ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದಿನ ಕವಿತೆ: ಗರ್ಭಪಾತ

ಗರ್ಭಪಾತ

ಮೂಲ : ಯೂನೂಸ್ ಪೀರ್ಬೊಕಸ್

ಕನ್ನಡಕ್ಕೆ: ಚಂದಿನ

 
ಮುಗ್ಧತೆಯ ಸುತ್ತಿಕೊಂಡು
ನಾಳೆಯು ಬರುವಂತೆ
ನಿನ್ನ ಬೆಚ್ಚಗಿನ ಗರ್ಭದೊಳಗೆ
ನಾನು ಬಂದೆ
ಅಮ್ಮ….
ಅದು ನಿನ್ನ, ಅಥವಾ ನನ್ನ
ಆಯ್ಕೆಯೊಂದಿಗೆ ಅಲ್ಲ
ಸಮಯ ನಿರ್ಧರಿಸಿದಂತೆ
ಸಮಯಕ್ಕೆ ತಕ್ಕಂತೆ ಬದುಕಲು
ನಮ್ಮ ಮನುಕುಲದ ಮರದಲ್ಲಿ
ಆದರೆ ಮನುಷ್ಯ ಪ್ರೀತಿ
ದೇಹವಾಗಿ, ಪದಗಳಾಗಿ ಬೆಳೆಯುವ ಮುನ್ನವೇ
ಅಪರಿಪೂರ್ಣ ಸೃಷ್ಟಿಯೆಂಬ –
ತೀವ್ರ ರಕ್ತಸ್ರಾವ ನನ್ನನ್ನು
ಪಂಚಭೂತಗಳಲ್ಲಿ ಲೀನವಾಗಿಸಿತು.
 
Abortion
 
I came as tomorrow
Swaddled in innocence
To your warm womb
Mother……
Without your choice
Or mine
Destined to update
With time
Our human tree
But before love
Grew into flesh and words
What is unfinished creation-
A precipitation of blood
Became my transcendence.
 
yoonoos peerbocus
Mauritius
 

‍ಲೇಖಕರು G

7 March, 2013

5 Comments

  1. Gopaal Wajapeyi

    ಮಿತ್ರ ‘ಚಂದಿನ’ಅಭಿನಂದನೆಗಳು.

  2. pravara

    ತುಂಬಾ ಚೆನ್ನಾಗಿದೆ

  3. Mohan V Kollegal

    ನಿನ್ನೆಯೇ ಓದಿದ್ದೆ… ಗಟ್ಟಿ ಅನುವಾದ… 🙂

  4. Beluru Raghunaandan

    ಅನುವಾದವಾದರೂ ಕನ್ನಡದ. ಜಾಯಮಾನದ್ದೇ ಕವಿತೆ ಅನ್ನಿಸುತ್ತಿದೆ ……

  5. ಚಂದಿನ

    ಮೊದಲು ಅವಧಿಗೆ ಕೃತಜ್ಞತೆಗಳು.
    ಪ್ರಿಯ ಗೆಳೆಯ ಮೋಹನ್, ಗೋಪಾಲ ವಾಜಪೇಯಿ ಸಾಹೇಬರ ಜೊತೆಗೆ ಓದಿದ, ಓದಿ ಪ್ರತಿಕ್ರಿಯಿಸಿದ ಎಲ್ಲ ಕಾವ್ಯ ಪ್ರಿಯರಿಗೆ ಧನ್ಯವಾದಗಳು.
    ಪ್ರೀತಿಯಿಂದ,
    -ಚಂದಿನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading