ನೆನಪುಗಳ ಜೊತೆ ನಡೆದಾಡಿದ ನುಗಡೋಣಿ

ಈ ಪುಟ್ಟ ಗುಡಿಸಲು ಮನೆ ನನ್ನ ಹೊಲದಲ್ಲಿದೆ. ಸುಮಾರು 30ವರ್ಷದಿಂದಲೂ ಇದೆ. ನಾನು ಆ ಹೊತ್ತಿನಿಂದ ಈ ಹೊತ್ತಿನವರೆಗೆ ನುಗಡೋಣಿ ಎಂಬ ನನ್ನ ಊರಿಗೆ ಹೋದರೆ ಈ ಗುಡಿಸಲು ಮನೆಯಲ್ಲಿಯೇ ಕಾಲಕಳೆಯುವುದು. ನನ್ನ ಸೃಜನಶೀಲತೆಯನ್ನು ಈ ಸೂರು ಕಾಪಾಡಿದೆ.

ಅಮರೇಶ ನುಗಡೋಣಿ

ನಾನು 1990ರ ಸುಮಾರು ಊರ ಹೊರಗಿನ, ನಮ್ಮ ಹೋಲದ ಪಕ್ಕದಲ್ಲಿದ್ದ ರಾಮಲಿಂಗೇಶ್ವರ ಗುಡಿಯಿದು. ಸಂಜೆ ನಾನು ಈ ಗುಡಿಯಲ್ಲಿ ಕತೆ ಬರೆಯುತ್ತಿದ್ದೆ. ‘ಮಣ್ಣಸೇರಿತು ಬೀಜ’ ಸಂಕಲನದ ಕತೆಗಳನ್ನು ಈ ಗುಡಿಯಲ್ಲಿ ಕೂತು ಬರೆದಿದ್ದೆ.

Ramalingeshwar Temple

ಇದು ನಮ್ಮೂರಿನ ಬಸವನ ಗುಡಿ. ಮೊದಲು ಗ್ರಿಲ್ ಗಳು ಇರಲಿಲ್ಲ. ಈಗ ಗ್ರಿಲ್ ಗಳನ್ನು ಹಾಕಿ ಕೆಡಿಸಲಾಗಿದೆ. ಈ ಗುಡಿಯೇ ಶಾಲೆಯಾಗಿತ್ತು. 1966 ರ ಸುಮಾರು ನಾನು ಸರ್ಕಾರಿ ಶಾಲೆಯೆಂಬ ಈ ಗುಡಿಯಲ್ಲಿ ಕುಳಿತು ಅ ಆ ಇ ಈ ಕಲಿತಿದ್ದೇನೆ. ಗುಡಿ ಒಳಗಿರುವ ದೇವರು ಕಲ್ಲಿನ ಬಸವಣ್ಣ. ಈ ನುಗಡೋಣಿ ಬಸವಣ್ಣ ಅಂದಿನಿಂದ ಇಂದಿನವರೆಗೆ ನನ್ನ ಇಷ್ಟದ ದೇವರು. ನನ್ನೂರಿಗೆ ಹೋದರೆ ಈ ಮೂರು ಸ್ಥಳಗಳು ನನ್ನ ಜೀವ ನೆಲೆಗಳಾಗಿವೆ. ನೋಡಿಕೊಂಡು ಬರುತ್ತೇನೆ.

Basavan Temple

ಈ ರಾಮಲಿಂಗವು ನಮ್ಮೂರು ನುಗಡೋಣಿಯಲ್ಲಿ ನನ್ನ ಸಂಬಂಧಿಕರ ಹೊಲದಲ್ಲಿ ಉಳುವಾಗ ಸಿಕ್ಕಿತು. ಇದೇ ಜುಲೈ 2016ರ ತಿಂಗಳು ನೆಲದಿಂದ ಹೊರಗೆ ತೆಗೆಯಲಾಗಿದೆ. ಬಸವನಗುಡಿಯಲ್ಲಿ ಇಡಲಾಗಿದೆ.

Ramaling

‍ಲೇಖಕರು admin

July 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: