ಚಿಕ್ ಚಿಕ್ ಸಂಗತಿ: 'ಎಷ್ಟು ಕಾಂಡೋಮ್ ಬೇಕು ಗೊತ್ತಾ?'

ಜಿ ಎನ್ ಮೋಹನ್ 

‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’ ಅಂದಳು
ನಾನು ಒಂದು ಕ್ಷಣ ಗರಬಡಿದಂತಾದೆ
ಹಾಗೆ ನನಗೆ ಕೇಳಿದ್ದು ಲೀಲಾ ಸಂಪಿಗೆ, ಡಾ ಲೀಲಾ ಸಂಪಿಗೆ
ತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿ ನನಗೆ ಈ ಪ್ರಶ್ನೆ ಎಸೆದಾಗ ನಾನು ಕಕ್ಕಾಬಿಕ್ಕಿಯಾದೆ
no handsಕಾಂಡೋಮ್ ಬಗ್ಗೆ ಮಾತನಾಡಲು ಇನ್ನೂ ‘ಶೈನಿಂಗ್ ಇಂಡಿಯಾ’ ಮುಜುಗರಪಡುತ್ತಾ ಕುಳಿತಿರುವಾಗ ಲೀಲಾ ಈ ಪ್ರಶ್ನೆ ಕೇಳಿದ್ದಳು
ಅವಳು ಹಾಗೆ ಕೇಳಲು ಕಾರಣವೂ ಇತ್ತು.
ಜಗತ್ತು ಒಲಂಪಿಕ್ಸ್ ಗೆ ಸಜ್ಜಾಗುತ್ತಿದೆ. ಎಲ್ಲರ ಕಣ್ಣೂ ‘ರಿಯೋ’ದತ್ತ
ಇನ್ನೇನು ಬೆರಳೆಣಿಕೆಯ ದಿನಗಳು
perform or perish ಅಷ್ಟೇ..
ಇಷ್ಟು ದಿನ ದೇಶ ದೇಶಗಳ ನಡುವೆ ಇದ್ದ ಮುಸುಕಿನ ಗುದ್ದಾಟ ಈಗ ಕ್ರೀಡಾರಂಗದಲ್ಲಿ
ಪ್ರತಿಯೊಬ್ಬರೂ ತಮ್ಮ ದೇಶವನ್ನು ಒಂದು ಯುದ್ಧ ಗೆಲ್ಲಿಸಿ ಕೊಡಲಿಕ್ಕೆ ಹೋಗುತ್ತಿದ್ದಾರೇನೋ ಎನ್ನುವ ಒತ್ತಡ
ಮಾಡು ಇಲ್ಲವೇ ಮಾಡಿ
ಅಂತ ಅವಳಿಗೆ ಒಲಂಪಿಕ್ಸ್ ರಾಜಕೀಯ ಬಣ್ಣಿಸುತ್ತಾ ಕೂತಿದ್ದೆ
ತಕ್ಷಣವೇ ಆಕೆ ಕೇಳಿದಳು ಏನಂದೆ ಪರ್ಫಾರ್ಮ್ ಆರ್ ಪೆರಿಶ್?
ಹೌದು, ಖಂಡಿತಾ ನಿಜ ಆದರೆ ನೀನು ಹೇಳಿದಂತೆ ಬರೀ ಕ್ರೀಡಾಪಟುಗಳಿಗಲ್ಲ
ಜಗತ್ತಿನ ಅನೇಕ ಮುಗ್ಧ ಹೆಣ್ಣು ಮಕ್ಕಳಿಗೂ
ನಾನು ಕಿವಿಯ ಮೇಲೆ ಇಡೀ ಲಾಲ್ ಬಾಗನ್ನೇ ಮುಡಿಸಿಕೊಂಡವನಂತೆ
‘ಅಲ್ಲಮ್ಮಾ ಅದಕ್ಕೂ ಇದಕ್ಕೂ ಏನು ಸಂಬಂಧ? ಜಗತ್ತಿನ ಎಲ್ಲೆಡೆ ಹರಡಿಹೋಗಿರುವ ಮುಗ್ಧ ಮಹಿಳೆಯರಿಗೂ- ಒಲಂಪಿಕ್ಸ್ ಗೂ..’ ಅಂದೆ
ಆಗಲೇ ಆಕೆ ನನ್ನತ್ತ ಆ ಪ್ರಶ್ನೆ ಎಸೆದಿದ್ದು
ಎಷ್ಟು ಕಾಂಡೋಮ್ ಬೇಕು ಗೊತ್ತಾ ಅಂತ
condom olympics1ಇಡೀ ಜಗತ್ತು ಒಲಂಪಿಕ್ಸ್ ಎಂದರೆ ಟಿ ವಿ ಪರದೆಯ ಮೇಲೆ ನಡೆಯುವುದು, ರಿಯೋ ಅಂಗಳದಲ್ಲಿ ನಡೆಯುವುದು ಮಾತ್ರ ಅಂದುಕೊಂಡುಬಿಟ್ಟಿದೆ
ಆದರೆ ಈ ಪರದೆಗಳ ಹಿಂದೆ ಜರುಗುವ ಸ್ಪರ್ಧೆಗಳೇ ಬೇರೆ
‘ಮನುಕುಲದ ಒಳಿತಿಗಾಗಿ’ ಎಂಬ ಸ್ಲೋಗನ್ ಗೂ ಅದಕ್ಕೂ ಏನೇನೂ ಸಂಬಂಧವಿಲ್ಲ
ಅದಿರಲಿ ಒಂದು ಒಲಂಪಿಕ್ಸ್ ಯಶಸ್ವಿಯಾಗಿ ನಡೆಯಬೇಕು ಎಂದರೆ ಎಷ್ಟು ಕಾಂಡೋಮ್ ಬೇಕು ಎಂಬ ಅಂದಾಜಿದೆಯಾ ಎಂದಳು
ಒಲಂಪಿಕ್ಸ್ ಎಂದರೆ ಕ್ರೀಡೆ, ಕ್ರೀಡಾಂಗಣ, ಜ್ಯೋತಿ, ಬೇಟನ್ ಎನ್ನುವ ಕಾಲ ಎಂದೋ ಮುಗಿದು ಹೋಗಿದೆ
ಒಲಂಪಿಕ್ಸ್ ಎನ್ನುವುದು ಕಾಂಡೋಮ್ ಗಳ ಆಟ ಕೂಡಾ ಎಂದಳು
ನಾನು ಪತ್ರಕರ್ತನ ವೇಷದಿಂದ ‘ಪಾಪ ಪಾಂಡು’ ವೇಷಕ್ಕೆ ಸ್ವ ಇಚ್ಛೆಯಿಂದ ಬದಲಾಗಿದ್ದೆ
ಒಂದು ಒಲಂಪಿಕ್ಸ್ ಎಂದರೆ 1 ಕೋಟಿಗೂ ಹೆಚ್ಚು ಕಾಂಡೋಮ್ ಬೇಕು .
ಒಬ್ಬ ಕ್ರೀಡಾಪಟು ಒಲಂಪಿಕ್ಸ್ ನಡೆಯುವ ಎರಡು ವಾರದಲ್ಲಿ ಸರಾಸರಿ 51 ಕಾಂಡೋಮ್ ಬಳಸುತ್ತಾನೆ ಗೊತ್ತಾ ಅಂದಳು
ಎಲ್ಲರೂ ಅಂದುಕೊಂಡಿದ್ದಾರೆ ಒಲಂಪಿಕ್ಸ್ ಸ್ಥಳ ಘೋಷಣೆ ಆದ ತಕ್ಷಣ ತಯಾರಾಗುವುದು ಆ ದೇಶ, ಒಲಂಪಿಕ್ಸ್ ಸಮಿತಿ, ಕ್ರೀಡಾಳುಗಳು ಅಂತ
ನಿಜ, ಆದರೆ ಅವರಿಗಿಂತ ಮುಂಚೆ ಸಿದ್ಧವಾಗುವುದು ಇಡೀ ಜಗತ್ತಿನ ವೇಶ್ಯಾ ಗೃಹಗಳು ಹಾಗೂ ಕಾಂಡೋಮ್ ಕಂಪನಿಗಳು
ಒಲಂಪಿಕ್ಸ್ ಎಂದರೆ ವೇಶ್ಯಾವಾಟಿಕೆಗೆ ಯುಗಾದಿ ಹಬ್ಬ ಇದ್ದಂತೆ
12 ದಿನದಲ್ಲಿ ವರ್ಷದ ಬೆಳೆ ಬೆಳೆಯಬೇಕು ಎಂದು ಮನುಷ್ಯರನ್ನೇ ತಿಂದು ಹಾಕುವ ಕಾರ್ಖಾನೆಗಳು ಹಲ್ಲು ಮಸೆದು ನಿಲ್ಲುತ್ತಾವೆ
ಇಡೀ ಜಗತ್ತಿನಲ್ಲಿ ಹೆಣ್ಣು ಮಕ್ಕಳ ತಲಾಷ್ ನಡೆಯುತ್ತದೆ.
ಕಪ್ಪು, ಬಿಳಿ, ಕಂದು, ಸಣ್ಣ, ದಪ್ಪ ಎನ್ನುವ ಬೇಧ ಇಲ್ಲದೆ ಇರುವ ಒಂದೇ ಕೈಗಾರಿಕೆ ಎಂದರೆ ಸೆಕ್ಸ್ ಉದ್ಯಮ ಮಾತ್ರ
ಹೆಂಗಸಾಗಿದ್ದರೆ ಸಾಕು ಅಂತ ನಿಟ್ಟುಸಿರಿಟ್ಟಳು
ಲೀಲಾ ಸಂಪಿಗೆ ಹೇಳುತ್ತಿರುವ ಯಾವುದೇ ವಿಚಾರವನ್ನು ಪ್ರಶ್ನಿಸುವ ಅಗತ್ಯ ನನಗಿರಲಿಲ್ಲ
ಆಕೆ ಸಂಪಿಗೆ ಎಂಬ ಊರಿನಿಂದ, ಕಟ್ಟಾ ಸಂಪ್ರದಾಯಸ್ಥ ಮನೆಯಿಂದ ಹೊರಟು ತಟ್ಟಿದ್ದು ಈ ಜಗತ್ತು ತಟ್ಟಲು ಒಲ್ಲೆ ಎನ್ನುವ ಮನೆಯ ಬಾಗಿಲುಗಳನ್ನು
leela sampige2ಆಕೆ ಊರೂರುಗಳನ್ನು ಸುತ್ತಿದಳು, ಲೈಂಗಿಕ ಕಾರ್ಯಕರ್ತೆಯರ ಮನೆಯ ಬಾಗಿಲು ತಟ್ಟಿದಳು
ಹಗಲು ರಾತ್ರಿ ಎನ್ನದೆ ಅವರ ಕಥೆಗಳನ್ನು ಕೇಳಿದಳು ಪೊಲೀಸ್ ಅಧಿಕಾರಿಗಳ ಬೆನ್ನು ಬಿದ್ದಳು
ಒಂದಿಷ್ಟು ಕಿರುಕುಳ ಇಲ್ಲದ ಬದುಕು ಧಕ್ಕಿಸಿಕೊಡಲು ಯತ್ನಿಸಿದಳು
ಮನೆ ಮನೆಯ ಕತ್ತಲೆಯಲ್ಲಿ ಉಳಿದು ಪ್ರತಿ ಕಣ್ಣ ಕಣ್ಣೀರನ್ನು ಅರಿತಳು
ಆಗಲೇ ಆಕೆಯನ್ನು ಪರಿಚಯಿಸುವಾಗ ‘ಬಾಂಡ್- ಜೇಮ್ಸ್ ಬಾಂಡ್’ ಎನ್ನುವಂತೆ ನಾನು ‘ಲೀಲಾ ಸಂಪಿಗೆ- ಡಾ ಲೀಲಾ ಸಂಪಿಗೆ’ ಅಂತ ಪರಿಚಯಿಸಿದ್ದು ಯಾಕೆ ಗೊತ್ತಾ
ಈ ಸುತ್ತಾಟಗಳನ್ನು ಆಕೆ ಕೇವಲ ಸುತ್ತಾಟಗಳಿಗಷ್ಟೇ ಸೀಮಿತಗೊಳಿಸಲಿಲ್ಲ
ಬದಲಿಗೆ ಮಡಿವಂತಿಕೆಯ ಮನಸ್ಸುಗಳಿಗೂ ಈ ಕರಾಳತೆಯ ಅರಿವಾಗಿಸಲು ವೇಶ್ಯಾವೃತ್ತಿಯ ಬಗ್ಗೆಯೇ ಪಿಎಚ್ಡಿ ಅಧ್ಯಯನ ನಡೆಸಿದಳು
ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಳು
ಇಲ್ಲಿ ವೇಶ್ಯಾ ಜಾಲವೂ ತನ್ನ ‘ಆಟ ‘ ಆಡುತ್ತದೆ
ಎನ್ನುವಾಗ ಅವಳ ದನಿ ತಣ್ಣಗೇ ಇರಿಯುತ್ತಿತ್ತು
ವೇಶ್ಯಾವಾಟಿಕೆಗಳು ಎಷ್ಟು ಸಂಭ್ರಮದಿಂದ ಕುಣಿಯುತ್ತಾವೆ ಎಂದರೆ
ಎಷ್ಟೋ ಊರುಗಳಲ್ಲಿ ಬೀದಿಯಲ್ಲಿ ಆಡುತ್ತಿದ್ದ ಹೆಣ್ಣು ಮಕ್ಕಳು, ಕಾಲೇಜು ಗೇಟು ತಲುಪಿಕೊಳ್ಳುತ್ತಿದ್ದ ಯುವತಿಯರೂ ನಾಪತ್ತೆಯಾಗಿಬಿಡುತ್ತಾರೆ
ಕ್ರೀಡಾಪಟುಗಳಿಗೆ ಮಾತ್ರ ಅಲ್ಲ, ಕ್ರೀಡಾಧಿಕಾರಿಗಳು, ಕ್ರೀಡಾಭಿಮಾನಿಗಳು, ಕ್ರೀಡೆ ನೆಪದಲ್ಲಿ ಬರುವ ಪ್ರವಾಸಿಗರು, ಒಲಂಪಿಕ್ಸ್ ಗೆ ಬೇಕಾದ ಕಟ್ಟಡ, ಕ್ರೀಡಾಂಗಣ ನಿರ್ಮಿಸಲು ಬರುವ ಕಾರ್ಮಿಕರು, ಮೇಸ್ತ್ರಿಗಳು ಎಲ್ಲರಿಗೂ ವೇಶ್ಯೆಯರನ್ನು ಸರಬರಾಜು ಮಾಡುವ ತಾಣ ಎದ್ದು ನಿಲ್ಲುತ್ತದೆ
ಇಡೀ ಜಗತ್ತಿನ ಹಲವು ದೇಶಗಳಲ್ಲಿ ಒಲಂಪಿಕ್ಸ್ ಬಂದಾಗ ವಿಚಿತ್ರ ಜಾಹೀರಾತೊಂದು ಕಾಣಿಸಿಕೊಳ್ಳುತ್ತದೆ
‘ನಿಮ್ಮ ಜೀವಮಾನದ ಕಷ್ಟ ಬಗೆಹರಿಸಿಕೊಳ್ಳಬೇಕೇ?
ಇಲ್ಲಿದೆ ಸುಲಭ ಮಾರ್ಗ, ಸರಿಯಾದ ಅವಕಾಶ..’
ಆ ಸುಲಭ ಮಾರ್ಗ, ಸರಿಯಾದ ಅವಕಾಶ ಎನ್ನುವುದು ಅವರನ್ನು ಕೊಂಡೊಯ್ದು ನಿಲ್ಲಿಸುವುದು ಒಲಂಪಿಕ್ಸ್ ವೇಶ್ಯಾ ಅಡ್ಡೆಗಳಿಗೆ
ಒಂದು ಒಲಂಪಿಕ್ಸ್ ಎಂದರೆ 75 ಸಾವಿರ ವೇಶ್ಯೆಯರಾದರೂ ಬೇಕು
‘ಪರ್ಫಾರ್ಮೆನ್ಸ್ ಹೌಸ್’ ಎನ್ನುವ ಅಟ್ರಾಕ್ಟಿವ್ ಹೆಸರು ಸಹಾ ಇದಕ್ಕೆ ಇದೆ
perform or perish ಅಂದ್ರೆ ಏನು ಅಂತ ಗೊತ್ತಾಯ್ತಾ?
ಅಂತ ಲೀಲಾ ನಕ್ಕಾಗ ನನಗೆ ರಾಜನ್ ಬಾಲಾ ನೀಡುತ್ತಿದ್ದ ಕ್ರೀಡಾ ಅಂಕಿ ಅಂಶಕ್ಕೂ
ಈ ಲೀಲಾ ನೀಡುತ್ತಿದ್ದ ಅಂಕಿ ಅಂಶಕ್ಕೂ ಇರುವ ವ್ಯತ್ಯಾಸ ಷಾಕ್ ನೀಡಿತ್ತು
ಚಳಿಗಾಲದ ಒಲಂಪಿಕ್ಸ್ ಬಂದರೆ ‘ಚಳಿ ಅಂತ ಭಯಪಡಬೇಡಿ ಬಿಸಿ ಮಾಡುತ್ತೇವೆ’ ಎನ್ನುವ ಜಾಹೀರಾತು
ಒಲಂಪಿಕ್ಸ್ ದೇಶದಲ್ಲಿ ಬೀದಿ ಬೀದಿಗಳಲ್ಲಿ ರಾರಾಜಿಸುತ್ತದೆ
sex olympics
ಒಂದೆಡೆ ಒಲಂಪಿಕ್ಸ್ ಕ್ರೀಡೆ, ಇನ್ನೊಂದೆಡೆ ಲೈಂಗಿಕ ಕ್ರೀಡೆ
ಕಾಂಡೋಮ್ ವೀಕ್, ಸೆಕ್ಸ್ ವೀಕ್, ಕಾಂಡೋಮ್ ಫ್ಯಾಷನ್ ಷೋ ಇವು ಒಂದೆರಡು ಝಲಕ್ ಅಷ್ಟೇ
ಚೀನಾ ಒಲಂಪಿಕ್ಸ್ ಮುಗಿಯಿತಲ್ಲಾ ಆಗ ಇಡೀ ದೇಶದಲ್ಲಿ ಬಿಸಾಡಿದ್ದ ಕಾಂಡೋಮ್ ಗಳನ್ನೂ ಗುಡಿಸಿ ತೆಗೆಯಲೇ ತಿಂಗಳುಗಟ್ಟಲೆ ಬೇಕಾಯ್ತು.
ಚೀನಾ ಅಂದ್ರೆ ಚೀನಾ ಆಲ್ವಾ , ಹಾಗೆ ಬಿಸಾಡಿದ ಕಾಂಡೋಮ್ ಗಳನ್ನೂ ರಿಸೈಕಲ್ ಮಾಡೋದು ಹೇಗೆ ಅಂತ ರಿಸರ್ಚ್ ಮಾಡಿ ಯಶಸ್ವಿಯಾದ್ರು
ವಿಶ್ವಸಂಸ್ಥೆಯ ಪ್ರಕಾರವೇ ಪ್ರತೀ ವರ್ಷ 7 ಬಿಲಿಯನ್ ಡಾಲರ್ ನಷ್ಟಾದರೂ ಸೆಕ್ಸ್ ವಹಿವಾಟು ನಡೆಯುತ್ತದೆ
ಇದನ್ನ ಸಹಕಾರಿ ವ್ಯಾಪಾರ ಅಂತ ಘೋಷಿಸಿ ಸಹಕಾರಿ ಸಂಸ್ಥೆ ಅಡಿ ರಿಜಿಸ್ಟರ್ ಮಾಡಿ ಎನ್ನುವ ಕೂಗೂ ವೇಶ್ಯಾಗೃಹಗಳಿಂದ ಹೊರಬಿದ್ದಿದೆ
ಅದಿರಲಿ ಬಿಡು ನಿಮ್ಮ ಮೀಡಿಯಾ ಇದನ್ನೆಲ್ಲಾ ಜಗತ್ತಿಗೆ ಹೇಳಬೇಕು ಹೌದಲ್ವಾ ಅಂದಳು
ನಾನು ‘ಹೌದು, ಹೌದು ಅಲ್ಲಿನ ಕರಾಳ ಕಥೆಗಳು, ಮಾನವ ಸಾಗಾಟ, ಸ್ಕ್ಯಾಂಡಲ್ ಗಳು
ಎಲ್ಲವೂ ಸುದ್ದಿ ಅಷ್ಟೇ ಅಲ್ಲ , ಪೇನಲ್ ಡಿಸ್ಕಷನ್, ಒಪಿನಿಯನ್ ಪೋಲ್, ಅಭಿಯಾನ ಎಲ್ಲಾ ಆಗಿ ಹೊರಹೊಮ್ಮಬೇಕು’ ಅಂತ ಉತ್ಸಾಹದಿಂದ ಹೇಳುತ್ತಿದ್ದೆ
humantraffickingಆಗಲೇ ಲೀಲಾ ಒಂದು ಪುಟ್ಟ ಸೂಜಿ ಕೈಗೆತ್ತಿಕೊಂಡದ್ದು
‘ನಿಮ್ಮ ಮೀಡಿಯಾದವರಿಗೆ ಸೆಕ್ಸ್ ನೇರಪ್ರಸಾರದ ಹಕ್ಕು ಬೇಕಂತೆ, ಹಾಗಂತ ಅರ್ಜಿ ಹಾಕಿಕೊಂಡಿದ್ದಾರೆ’ ಎಂದಳು
ನನ್ನ ಉತ್ಸಾಹದ ಬಲೂನಿಗೆ ಸೂಜಿ ನೇರವಾಗಿಯೇ ತಾಕಿತ್ತು
‘ಅದೇ ಆಟ, ಅದೇ ಓಟ ಅಂದ್ರೆ ಯಾರಿಗೆ ಇಂಟರೆಸ್ಟ್ ಇರುತ್ತೆ ಎಷ್ಟು ದಿನಾ ಅಂತ ಕುಣಿಯೋದು, ನೆಗೆಯೋದೇ ತೋರಿಸೋದಿಕ್ಕೆ ಆಗುತ್ತೆ?
ಲಕ್ಷಾಂತರ ಡಾಲರ್ ಕೊಟ್ಟು ಪ್ರಸಾರದ ರೈಟ್ಸ್ ತಗೊಂಡು ಮೂರು ನಾಮ ಹಾಕಿಕೊಳ್ಳುವುದೇ ಆಗಿದೆ.
ಆದ್ದರಿಂದ ಒಲಂಪಿಕ್ಸ್ ನೈಟ್ ಲೈಫ್ ಪ್ರಸಾರ ಮಾಡೋದಿಕ್ಕೂ ಅವಕಾಶ ಕೊಡಿ. ಬೇಕಾದರೆ ಅದಕ್ಕೆ ಇನ್ನೂ ಸ್ವಲ್ಪ ಜಾಸ್ತಿ ದುಡ್ಡೂ ತಗೊಳ್ಳಿ’ ಅಂದಿದ್ದು ಖ್ಯಾತ ಮೀಡಿಯಾ ಸಂಸ್ಥೆಗಳು
ಹೋಗ್ಲಿ ಬಿಡಪ್ಪಾ,
ಮೀಡಿಯಾದವರ ಒಕ್ಕೊರಲ ಹಕ್ಕೊತ್ತಾಯ ಏನು ಗೊತ್ತಾ..??
ಒಲಂಪಿಕ್ಸ್ ನಲ್ಲಿ ಬೆತ್ತಲೆ ಓಟ ಬೇಕಂತೆ
ಯಾಕಂತೆ ಅಂದೆ
ಅದಕ್ಕೂ ಒಳ್ಳೆ ಡಿಫೆನ್ಸ್ ಇದೆ
ಫಸ್ಟ್ ಗೋಲ್ಡ್ ಮೆಡಲ್ ಬಂದದ್ದು ನಗ್ನವಾಗಿ ಓಡಿದವನಿಗೆ
ಹಾಗಾಗಿ ಪ್ರತೀ ಒಲಂಪಿಕ್ಸ್ ನಲ್ಲಿ ‘ನ್ಯೂಡ್ ರನ್’ ಇಡಿ ಅಂತಿದ್ದಾರೆ ಅಂತ ಲೀಲಾ ಸಂಪಿಗೆ ತಣ್ಣಗೆ ವಿವರಿಸುತ್ತಿದ್ದಳು
ಜಗತ್ತಿನ ಕಣ್ಣಿನ ಮುಂದೆ ಬೆತ್ತಲೆ ಓಡುತ್ತಿರುವವರು ಯಾರು?
ಎನ್ನುವ ಪ್ರಶ್ನೆ ನನ್ನ ಮನಸ್ಸಿನೊಳಗೆ ಅಷ್ಟೇ ಶರವೇಗದಲ್ಲಿ ಓಡಲಾರಂಭಿಸಿತು
human traffiking1

‍ಲೇಖಕರು Avadhi

July 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

24 ಪ್ರತಿಕ್ರಿಯೆಗಳು

  1. ಮಲಿಕಜಾನ ಶೇಖ

    ಬಹಳ ಒಳ್ಳೆಯದು ,, ಒಳ್ಳೆಯ ಕೆಲಸ
    ಅವಧಿಗೆ ತುಂಬಾ ಧನ್ಯವಾದಗಳು..

    ಪ್ರತಿಕ್ರಿಯೆ
  2. ನಾಗರಾಜ್ ಹರಪನಹಳ್ಳಿ

    ಉತ್ತಮ. ಮಾಹಿತಿ, ರೋಚಕ ಸಂಗತಿಗಳನ್ನು ವಿವರಿಸುತ್ತಲೇ,ಬದುಕಿನ ಮಗ್ಗಲು ವಿವರಿಸುವ ಬರಹ.ಥ್ಯಾಂಕ್ಯೂ ಸರ್.

    ಪ್ರತಿಕ್ರಿಯೆ
  3. ಬಿ ಟಿ ಜಾಹ್ನವಿ

    ನಂಬಲೇ ಆಗ್ತಾ ಇಲ್ಲಾ … ಮೈಯಲ್ಲಾ ಮುಳ್ಳಾಗ್ತಿದೆ ಸರ್ ಬರಹ ತಾಗುತ್ತದೆ …

    ಪ್ರತಿಕ್ರಿಯೆ
  4. ನಾ. ದಾಮೋದರ ಶೆಟ್ಟಿ

    ಅಬ್ಬಾ, ಸ್ರ್ತೀವಾದಿಗಳು ಇದಕ್ಕೆ ನ ಎನ್ನುತ್ತಾರೆ?

    ಪ್ರತಿಕ್ರಿಯೆ
    • Avadhi

      ನಿಮ್ಮ ಅಭಿಪ್ರಾಯ ಅರ್ಥ ಆಗಲಿಲ್ಲ
      ಸ್ತ್ರೀವಾದಿಗಳು ಇದಕ್ಕೆ ಏನನ್ನುತ್ತಾರೆ ಎಂದರೆ…?

      ಪ್ರತಿಕ್ರಿಯೆ
  5. Anonymous

    ಓಹ್…..
    ಏನೆನೆಲ್ಲ ಆಟಗಳು …!!
    ನಿಮ್ಮನಿರೂಪಣೆ ಚೆನ್ನ ..

    ಪ್ರತಿಕ್ರಿಯೆ
  6. Gopal Wajapeyi

    ಇದು ಎಂಥಾ ಲೋಕವಯ್ಯಾ ! ಇದು ಎಂಥಾ ಆಟವಯ್ಯಾ ? ಅಲ್ಲಿಯ ಆಟಗಳೆಲ್ಲ ಕಣ್ಣೆದುರು ಕಟ್ಟಿದವು… ಚಿತ್ರಕ ಶಕ್ತಿಯ ನಿಮ್ಮ ಬರಹ ಓದಿ ಒಂದು ಕ್ಷಣ ಕಂಗಾಲಾಗಿ ಕೂತೆ !

    ಪ್ರತಿಕ್ರಿಯೆ
  7. Sangeeta Kalmane

    ನಿಗೂಡ ಜಗತ್ತಿನ ಒಂದು ಚಿತ್ರಣದ ಅನಾವರಣ ತೆರೆದಿಟ್ಟಿರಿ. ಹೀಗೆ ಇನ್ನೆಷ್ಟು ಇದೆಯೊ!!

    ಪ್ರತಿಕ್ರಿಯೆ
  8. Malur Kumaraswamy

    ಬದುಕಿನ ತ್ತೊಂದು ಮುಖದ ನಿರೂಪಣೆ. ಅನುಭವಿಸಿದವರಿಗೆ ಗೊತ್ತು ಒಡಲ ಆಕ್ರೋಷ, ಇವೆಲ್ಲ ನಮ್ಮ ಮುಂದೆ ಹರಿದು ಸಾಗುವ ನೈಜ ಚಿತ್ರಗಳು. ಇದನ್ನು ಕರಾಳ ಎಂದು ಕರೆದರೆ, ಇವರಿಲ್ಲದೆ ಹೋದಾಗ ಏನಾಗಬಹುದು ಎಷ್ಟು ಮುಗ್ಧ ಮನಗಳು ಮಣ್ಣು ಪಾಲಾಗಬಹುದು ಯೋಚಿಸಿರುತ್ತೀರಾ.
    ಒಳಿತು ಎಂದರೆ ಅವರಿಗೂ ಸಮಾಜದಲ್ಲಿ ಗೌರವದ ಸ್ಥಾನಮಾನ ಕೊಟ್ಟು ಕಾಪಾಡಿದರೆ, ದಂಗೆಯನ್ನು ಸ್ವಲ್ಪ ಮಟ್ಟಿಗೆ ನಿಲ್ಲಿಸಲು ನಮ್ಮ ಅಳಿಲು ಸೇವೆ.
    ಬದುಕಿ ಹಾಗೂ ಬದುಕಲು ಬಿಡಿ.
    ಪೇಪರಿನವರನ್ನು ಬಿಟ್ಬಿಡಿ ಪಾಪ ಅವರಿಗೆ ತಮ್ಮ ಮನೆಯವರನ್ನು ಬಿಟ್ಟರೆ ಬಾಕಿ ಎಲ್ಲಾ ಮನುಷ್ಯರನ್ನೂ ಹಾಗೂ ಪ್ರಾಣಿಗಳನ್ನೂ ವೀಡಿಯೋತೆಗೆದು ಪ್ರಪಂಚಕ್ಕೆ ತೋರಿಸುವ ಆತುರ, ಮರ್ಯಾದೆ ಇಲ್ಲದೆ.

    ಪ್ರತಿಕ್ರಿಯೆ
  9. Vihiwadawadagi

    ಸರ್ ಇದನ್ನೆಲ್ಲಾ ಓದಿದ ಮೇಲೆ ಓಲಂಪಿಕ್ ಯಾಕ್ ಬೇಕು ಅನ್ಸತ್ತೆ ಸರ್ ಓಲಂಪಿಕ್ ಆಡಿ ಗೆದ್ದೊರನ್ನಾ ನೋಡಿ ಹೆಮ್ಮೆ ಪಡಬೇಕಾ ಇಲ್ಲಾ ಮೇಲಿನ ವಿಷಯದ ಬಗ್ಗೆ ಮರುಕ ಪಡಬೇಕಾ ಹೆಣ್ಣು ಅಂದ್ರೆ ಇಷ್ಟ ಕಡೆಯಾಗಿ ನೋಡೋದಾ ಸರ್ ತುಂಬ ನೋವಿನ ಸಂಗತಿ

    ಪ್ರತಿಕ್ರಿಯೆ
  10. C. N. Ramachandran

    ಪ್ರಿಯ ಮೋಹನ್: ಕೇವಲ ಓಡುತ್ತಿರುವವರನ್ನು ಅಲ್ಲ, ಕುಳಿತಿರುವವರನ್ನೂ ನಿಮ್ಮ ಲೇಖನ ಬೆತ್ತಲೆ ಮಾಡುತ್ತದೆ, ಮಲಗಿದವರಿಗೆ ದುಃಸ್ವಪ್ನದಂತೆ ಕಾಡುತ್ತದೆ. ಕೃಷ್ಣದೇವರಾಯನು ತನ್ನ ವಿಜಯಯಾತ್ರೆಯ ಸಂದರ್ಭದಲ್ಲಿ ಸಾವಿರಾರು ವೇಶ್ಯೆಯರ ದಂಡೂ ಸೈನಿಕರೊಡನೆ ಹೋಗುತ್ತಿತ್ತಂತೆ. ’ಕಾಲ ಬದಲಾದಷ್ಟೂ ಹಿಂದಿನಂತೆಯೇ ಇರುತ್ತದೆ.’ ಈ ಅರ್ಥಪೂರ್ಣ ಸರಣಿಗಾಗಿ, ಧನ್ಯವಾದಗಳು. ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
  11. ನೂತನ ದೋಶೆಟ್ಟಿ

    ಮೋಹನ್ ಜೀ…. ಯುಗಾದಿ ಹಬ್ಬಕ್ಕೆ ಹೋಲಿಕೆ ಸರಿಯಿಲ್ಲ…
    ಈ ಮಾಹಿತಿ ಪ್ರತಿ ಓಲಂಪಿಕ್ಸ್ ನಲ್ಲೂ ಬರತ್ತೆ…ವ್ಯಾಪಾರೀಕರಣದ ವಿಕ್ರತರೂಪ ಇದು. ಇದರಲ್ಲಿ ಮಾಧ್ಯಮವೂ ಸೇರಿರುವದೇ ದುರದ್ರಷ್ಟ

    ಪ್ರತಿಕ್ರಿಯೆ
  12. ಆದಿವಾಲ ಗಂಗಮ್ಮ

    ಅಬ್ಬಾ….ಒಲಂಪಿಕ್ಸ್ ಆಟದ ಇನ್ನೊಂದು ಮುಖವೇ….ಮೈ ಜುಮ್ಮೆಂದಿತು.ಬೇಕೇಕೆ ಈ ಕರಾಳತೆ.!!!!???

    ಪ್ರತಿಕ್ರಿಯೆ
  13. Sudha ChidanandGowd

    ಸ್ತ್ರೀವಾದಿಗಳು ಏನೆನ್ನಬೇಕು ಎಂದು ನಿರೀಕ್ಷಿಸುತ್ತೀರಿ ..?
    its business..
    you want it or not…
    you like it or not..
    its just nothing more than business…
    ಇಂಥ ಕಡೆ ಭಾವುಕತೆ ಕೆಲಸಕ್ಕೆ ಬರೋದಿಲ್ಲ… ಏನ್ ಹೇಳೋಕಾದೀತು..?
    ಅತ್ಯಾಚಾರ, ಬಲವಂತ ಇರಲಿಕ್ಕಿಲ್ಲ ಅಲ್ಲಿ… ಕೆಲಬಾರಿ ವಸ್ತುನಿಷ್ಟವಾಗಿ ಯೋಚಿಸಬೇಕಾಗುತ್ತದೆ…
    ಲೀಲಾ ಸಂಪಿಗೆ ಮಾಡ್ತಿರೋದೂ ಅದೇ.
    ಅಗತ್ಯವಿರುವಲ್ಲಿ ಕೈಲಾದ ಸಹಾಯ ಮಾಡಿ.
    ಅಗತ್ಯವಿರುವ ಮಾಹಿತಿ ನೀಡಿ. ನಂತರ ಮುಕ್ತ ಚರ್ಚೆ.. ಕೆಲಬಾರಿ ಚರ್ಚೆಗಳಿಂದಲಾದರೂ ಏನಾಗುತ್ತೆ ಅನಿಸಿ, ವಿಷಾದ ಮಾತ್ರ ಉಳಿಯುತ್ತೆ..ಸ್ತ್ರೀವಾದಿಗಳಗಷ್ಟೇ ಅಲ್ಲ, ಮನಷ್ಯತ್ವವಿರುವ ಎಲ್ಲರಿಗೂ
    ಎಲ್ಲಕ್ಕಿಂತ ಮುಖ್ಯವಾಗಿ ಇದಮಿತ್ಥಂ ಎಂದು ಒಪ್ಪಿಕೊಳ್ಳವ ಪ್ರಾಮಾಣಿಕತೆ ಇರಬೇಕಾಗ್ತದೆ.
    ಅಂಥ ಪ್ರಮಾಣಿಕತೆ ಈ ಲೇಖನದಲ್ಲಿದೆ.
    ತುಂಬ ಹೃದಯಸ್ಪರ್ಶಿ…
    ಥ್ಯಾಂಕ್ಯೂ ಜಿಎನ್ನೆಮ್ ಸರ್ ಮತ್ತು ಲೀಲಾ ಮ್ಯಾಮ್..

    ಪ್ರತಿಕ್ರಿಯೆ
  14. Mallappa

    ನಿಜ ಒಪ್ಪಿಕೊಳ್ಳುವ ಎದೆ ಬೇಕು. ನಾವಿವತ್ತು ಬದುಕುತ್ತಿರುವುದು ಎರಡು ಮುಖದಲ್ಲಿ. ಒಳಗೊಂದು ಹೊರಗೊಂದು. ವ್ಯೆಶ್ಯಾವೃತ್ತಿ ಮನುಷ್ಯ ಹುಟ್ಟನಿಂದ ಬಂದಿದ್ದು. ಸಮಾಜದ ಅವಿಭಾಜ್ಯ ಅಂಗ. ನಿಮಗೆ ಬೇಕೋ ಬೇಡವೋ ಅದುದೆ. ನಾವು ಮಾಡಬೇಕಾದುದು ಇಷ್ಟೇ. ೧) ಅದರಲ್ಲಿ ಇರುವವರನ್ನು ಮನುಷ್ಯರು, ಯಾವುದೋ ಕಾರಣಕ್ಕಾಗಿ ಇದನ್ನು ಮಾಡುತಿದ್ದಾರೆ ಎಂದು ಅವರನ್ನು ಮಾನವೀಯ ದೃಷ್ಟಿಯಲ್ಲಿ ನೋಡಬೇಕು.
    ೨) ಇಂದಿನ ದಿನಗಳಲ್ಲಿ ಸೆಕ್ಸ ಮಾಡಬಾರದ ಕೆಲಸ, ಪಾಪದ ಕೆಲಸ, ಅಸಹ್ಯ, ಅಸಭ್ಯ ಎನ್ನುವುದನ್ನು ಬಿಟ್ಟು ಅದು ಮನುಷ್ಯನ ಜೀವಕ್ಕೆ ಅತೀ ಅವಶ್ಯ, ಸಮಾಜ ಅದು ಹೆಣ್ಣಿರಲಿ ಗಂಡಿರಲಿ ಅವರಿಗೆ ಸರಿಯಾಗಿ ಸಿಕ್ಕುವಂತೆ ಮಾಡಬೇಕು.
    ೩) ಬೇಕೋ ಬೇಡವೋ ಅದೊಂದು ವ್ಯಾಪಾರ ಆಗಿರುವಾಗ, ಇಷ್ಟು ವರ್ಷ, ಇಷ್ಟು ಆಡಳಿತ, ಇಷ್ಟು ವೇದಾಂತ ನಿಲ್ಲಿಸಲು ಆಗದಿದ್ದಾಗ ಅದಕ್ಕೊಂದು ಚೌಕಟ್ಟು ಹಾಕಿ ಸಮಾಜ ಅವರನ್ನೂ ಉಳಿದ ವ್ಯಾಪಾರಿಗಳಂತೆ ಬದುಕಲು ವ್ಯವಸ್ಥೆಯನ್ನು ಮಾಡಿ.
    ದಿಟ್ಟ ಹೆಣ್ಣೊಬ್ಬಳು, ಸಂಪ್ರದಾಯಸ್ಥ ಮನೆಯವಳಾಗೀ ಆ ಹೆಣ್ಣುಗಳ ಬಗ್ಗೆ ಸಂಶೋಧನೆ ಮಾಡಿರುವುದು ಬೆನ್ನು ತಟ್ಟುವ ವಿಷಯ. ಇವರ ಪ್ರಯತ್ನದಿಂದ ಸಮಾಜ ಎಚ್ಚೆತ್ತು ಇದೆಲ್ಲ ಕತ್ತಲೆ ಕೋಣೆಯ ವಿಷಯ, ಇದರಲ್ಲಿರುವವರಿಗೆ ಶಿಕ್ಷಿಸುದು ಬಿಟ್ಟು ಶಿಕ್ಷಣ ನೀಡಲಿ.
    ಎನನ್ನುತ್ತೀರಿ?

    ಪ್ರತಿಕ್ರಿಯೆ
  15. Gayatri Badiger, Dharwad

    shock aitu… tilkobekaadavar please tilkolli nim Shakti haalagatirodu elli anta.. thank you sir…. super..

    ಪ್ರತಿಕ್ರಿಯೆ
  16. ಪಂಡಿತಾರಾಧ್ಯ

    ವೇಶ್ವಾವೃತ್ತಿ ಜಗತ್ತಿನ ಹೇಯ ವೃತ್ತಿ ಎಂಬ ಕುಖ್ಯಾತಿಯುಳ್ಳದ್ದು.
    ಜನರು ಸೇರುವ ಕಡೆ ಅದರ ಚಟುವಟಿಕೆ ಜೋರು.
    ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಆಟಗಾರರಿರು ಇದರಲ್ಲಿಯೂ ಭಾಗವಹಿಸುತ್ತಾರೆ ಎಂದು ಊಹಿಸುವುದು ಸರಿಯಲ್ಲ. ಒಲಂಪಿಕ್ಸ್ ನಲ್ಲಿ ಕ್ರೀಡಾಳುಗಳು ಮಾತ್ರ ಭಾಗವಹಿಸುವುದಿಲ್ಲ. ಬೇರೆಯವರಿಗೆ ಬೇರೆ ಆಸಕ್ತಿಗಳಿದ್ದರೆ ಕ್ರೀಡಾಳುಗಳು ಏನು ಮಾಡಲು ಸಾಧ್ಯ?

    ಪ್ರತಿಕ್ರಿಯೆ
    • ಜಿ ಎನ್ ಮೋಹನ್

      ಪ್ರತಿಕ್ರಿಯೆಗಾಗಿ ವಂದನೆಗಳು ಸರ್
      ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಆಟಗಾರರು ಏನು ಮಾಡುತ್ತಾರೆ ಎನ್ನುವ ಬಗ್ಗೆಯೇ ಸಾಕಷ್ಟು ಅಧ್ಯಯನಗಳಿವೆ.
      ಲೀಲಾ ಸಂಪಿಗೆ ಅವರೂ ಈ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪ್ರತೀ ವರ್ಷ ಜರುಗುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ಸಮಾವೇಶಗಳು ಕೇವಲ ಆಟಗಾರರ ಮಾತ್ರವೇ ಅಲ್ಲ ಇನ್ನೂ ಎಷ್ಟೋ ಜನ ‘ಒಹ್! ಇಂಥಹವರಾ, ಸಾಧ್ಯವೇ ಇಲ್ಲ’ ಎಂದು ನಾವು ಅಂದುಕೊಳ್ಳುವ ಹಲವರ ಮುಖವಾಡಗಳನ್ನು ಕಳಚಿ ಬಿಸಾಕುತ್ತಾ ಹೋಗುತ್ತದೆ
      ಲೀಲಾ ಸಂಪಿಗೆ ಅವರ ಕಿರು ಕೃತಿ ‘ ಒಲಂಪಿಕ್ಸ್ಎಂಬ ಕೆಂಪು ದೀಪ’ ಕೃತಿ ಒಂದಷ್ಟು ಬೆಳಕು ಬೀರುತ್ತದೆ
      ಅಷ್ಟೇ ಅಲ್ಲ ವಿಶ್ವ ಸಂಸ್ಥೆ ಸೇರಿ ಅನೇಕ ವರದಿಗಳು ಲಭ್ಯವಿದೆ
      ಆಟಗಾರರೆಲ್ಲರೂ ಅಂತ ಅಲ್ಲ.. ಆಟಗಾರರೂ ಅಂತ ಅಷ್ಟೇ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: