ಚಂದ್ರಿಕಾ ಬರೆದ ನಿನ್ನ ಕಥೆಗಳು

nannolagina ninna backಪಿ ಚಂದ್ರಿಕಾ, ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿಗೆ ತಲುಪಿಕೊಂಡ ಹುಡುಗಿ. ಈಗ ಎಚ್ ಎಸ್ ರಾಘವೇಂದ್ರ ರಾವ್ ಅವರ ನೇತೃತ್ವದಲ್ಲಿ ಸಂಶೋಧನೆ ನಡೆಸಿ ತಮ್ಮ ತುರುಬಿಗೆ ಡಾಕ್ಟರೇಟ್ ಗರಿ ಸಿಕ್ಕಿಸಿಕೊಂಡಿದ್ದಾರೆ.
ಜೊತೆಗಾರ ನ ರವಿಕುಮಾರ್ ಜೊತೆಗೂಡಿ ‘ಅಭಿನವ’ ಪತ್ರಿಕೆ ರೂಪಿಸುತ್ತಾ, ಅಭಿನವ ಪ್ರಕಾಶನದ ಮೂಲಕ ಹಲವರಿಗೆ ಬೆಳಕು ನೀಡಿದಾಕೆ. ಒಳ್ಳೆಯ ಕವಿ. ಸದಾ ಹೊಸ ಪ್ರಯೋಗಗಳಿಗೆ ತುಡಿಯುವ ಚಂದ್ರಕಾ ಜುಗಲ್ಬಂದಿ ಕವಿತೆ ಕೊಟ್ಟರು. ಕನ್ನಡದ ಟಿ ವಿ ಧಾರಾವಾಹಿಗಳಿಗೆ ಒಂದಿಷ್ಟು ಸಾಹಿತ್ಯ ಸ್ಪರ್ಶ ನೀಡಿದರು.
ಆದರೆ ಅವರೊಳಗೆ ಒಬ್ಬ ಕಥೆಗಾರ್ತಿ ಅಡಗಿ ಕುಳಿತಿದ್ದಾಳೆ ಎಂದು ಗೊತ್ತಿರಲಿಲ್ಲ. ಆದರೆ ದಿಢೀರನೆ ಆಕೆ ‘ನನ್ನೊಳಗಿನ ನಿನ್ನ ಕಥೆಗಳು’ ಮೂಲಕ ಪ್ರತ್ಯಕ್ಷವಾದಾಗ ‘ಅರೆ!’ ಎನ್ನುವಂತಾಯಿತು. ಪುಟ್ಟ ಕಥೆಗಳು ಗಾಢವಾಗಿ ಕಲಕುತ್ತದೆ. ಇಂದಿನಿಂದ ಆಗಾಗ ಚಂದ್ರಿಕಾ ಕಥೆಗಳು ‘ಅವಧಿ’ಯಲ್ಲಿ ಕಾಣಿಸಿಕೊಳ್ಳುತ್ತದೆ.
nannolagina ninna
ಕಂಪ್ಯೂಟರ್ ಮತ್ತು ಕೊಳಲು
ಕಂಪ್ಯೂಟರ್ ವ್ಯಾಪಾರಿ ಮತ್ತು ಕೊಳಲಿನ ವ್ಯಾಪಾರಿ ಒಂದೇ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಕಂಪ್ಯೂಟರ್ ವ್ಯಾಪಾರಿಗೆ ತನ್ನದು ದೊಡ್ಡ ಉದ್ಯೋಗ. ಕೊಳಲಿನವನನ್ನು ಅಸಡ್ಡೆಯಿಂದ ಮಾತನಾಡಿಸಿದ. ಅಷ್ಟರಲ್ಲಿ ದಿಕ್ಕುತಪ್ಪಿ ಒಡೆದ ಹಡಗು ಒಂದು ದ್ವೀಪಕ್ಕೆ ಬಂದು ನಿಲ್ಲುತ್ತದೆ. ಕಂಪ್ಯೂಟರಿನವ ಏನೆಲ್ಲಾ ಹೇಳಿದರೂ ಆ ದ್ವೀಪದ ಜನಕ್ಕೆ ಅರ್ಥವಾಗುವುದಿಲ್ಲ. ಕೊಳಲಿನವ ಕೊಳಲು ಊದಲು ಶುರುಮಾಡಿದ. ಅವರಿಗೆ ಆ ಜನ ತಿನ್ನಲು ಕುಡಿಯಲು ತಂದುಕೊಟ್ಟರು. ಮತ್ತು ಅಷ್ಟೂ ಕೊಳಲುಗಳನ್ನು ಕೊಂಡು ಹೊಸ ದೋಣಿಯನ್ನು ಕೊಟ್ಟರು. ಕಂಪ್ಯೂಟರ್ ವ್ಯಾಪಾರಿ ಮಾತಿಲ್ಲದೆ ದೋಣಿ ಹತ್ತಿದ.

‍ಲೇಖಕರು avadhi

June 2, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಸಂದೀಪ್ ಕಾಮತ್

    ಪುಟ್ಟ ಕಥೆಯಾದರೂ ಚೆನ್ನಾಗಿದೆ.ಈ ಪುಸ್ತಕ ಎಲ್ಲಿ ಸಿಗುತ್ತೆ?
    ಅಂದ ಹಾಗೆ ಕಂಪ್ಯೂಟರ್ ವ್ಯಾಪಾರಿ ಲ್ಯಾಪ್ ಟಾಪ್ ತಗೊಂಡು ಹೋಗಿದ್ರೆ ಮೀಡಿಯಾ ಪ್ಲೇಯರ್ ನಲ್ಲಿ ಹಾಡು ,ಸಿನೆಮಾ ಹಾಕಿ ಮೆಚ್ಚಿಸಬಹುದಿತ್ತು ಜನರನ್ನ:)

    ಪ್ರತಿಕ್ರಿಯೆ
  2. avadhi

    ಈ ಪುಸ್ತಕವನ್ನು ಬಿ ಸುರೇಶ ಅವರ ನಾಕು ತಂತಿ ಪ್ರಕಾಶನ ಪ್ರಕಟಿಸಿದೆ. ನೀವು ಫಿಶ್ ಮಾರ್ಕೆಟ್ ಗೆ ಬಂದಾಗ ನಮ್ಮ ಬಳಿ ಕೊಳ್ಳಬಹುದು. ಇಲ್ಲ ಹಾರಿಸಬಹುದು. ಎರಡಕ್ಕೂ ಮುಕ್ತ ಅವಕಾಶ

    ಪ್ರತಿಕ್ರಿಯೆ
  3. armanikanth

    book haarisabahudu?
    iden saar intha offer?haagenaadrooo yaaraadrooo maadidre nange ondu maatu tilisi.
    HAARISIKODU HODAVARA KATHEGALU antaane ondu kathe baredu kodtene…

    ಪ್ರತಿಕ್ರಿಯೆ
  4. ನಾಸೋಮೇಶ್ವರ

    ಕಥೆ ಪುಟ್ಟದಾದರೂ ಅರ್ಥಪೂರ್ಣವಾಗಿದೆ.
    ಅವಧಿಯಲ್ಲಿ ಮತ್ತಷ್ಟು ಕಥೆಗಳನ್ನು ನಿರೀಕ್ಷಿಸುತ್ತಿದ್ದೇನೆ.
    -ನಾಸೋ

    ಪ್ರತಿಕ್ರಿಯೆ
  5. ನಾಗೇಶ್

    ನಿಮ್ಮ ಕತೆಗಳು ಚಿಕ್ಕದಾದ್ರು. ನಮ್ಮನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿವೆ.
    ನಿಮ್ಮಿಂದ ಇನ್ನು ಹೆಚ್ಚಿನ ಕತೆಗಳ ದಾರಿಕಾಯುತ್ತಿದ್ದೇವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: