‘ಚಿತ್ರಭೂಮಿ’ಯಲ್ಲಿ ‘ದಿ ಪೇಪರ್ ವಿಲ್ ಬಿ ಬ್ಲ್ಯೂ’

7 May 2022
Name of the Film : The Paper will be Blue
Directed by : Radu Muntean
Country : Romania
Language : Romanian
Running Time : 92 Mns

ಸಾರಸಂಗ್ರಹ
ಕಮ್ಯೂನಿಸ್ಟ್ ರೊಮೇನಿಯಾದಲ್ಲಿ ಸ್ವಾತಂತ್ರ್ಯಕ್ಕಾಗಿ ಡಿಸೆಂಬರ್ 1989 ರಲ್ಲಿ ಅಲ್ಲಿನ ನಾಗರಿಕರ ದಂಗೆ ನಡೆಯಿತು. ಆ ಹಿಂಸಾತ್ಮಕ ಕ್ರಾಂತಿಯು ರೊಮೇನಿಯಾದ ಟಿಮಿಸೋರ ದಲ್ಲಿ ಮೊದಲಾಗಿ ಬೇಗ ಇಡೀ ದೇಶವನ್ನೆಲ್ಲ ವ್ಯಾಪಿಸಿತು. ಈ ಸಂದರ್ಭದಲ್ಲಿ ಅಂದಿಗಿದ್ದ ರೊಮೇನಿಯನ್ ಕಮ್ಯೂನಿಸ್ಟ್ ಪಾರ್ಟಿಯನ್ನು ಉರುಳಿಸಿ ಕ್ರಾಂತಿಕಾರೀ ನಾಗರಿಕರು ಸ್ವಾತಂತ್ರ್ಯಗಳಿಸಿಕೊಂಡರು. 1989 ಡಿಸೆಂಬರ್ 22 ಮತ್ತು 23 ನೇ ತಾರೀಖಿನ ನಡುವಿನ ರಾತ್ರಿಯಂದು ನಡೆದ ಘಟನೆ ರೊಮೇನಿಯಾದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದು ಬಂದಿತು. ದೇಶದ ತಳವರ್ಗದ ಪ್ರಜೆಗಳು ಹೊಸ ಇತಿಹಾಸವನ್ನೇ ಬರೆದರು.

1989ರ ಡಿಸೆಂಬರ್ 22 ನೇ ತಾರೀಖಿನ ರಾತ್ರಿ ರೊಮೇನಿಯಾ ಸೈನ್ಯದಲ್ಲಿದ್ದ ಒಬ್ಬ ಯುವ ಸೈನಿಕ ಕ್ರಾಂತಿಯ ಉತ್ಸಾಹವನ್ನು ಕಳೆದುಕೊಳ್ಳಲಾಗದೇ ಕ್ರಾಂತಿಕಾರೀ ಜನಗಳೊಡನೆ ಸೇರಲು ಸೈನ್ಯ ತೊರೆದು ಓಡಿಹೋಗುತ್ತಾನೆ. ಅವನು ಪ್ರತಿನಿಧಿಸುತ್ತಿದ್ದ ಸೈನ್ಯದ ಪಡೆಯ ಉಳಿದವರು ಅಂದು ರಾತ್ರಿ ಇಡೀ ಅವನನ್ನು ಹುಡುಕುತ್ತ ಹೋಗುವುದೇ ಈ ಚಿತ್ರದ ಕಥಾವಸ್ತು. ತಿಳಿ ಹಾಸ್ಯದ ಧಾಟಿಯಲ್ಲಿ ನಿರ್ಮಿಸಲಾದ ಚಿತ್ರವನ್ನು ದೃಕ್ ಸಾಕ್ಷಿಯ ಮಾದರಿಯಲ್ಲಿ ಕೆಮೆರಾವನ್ನು ಹೆಗಲಮೇಲೆ ಹೊತ್ತು ತಿರುಗಿ ಈ ಸಿನೆಮಾದ ಚಿತ್ರೀಕರಣ ಮಾಡಲಾಗಿದೆ. (ಸಂಗ್ರಹ)

ನಿರ್ದೇಶಕ : ರಾದು ಮುಂಟೇನ್ : ರೊಮೇನಿಯನ್ ನ್ಯೂ ವೇವ್ ಸಿನೆಮಾದ ಪ್ರಮುಖ ಪ್ರಯೋಗಶೀಲ ಚಿತ್ರ ನಿರ್ದೇಶಕ. 1994 ರಲ್ಲಿ ಬುಕಾರೆಸ್ಟ್ ನಲ್ಲಿಯ ಥಿಯೇಟರ್ ಅನ್ದ್ ಫಿಲ್ಮ್ ಅಕಾಡೆಮಿಯಪದವೀಧರ. ಕಿರುಚಿತ್ರಗಳನ್ನು ನಿರ್ಮಿಸಿ ನಿರ್ದೇಶಿದ ಇವರು, ಟಿ.ವಿ.ಗಾಗಿ 400ಕ್ಕೂ ಹೆಚ್ಚು ಜಾಹೀರಾತು ಚಿತ್ರಗಳನ್ನು ನಿರ್ದೇಶಿಸಿ ಅಪಾರ ಗೌರವ ಹಾಗು ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ. ಇದುವರೆವಿಗೂ 7 ಚಿತ್ರಗಳನ್ನು ನಿರ್ದೇಶಿಸಿದ ಇವರ ಎರಡೆನಯ ಚಿತ್ರ The Paper will be Blue . (ಸಂಗ್ರಹ)

‍ಲೇಖಕರು Admin

May 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: