ಚೇಳಿನ ರಾತ್ರಿ

     ಮೂಲ-ನಿಸ್ಸೀಮ್ ಎಜೆಕಿಲ್
vidya
ಭಾವಾನುವಾದ: ವಿದ್ಯಾ
ನನ್ನ ತಾಯಿಗೆ ಚೇಳು ಕಚ್ಚಿದ ರಾತ್ರಿ
ನನಗೆ ನೆನಪಿದೆ.
ಹತ್ತು ಗಂಟೆಗಳ ಸತತ ಮಳೆಗೆ
ಅದು ಅಕ್ಕಿಯ ಮೂಟೆಯ ಕೆಳಗೆ
ತೆವಳುತ್ತ ಬಂದಿತ್ತು.ವಿಷ ಇಳಿಸಿ, ಕತ್ತಲ ಕೋಣೆಯಲ್ಲಿ
ತನ್ನ ರಾಕ್ಷಸೀ ಬಾಲ ಹೊಳೆಸಿ
ಮತ್ತೆ ಮಳೆಗೆ ಒಡ್ದಿಕೊಂಡಿತ್ತು.scorpionನೊಣಗಳ ಸಮೂಹದಂತೆ
ರೈತರೆಲ್ಲ ಮುತ್ತಿ ಬಂದರು.
ಕೆಟ್ಟ ಚೇಳನ್ನು ನಿಶ್ಚಲವನ್ನಾಗಿಸಲು
ನೂರು ಬಾರಿ ದೇವರ ಹೆಸರು ಗುನುಗಿದರು.ಸುಟ್ಟ ಮಣ್ಣ ಗೋಡೆಗಳ ಮೇಲೆ
ದೈತ್ಯ ಚೇಳಿನ ನೆರಳು ಚೆಲ್ಲುವ
ಮೊಂಬತ್ತಿ ಮತ್ತು ಲಾಟೀನಿನೊಂದಿಗೆ
ಚೇಳಿಗಾಗಿ ಹುಡುಕಾಡಿದರು.
ಅದು ಸಿಗಲಿಲ್ಲ…
ಅದು ಹೊರಳಿದ ಪ್ರತಿಬಾರಿಯೂ
ತಾಯಿಯ ರಕ್ತದಲ್ಲಿ ವಿಷವಿಳಿದಿದೆ- ಅವರೆಂದರು…

ಅದು ಅಲ್ಲಾಡದೆ ಕುಳಿತಿರಲಿ-ಅಂದರು.
ನಿನ್ನ ಕಳೆದ ಜನ್ಮದ ಪಾಪವೆಲ್ಲ
ಇಂದು ರಾತ್ರಿ ಸುಟ್ಟು ಭಸ್ಮವಾಗಲಿ-ಅಂದರು
ನಿನ್ನ ನರಳುವಿಕೆ, ನೋವು
ಮುಂದಿನ ಜನ್ಮದ ಪ್ರಾರಬ್ಧವನ್ನೆಲ್ಲ ಕಳೆಯಲಿ
ಈ ಮಿಥ್ಯೆಯ ಜಗತ್ತಿನಲ್ಲಿರುವ ಅಷ್ಟೂ ಕೆಡುಕುಗಳು
ಒಳಿತೆಲ್ಲದರ ವಿರುದ್ಧ ಕರಗಿ
ಸಮವಾಗಲಿ ನಿನ್ನ ನೋವಿನಿಂದ.
ವಿಷ ನಿನ್ನ ದೇಹವನ್ನು ಆಸೆ-ಆಕಾಂಕ್ಷೆಗಳಿಂದ
ಮುಕ್ತಗೊಳಿಸಿ ಶುದ್ಧಗೊಳಿಸಲಿ ಅಂದರು.

ಮತ್ತು ಅವಳನ್ನು ಅರ್ಥ ಮಾಡಿಕೊಂಡವರಂತೆ
ಶಾಂತರಾಗಿ ಅವಳ ಸುತ್ತ ಎಲ್ಲರೂ ಕುಳಿತರು.
ಹೆಚ್ಚು ಹೆಚ್ಚು ಮೊಂಬತ್ತಿಗಳು, ಲಾಟೀನುಗಳು,
ನೆರೆಯವರು, ಕ್ರಿಮಿಗಳು ಮತ್ತು ಬಿಡದೆ ಸುರಿವ
ಧಾರಾಕಾರ ಮಳೆ.

ಯಾವುದನ್ನೂ ನಂಬದ, ಬುದ್ಧಿಜೀವಿ ನನ್ನಪ್ಪ
ಶಪಿಸುತ್ತ, ಹರಸುತ್ತ
ಪುಡಿ, ಮಿಶ್ರಣ, ಮೂಲಿಕೆ, ಎಲ್ಲ ಪ್ರಯೋಗಿಸಿದ.
ಕೊನೆಗೆ ಸ್ವಲ್ಪ ಪ್ಯಾರಾಫಿನ್ ಸುರಿದು
ಕಡ್ಡಿ ಗೀರಿ ಬೆಂಕಿಯಿಟ್ಟ.
ಚೇಳು ಕಡಿದ ಹೆಬ್ಬೆರಳಿಗೆ
ಅಮ್ಮನ ಸಾರ ಹೀರಿ ಉರಿದ ಬೆಂಕಿಯನ್ನು
ನಾನು ನೋಡಿದೆ.
ಹಾಗೆಯೇ…ದೈವಭಕ್ತನೊಬ್ಬ ಮಣಮಣ ಮಂತ್ರ ಹೇಳುತ್ತ
ವಿಷ ತಹಬಂದಿಗೆ ತರಲು
ಕೊನೆಯ ವಿಧಿಗಳನ್ನು ಮಾಡಿದ್ದ.

ಇಪ್ಪತ್ತು ಗಂಟೆಗಳ ಬಳಿಕ
ವಿಷದ ಪ್ರತಾಪ ಇಳಿಯಿತು.

ಅಮ್ಮ ಇಷ್ಟೇ ಹೇಳಿದಳು
“ದೇವರು ದೊಡ್ಡವನು,
ಚೇಳು ನನ್ನ ಮಕ್ಕಳನ್ನು ಕಡಿಯಲಿಲ್ಲ, ಸದ್ಯ”

‍ಲೇಖಕರು admin

July 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. shama nandibetta

    Vidya, ಅಮ್ಮ ಇಷ್ಟೇ ಹೇಳಿದಳು
    “ದೇವರು ದೊಡ್ಡವನು,
    ಚೇಳು ನನ್ನ ಮಕ್ಕಳನ್ನು ಕಡಿಯಲಿಲ್ಲ, ಸದ್ಯ”

    Este aadaroo amma !!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: