ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೌಡಕಿಯ ಗೆಜ್ಜಿ ಮೌನವಾಗಿತ್ತು..

ಸತ್ಯ

ಶಮಾ ಜಮಾದಾರ

ಜೋಗತಿಯ ಚೌಡಕಿಗೆ
ಮನದ ಮುಲುಕುಗಳ
ರಾಗ ಗೊತ್ತಂತೆ..
ಫಕೀರನ ಏಕತಾರಿಗೆ
ಬದುಕಿನ ಭವಿಷ್ಯ ಗೊತ್ತಂತೆ
ಎರಡೂ ಇದಿರುಬದಿರಾಗಿ
ಮನಸಿನ ಅಂಗಿ ಕಳಚಲು
ಸತ್ಯ ಬೆತ್ತಲಾಗಿತ್ತು.
ಆ ಜೋಡಿ ಕಂಗಳಲಿ
ಕೊಳ್ಳಿದೆವ್ವ ಕುಣಿಯುತ್ತಿತ್ತು.
ಫಕೀರನ ಖಾಲಿ ಚಮ್ಲಾದಲಿ
ಬರೀ ನಿಟ್ಟುಸಿರಿತ್ತು.

ಜೋಗತಿಯ ಚೌಡಕಿಯ
ಗೆಜ್ಜಿ ಮೌನವಾಗಿತ್ತು.
ಊಳಿಡುವ ಗುಳ್ಳೆ ನರಿ
ಕಣ್ಣು ಮಿಟುಕಿಸಿ ನಕ್ಕಿತ್ತು.
ಮಸಣದಲಿ ಶಾಂತನಿದ್ದೆಯಲ್ಲಿದ್ದ
ಶವ ಎದ್ದು ಕುಳಿತಿತ್ತು..
ತನ್ನ ಘೋರ ಭೂತಕಾಲವನ್ನು
ನೆನೆದು ನಡುಗಿತ್ತು.

‍ಲೇಖಕರು avadhi

30 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading