್ದರಿ ಅಂದ ಸಂಜಾ. ಲೇ ಅಲ್ಲೇ ಎಲ್ಯಾರ ಇಟ್ಟಿರಬೇಕು ಸರ್ಯಾಗಿ ನೋಡು ಅಂದೆ. ಇವನ ಬೆನ್ನ ಮ್ಯಾಲ ಇಟ್ಟಿದ್ನಿರೀ ಅಂದ. ಸರ ನಂಗೇನ ಗೊತ್ತಿಲ್ರಿ ಅರವಿ ಹಿಂಡಾಕ ಬಗ್ಗಿದರ ಇಂವ್ಯಾಕ ಇಡ್ಬೇಕ್ರೀ, ನಾ ಏನ ಇಡ ಅಂತ ಹೇಳೀನಿ. ನೀನ ಹುಡ್ಕ್ ನಂಗೇನ ಗೊತ್ತಿಲ್ಲ ಅಂದ ಮಯ್ಯಾ. ಸರ ಇಡಾಕ ಜಾಗಾ ಎಲ್ಲೈತಿ ಅದಕ್ಕ ಇಟ್ಟಿದ್ನಿರಿ ಅಂದ ಸಂಜಾ. ಲೇ ಹತ್ತು ರೂಪಾಯಿ ಹಾಳಾಗ್ಹೋತು ಅದ್ನ ಬಿಡು ಬ್ಯಾರೇ ಸಾಬ್ನ ತಗೋ, ಲೇ ದುಂಡ್ಯಾ ನಿಂದ ಸ್ವಲ್ಪ ಕೊಡವಂಗ ಅಂದ್ನಿ. ಹಿಂಡಿಂಡಿ ಹಾಕಿದ್ರು. ನಾನೂ ಸಹಾಯ ಮಾಡ್ತಿದ್ದೆ. ಮಯ್ಯಾ ಸೊಂಟದ ಸುತ್ತಾ ಟವೆಲ್ ಸುತ್ಕೋಂಡ್ ಮಂಜಾನ ಮುಂದ ಸುತ್ತಾಕತ್ತಿದ್ದ. ಲೇ ಅದ್ನ್ಯಾಕ ಹಂಗ ಸುತ್ಕೊಂಡಿ ಒಳಾಗ ಚಡ್ಡಿ ಐತಲಾ ಅಂದ್ರೆ, ಇಂವ ಸಾಬ್ನ ಹಚ್ಚಾಕತ್ತಾನ್ರೀ ಅಂದ ಮಯ್ಯಾ. ಸಾಯ್ರೀ ಮಕ್ಕಳಾ. ನನ್ನ ಅರವಿ ಗತಿ ಮುಗೀತು ಅಂದ್ಕೊಂಡು ತೊಳಿಯಾಕತ್ನಿ.
ಲೇ ದಿಂಬ್ ಕವರ್ಗಳು, ಉಲ್ಲನ್ನಿಂದ ಟೋಪಿ ತಂದಿದ್ವಲ್ಲ ಎಲ್ಲಿ ಕಾಣವಲ್ವು ತೊಳದ್ಹಾಕೀರೋ ಏನ ಅಂತ ಕೇಳ್ದೆ. ಸರಾ ದುಂಡ್ಯಾ ಮಂಜಾ ಮೀನ ಹಿಡಿಯಾಕ ಅಲ್ಲಿ ಹಾಕಿಬಂದಾರ್ರಿ ಅಂದ ಮಯ್ಯಾ. ಲೇ ದಿಂಬ ಕವರಿನ್ಯಾಗ ಮೀನಾ ಹಿಡಿತಾರೂ, ದನಕಾಯಾರ ತಂದು ತೊಳೀರಿ ಲಗೂ. ಜಳಕ ಮಾಡೂದ ಬ್ಯಾಡೇನ ಅಂದೆ. ದುಂಡ್ಯಾ ಮಂಜಾ ಜತಿಯಾಗಿ ಓಡಿದ್ರು. ಅಯ್ಯೋ ಇವರ ಕೈಯಾಗ ಅರವಿಗಳು ಏನೇನಾಗಕತ್ಯಾವು ಅನ್ಕೊಂಡು ಉಳಿದಿದ್ದ ಎರಡು ಬನಿಯನ್ ಒಗದ್ಹಾಕೀನಿ. ಎಷ್ಟೊತ್ತಾದ್ರೂ ಹೋದವರು ಬರಾಕವಲ್ರು ಏ ಏನಾತು ನೋಡ್ರಲೇ ಅಂದೆ ಸಂಜಾಗ. ಅಂವ ಹೋಗಿ ನೋಡಿ ಸರ ಅವರಿಬ್ರೂ ಮೀನು ತಿನ್ನಾಕತ್ಯಾರ್ರಿ ಅಂದ ಸಂಜಾ, ಲೇ ಹಸಿ ಮೀನುಗಳ್ನ ತಿಂತಾರೇನೋ ಥೂ ಅಂದೆ. ಸಾ ನೀವು ಹೊಳೀಗಿ ಜಳಕಾಕ ಹೋದಾಗ ಸಣ್ಣಸಣ್ಣವನ್ನ ತಿಂತಿದ್ವಿ ಅಂದಿದ್ರಲ್ರಿ ಅಂತಂದ ದುಂಡ್ಯಾ. ಲೇ ನಾನು ಹೇಳಿದ್ದು ಸೀಗಡಿ. ನೀವು ಕಪ್ಪಿ ಮರಿಗಳನ್ನ ತಿಂತಿದೀರಲ್ಲೋ ಅಂದೆ. ಇವು ಮೀನಲ್ರೀ ಅಂತ ಬಾಯಲ್ಲಿದ್ದಿದ್ದನ್ನ ವಾಕ್ ಎಂದು ಉಗುಳಿದ್ರು. ಕಪ್ಪಿ ಮರಿಗಳು ಮೀನಿನಗತೇನೆ ಇರ್ತಾವು ಆದ್ರ ಇಲ್ಲೆಲ್ಲೂ ಮೀನುಗಳೆ ಇಲ್ಲ ಅಂದೆ. ತಕ್ಷಣ ಮಯ್ಯಾ ಕೇಹೂ ನಾ ಎಲ್ರಿಗೂ ಹೇಳಾಂವ, ಇವ್ರು ಕಪ್ಪಿಮರಿ ತಿಂದಾರಂತ ಹೇಳಾಂವ ಅಂತ ಜಿಗಜಿಗದು ಕೂಗ್ಯಾಡಾಕತ್ತ. ಸಂಜಾನೂ ಜೊತಿಯಾಗಿ ಕುಣಿಯಾಕ್ಕತ್ತ.
ಏ ಯವ್ವಾ ಅವತ್ತ ಸರ್ ಮೀನು ಅಂತ್ಹೇಳಿ ಅದ್ಯಾದೋ ಮಟನ್ ತಿನಿಸಿದ್ರಲ್ಲ, ಅವತ್ತ ನೀವು ಎಲ್ರೂ ತಿಂದಿಲ್ಲ? ನಾವ್ ಯಾರಿಗಾರ ಹೇಳಿವೇನ ಅಂತ ದುಂಡ್ಯಾ ಅಂದ ಕೂಡಲೇ ಎಲ್ಲರ ಬಾಯಿ ಬಂದ್. ಅದಾ ಗುಂಗಿನ್ಯಾಗ ಜಳಕ ಮಾಡ್ಕೊಂಡ ಮನಿಕಡಿ ಬಂದ್ವಿ. ಆಮೇಲೆ ಹೇಳಿದ್ನಿ- ಲೇ ಆಹಾರ ಅಂತ ದೇಹಕ್ಕ ಸೇರಿದ ಯಾವದೂ ಕೆಟ್ಟದಲ್ಲ. ಈ ದೇಹದಿಂದ ಹೊರಾಗ ಬರ್ತಾವಲ್ಲ ಅವೆಲ್ಲ ಕೆಟ್ಟವು. ಏನೂ ಆಗೋದಿಲ್ಲ ಸುಮ್ಮರಿ ಅಂದೆ. ಸ್ವಲ್ಪ ಧೈರ್ಯ ಬಂದಂಗಾಗಿ ಗೆಲುವಾದ್ರು. ಅಂದಂಗ ಮಟನ್ ಯದರ್ದು ಅಂತ ನನ್ನ ಕೇಳಬ್ಯಾಡ್ರಿ. ಮನಿ ಬಿಡಿಸಿಗಿಡಸ್ಯಾರ ಸುಮ್ನಿರ್ರಿ. ನೀವೂ ಯಾರಿಗೂ ಹೇಳಬ್ಯಾಡ್ರಿಮತ್ . . . . ,
 

‍ಲೇಖಕರು G

February 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

೧ ಪ್ರತಿಕ್ರಿಯೆ

  1. Vithal Dalawai

    ಆದಷ್ಟು ಲಗೂ ನಿಮ್ನ ಮನಿ ಬಿಡುಸೂದು ಚಲೋ. . . ಮಡಿ ಮೈಲಿಗೆ ಗೊತ್ತಿಲ್ಲದ ರಂಡೆಗಂಡರು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: