ಈಗ್ಲೂ ನೆನಪಾಗ್ತಿದೆ ಗೋಲಿ ಡಬ್ಬ!

ಶಾಲೆಗಿಂತ ಆಟವೇ ಇಷ್ಟ…!

ಮಂಜುನಾಥ ದಾಸನಪುರ

ಚಿಕ್ಕಂದಿನಲ್ಲಿ ನನ್ನ ಮನಸ್ಸಿಗೆ ತುಂಬಾ ಬೇಜಾರು ತರುತ್ತಿದ್ದ ವಿಷಯವೆಂದರೆ ಸ್ಕೂಲಿಗೆ ಹೋಗುವುದು. ಬೆಳಗ್ಗೆ ಕಣ್ಣು ಬಿಟ್ಟರೆ ನನ್ನ ಬಾಯಿಂದ ಹೊರಡುತ್ತಿದ್ದ ಶಬ್ದ ‘ಥೂ..!’ ಎಂದು. ಹಾಸಿಗೆಯಿಂದ ಏದ್ದೇಳುವುದಕ್ಕೆ ಮೊದಲೇ ಅಮ್ಮ ಮೂಲೆ ಮನೆಯಿಂದ ‘ದೇವರ ಫೊಟೊ ನೋಡೋ’ ಎಂದು ಕೂಗೇಳುತ್ತಿದ್ದಳು. ಆದಾಗಲೇ  ಮನಸ್ಸಿನಲ್ಲಿ ನನ್ನ ತರಗತಿ ಗುರುಗಳ ಗಂಟುಕಟ್ಟಿದ ಮುಖ ಪ್ರತ್ಯಕ್ಷವಾಗಿ ಹೊಗಿರುತ್ತಿತ್ತು. ಬೆಳಗ್ಗೆಯ ಸಮಯ ನಿಧಾನವಾಗಿ ಸೂರ್ಯನ ಕಾವು ಹೆಚ್ಚಾದಂತೆ, ನನ್ನ ಮನಸ್ಸಿನಲ್ಲಿ ಭಯದ ತಾಪ ಏರುತ್ತಿತ್ತು.
ಹಾಸಿಗೆಯಿಂದ ಎದ್ದತಕ್ಷಣ ನನ್ನ ನಡಿಗೆ ‘ಗೋಲಿ ಡಬ್ಬ’ದಕಡೆಗೆ ಹೋಗುತ್ತಿತ್ತು. ಅಷ್ಟರಲ್ಲಿ ನಮ್ಮಪ್ಪ ಮಲ್ಲೇಶನಜೊತೆ ಹುಲ್ಲಿಗೆ ಹೋಗುವಂತೆ ಹೇಳುತ್ತಿದ್ದರು. ನನಗೆ ಆಟವಾಡುವುದಕ್ಕೆ ಇಷ್ಟ. ಆದ್ರೆ, ನಾನು ಅವನ ಜೊತೆ ಹೋಗದಿದ್ದರೆ ಅವನು ಹುಲ್ಲಿಗೆ ಹೋಗುತ್ತಿರಲಿಲ್ಲ. ಹುಲ್ಲುತಂದಿಲ್ಲವೆಂದರೆ ಅಪ್ಪನಿಂದ ಕೆಟ್ಟ ಬೈಗುಳ ಕೇಳಬೇಕಾಗಿತ್ತು. ಹಾಗಾಗಿ, ಅಣ್ಣನಜೊತೆ ಹುಲ್ಲಿಗೆ ಹೋಗುತ್ತಿದ್ದೆ ದಾರಿ ಮಧ್ಯದಲ್ಲಿ ಹುಡುಗರು ಗೋಲಿ ಆಟವಾಡುತಿರುತ್ತಿದ್ದರು. ಬಾರೋಆಡಕ್ಕೆಎನ್ನುತ್ತಿದ್ದರು.ನನ್ನಜೇಬಿನಲ್ಲಿದ್ದ ಗೋಲಿಗಳನ್ನು ಒಂದು ಸಲ ಮುಟ್ಟಿ ನೋಡಿ ನಿರಾಸೆಗೆ ಒಳಗಾಗುತ್ತಿದ್ದೆ.
ನಾನು ಗೋಲಿ ಆಡುವುದರಲ್ಲಿ ನಿಸೀಮನಾಗಿರಲಿಲ್ಲ. ಆದರೆ, ಆಟವಾಡುವುದು, ಆಟವನ್ನು ನೋಡುತ್ತಾ ಕಾಲ ಕಳೆಯುವುದೆಂದರೆ ತುಂಬಾ ಖುಷಿಯಾಗುತ್ತಿತ್ತು.ನಮ್ಮಣ್ಣ ಆಟದಲ್ಲಿ ಏತ್ತಿದ ಕೈ. ತುಂಬಾದೂರದಲ್ಲಿರುವ ಗೋಲಿಯನ್ನು ಗುರಿಯಿಟ್ಟು ಒಂದೇ ಪಿಚ್ಚಿನಲ್ಲಿ ಹೊಡೆಯುತ್ತಿದ್ದ. ನಾನು ಅವನ ಗೋಲಿಗಳನ್ನು ಕದ್ದುಆಟದಲ್ಲಿ ಸೋತು, ಅವನತ್ರ ತುಂಬಾ ಬೈಸಿಕೊಂಡಿದ್ದೇನೆ. ಕೆಲವೊಮ್ಮೆ ಮೈ ಚುರುಕ್ ಎನ್ನುವ ರೀತಿಯಲ್ಲಿ ಹೊಡೆದಿದ್ದಾನೆ.
ನಮ್ಮಣ್ಣ ಹುಲ್ಲನ್ನು ಕುಯ್ಯುತ್ತಿದ್ದರೆ, ನಾನೊಬ್ಬನೆ ಗೋಲಿಗಳಲ್ಲಿ ಆಟವಾಡುತ್ತಿದ್ದೆ.ಈ ವೇಳೆ ಸ್ಕೂಲನ್ನು ನೆನೆಸಿಕೊಂಡರೆ ಗೋಲಿಗಳನ್ನು ಹಾಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಗೋಲಿಗಳಿಗೆ ಗುರಿಯಿಡಲು ಕೈ ನಡುಗುತ್ತಿತ್ತು.ಏನೋ ಬೇಕಾ ಬಿಟ್ಟಿಯಾಗಿ ಹೊಡೆಯುತ್ತಿದ್ದೆ.ತಂಬಾ ಸಲ ತೀರಾ ಹತ್ತಿರದಲ್ಲಿರುವ ಗೋಲಿಯನ್ನು ನನ್ನಿಂದ ಹೊಡೆಯಲು ಸಾಧ್ಯವಾಗುತ್ತಿರಲಿಲ್ಲ. ಆಗ ತುಂಬಾ ನೀರಾಸೆಗೊಳಗಾಗುತ್ತಿದ್ದೆ. ಆಗ ಆಟ ನಿಲ್ಲಿಸಿ ಸೀಬೆ ಮರದಲ್ಲಿ ಜೋತ್ತಾಡುತ್ತಿದ್ದ ಸೀಬೆ ಹಣ್ಣುಗಳನ್ನು ತಿನ್ನುತ್ತಿದ್ದೆ.


ಅಷ್ಟೊತ್ತಿಗಾಗಲೇ ನನ್ನ ಪಕ್ಕದ ಮನೆಯ ಮೂರ್ನಾಲ್ಕುಜನ ಅಣ್ಣಂದಿರು ಕುರಿಗಳನ್ನು ಮೇಯಿಸಲು ಬರುತ್ತಿದ್ದರು. ಅವರು ಬಹಳ ಸಂತೋಷದಿಂದ ಇರುವುದನ್ನು ನೋಡಿ ನನಗೆ ತುಂಬಾ ಬೇಸರ ವಾಗುತ್ತಿತ್ತು. ಇವರು ಇಷ್ಟೊಂದು ಖುಷಿಯಾಗಿ ಆವ್ರೆ. ನಾನು ಇವರರೀತಿಯಲ್ಲಿಯೇ ಕುರಿ ಮೇಯಿಸಿಕೊಂಡು ಇದ್ದರೆ ನಾನು ಖುಷಿಯಾಗಿ ಇರುಬಹುದೆಂದು ಅನ್ನಿಸುತ್ತಿತ್ತು.
ಸ್ಕೂಲ್ ಯಾಕೆ ಇದೆ. ಸ್ಕೂಲೇ ಇಲ್ಲದಿದ್ದರೆ ಎಷ್ಟೊಂದು ಚೆನ್ನಾಗಿರುತ್ತದ್ದೆ. ಗೋಲಿ ಹಾಡಬಹುದು, ಕುಂಟೆಬಿಲ್ಲೆ ಆಡಬಹದು, ಎಲ್ಲೆಂದರಲ್ಲಿ ತಿರಗಾಡಬಹದು ನಮಗೆ ಹೇಗೆ ಅನ್ನಿಸುತ್ತೊ ಹಾಗೆ ಇರಬಹುದು.ನಮ್ಮನ್ನು ಯಾರೂ ಹೊಡೆಯುವವರು ಇರುವುದಿಲ್ಲ. ದಿನ ಪೂರ್ತಿ ಚೆನ್ನಾಗಿ ಇರಬಹುದೆಂದು ಅನ್ನಿಸುತ್ತಿತ್ತು. ಮುಂಜಾನೆಯ ಹೊತ್ತು ಮರಗಿಡಗಳ ಎಲೆಗಳ ಮೇಲೆ ಮುತ್ತಿನಂತ್ತಿದ್ದ ಮಂಜಿನ ಹನಿಗಳನ್ನಾಗಲಿ, ಹಲವು ಪಕ್ಷಿಗಳ ಧ್ವನಿಗಳನ್ನಾಗಲ್ಲಿ ಸ್ವಚಂದ ಮನಸ್ಸಿನಿಂದ ಆಸ್ವಾಧಿಸಲು ಆಗುತ್ತಿರಲಿಲ್ಲ.
ಆದನ್ನು ನೊಡುತ್ತಿದ್ದರು, ಕೇಳುತ್ತಿದ್ದರೂ ನನ್ನ ಮನಸ್ಸಿನಲ್ಲಿ ತರಗತಿಯಲ್ಲಿ ಇಂದು ಎದುರಿಸಬೇಕಾದ ಬೈಗಳ, ಅವಮಾನ, ಏಟುಗಳ ಬಗೆಗೆ ಚಿಂತಾಕ್ರಾಂತನಾಗುತ್ತಿದ್ದೆ. ತೋಟದಿಂದ ಹುಲ್ಲನ್ನು ಮನೆಗೆ ತಂದಕೂಡಲೇ, ಅವಸರ ಅವಸರವಾಗಿಯೇ ಸರಿಯಾಗಿ ಹಲ್ಲನ್ನುಉಜ್ಜದೆ ಒಂದು ಚಂಬು ನೀರಿನಿಂದ ಮುಖವನ್ನು ತೊಳೆದುಕೊಳ್ಳುತ್ತಿದ್ದೆ. ಅಷ್ಟೊತ್ತಿಗಾಗಲೇ ಬೀದಿಯಲ್ಲಿ ಸ್ನೇಹಿತರು ಸ್ಕೂಲಿಗೆ ಹೊಗುತ್ತಿದ್ದ ದೃಶ್ಯ ಕಾಣುತಿತ್ತು.ಇದನ್ನು ನೋಡಿದಕೂಡಲೆ ಮನಸ್ಸು ಕುಸಿಯುತ್ತಿತ್ತು. ಊಟವನ್ನು ಅತ್ತಿತ್ತ ನಡೆಯುತ್ತಾ, ನಿಲ್ಲುತ್ತಾ ತಿನ್ನುತ್ತಿದ್ದೆ. ಸಂಜೆ ಶಾಲೆಯಿಂದ ಬಂದು ಮೂಲೆಯಲ್ಲಿಟ್ಟಿದ್ದ ಬ್ಯಾಗನ್ನುತಲೆಗೆ ಸಿಕ್ಕಿಸಿಕೊಂಡು 3 ಕಿ.ಮೀ ನಡೆಯಲು ತಯಾರಾಗುತ್ತಿದ್ದೆನು.

‍ಲೇಖಕರು avadhi

March 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: