ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೈತ್ರ  ಹುಸಿನಗೆ ಬೀರಿ ವಿಶ್ರಾಮ ಪಡೆಯುತ್ತಿದೆ..

ಸುಮತಿ ಕೃಷ್ಣಮೂರ್ತಿ

**

ಅಳುವ ಫೋಟೋಗಳನ್ನು 

ಗೋಡೆಗೆ ಯಾರೂ ತೂಗು ಹಾಕುವುದಿಲ್ಲ

ಹರಿದ ಬನೀನು ಅಕ್ಷರಶಃ ಅನಾಥ

ಮಿಂಚುತ್ತಿರುವ ಕಪ್ಪು ಸೂಟಿನಡಿಯಲ್ಲಿ

ಮುಟ್ಟು ನಿಂತ ಮುದುಕಿ

ಸ್ಯಾನಿಟರಿ ಪ್ಯಾಡು ಕೊಳ್ಳುತ್ತಿದ್ದಾಳೆ

ನಗರಗಳ ನಾಲಿಗೆ ತಣಿಸಿದ ಪಿಜ್ಜಾ ಬರ್ಗರ್ ಗಳು

ಹಳ್ಳಿಯೆಡೆ ದಾಪುಗಾಲಿಡುವ ಹುನ್ನಾರದಲ್ಲಿ

ಅದ್ಧೂರಿ ಪಾರ್ಟಿಗಳಲ್ಲಿ

ಡಯೆಟ್ಟು ಮಾಡುವ ಸಾಹುಕಾರ ಮಂದಿ

ಉಳಿದ ಅನ್ನ ಜೋಪಡಿಗಳಿಗೆ ಹಂಚಿ

ಪೋಸು ನೀಡುವ ಸಂಭ್ರಮದಲ್ಲಿ

ಹಿರಿಯರಿಗಲ್ಲ, ಮನೆಯ ದೈತ್ಯ 

ನಾಯಿಗಳಿಗೆ ನಿತ್ಯ ರಾಜೋಪಚಾರ

ಮಕ್ಕಳ ಬರ್ತ್ ಡೇ, ಕೇಕ್ ಎಂದರೇ

ಜಿಗುಪ್ಸೆ ಬಂದಿರುವ ಅನಾಥಾಲಯಗಳಲ್ಲಿ

ಗಂಟಲು ಹರಿದು ಹಾಡುವ ಕೋಗಿಲೆ

ಒಂಟಿಯಾಗಿಯೇ ಕುಳಿತಿದೆ

ಚೈತ್ರ  ಹುಸಿನಗೆ ಬೀರಿ ವಿಶ್ರಾಮ ಪಡೆಯುತ್ತಿದೆ

ಒಣ ಮರದ ಟೊಂಗೆಯಲ್ಲಿ 

‍ಲೇಖಕರು Admin MM

15 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading