–ಎಂ ವಿ ಶಶಿಭೂಷಣ ರಾಜು
ಬೆಂಕಿ ಬೆಳಕಾಗುವ ಕ್ಷಣ
ಹಿರಿದೀಪಗಳ ಬತ್ತಿ ಮುಗಿಯುವಾಗ
ಕಿರುದೀಪಗಳು ಬೆಳಕು
ಕೊಡಬಹದೇ
ಕಿರುದೀಪಗಳು ಸ್ವಲ್ಪ ಎಣ್ಣೆಯ
ಹರಿಸಿ
ಹಿರಿದೀಪಗಳ ಇನ್ನೂ ಸ್ವಲ್ಪ ಹೊತ್ತು
ಬೆಳಗುವಂತೆ ಮಾಡಬಹದೇ
ದೀಪಗಳ ಹಾವಳಿಯಲ್ಲ
ಬತ್ತಿದ ದೀಪವ ಹೊತ್ತಿಸುವ ಸಾಲು
ದೀಪಗಳು
ಆರಲು ಬಿಡದೆ ಕಾಯುವ
ನಿಜ ದೀಪಗಳು
ಆರಿದ ದೀಪಗಳ ಆತ್ಮ
ಅಲುಗಾಡದಂತೆ
ಗೌರವದಿಂದ ಕಳಿಸಿಕೊಡಬೇಕು
ಮಣ್ಣಿನ ದೀಪಗಳು
ಮಣ್ಣಲಿ ನೆಮ್ಮದಿ ಕಂಡುಕೊಳ್ಳಲಿ
ಮತ್ತದೇ ಮಣ್ಣಿನಲಿ
ಅರಳುತ್ತವೆ ಅನೇಕ ದೀಪಗಳು
ಬತ್ತಿ ಬರಿದಾಗುವ ತನಕ
ಬೆಳಕಾಗುತ್ತವೆ
ಕೆಲದೀಪಗಳ ಬೆಳಕು
ಬೆಂಕಿಯಾಗಬಹುದು
ಸಹಿಸಲು ಕಲಿಯಬೇಕಾಗುತ್ತದೆ
ಬೆಂಕಿಯೂ ಬೆಳಗಾಗಬಹುದು
ಬೆಂಕಿ ಬೆಳಕಾಗುವ ಕ್ಷಣಕ್ಕೆ
ಕಾಯಬೇಕಷ್ಟೇ
ಸುತ್ತಲೂ ದೀಪಗಳಿರಲು
ಬದುಕು ಬೆಳಕಾಗದೇನು
ದೀಪಗಳ ಬೆಳಗುವ ಮನಸುಗಳ ಬೆಳಸಬೇಕಷ್ಟೆ
ಗಾಳಿ, ಮಳೆಗೆ ಕಾಯುವುದೊಂದೇ
ಗುರಿ
ಬತ್ತಿ ಮುಗಿಯುವವರವರೆಗೆ ಎಣ್ಣೆ
ಸುರಿದರೆ
ಸರಿ
ಒಂದು ದೀಪವ ಮತ್ತೊಂದು ದೀಪವ
ಬೆಳಗಿದರೆ
ಸರಪಳಿಯಂತೆ
ಎಲ್ಲ ದೀಪಗಳೂ
ಬೆಳಗುತ್ತವೆ
ಆಗ
ಜಗವೆಲ್ಲಾ ಬೆಳಕಾಗುತ್ತದೆ






0 Comments