ಗೌರಿ ಅದಮ್ಯ ನೋಡಿದ ‘ಶೂದ್ರ ಶಿವ’

ಗೌರಿ ಅದಮ್ಯ

ಶೂದ್ರ ಶಿವ, ಬಹಳ ದಿನಗಳ ನಂತರ ನೋಡಿದ ಅದ್ಭುತ ನಾಟಕ. ಆಧ್ಯಾತ್ಮದ ಮೂಲಕವೆ ಹೆಚ್ಚು ಪರಿಚಿತವಾದ ನಾರಾಯಣ ಗುರುಗಳನ್ನ, ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗುಲನ್ನ ಈ ನಾಟಕ ಅಚ್ಚುಕಟ್ಟಾಗಿ ತೆರದಿಡತ್ತೆ. ಸಿದ್ದಮಾದರಿಯಲ್ಲೆ ನಾವು ನೋಡುವ ಎಷ್ಟೋ ವಿಚಾರಗಳನ್ನ ಈ ನಾಟಕ ಒಂದು ಕ್ಷಣ ಓರೆಗಚ್ಚತ್ತೆ. ದೇವರ ನಾಡು ಎಂದೇ ಖ್ಯಾತವಾದ ಕೇರಳ, ಅಲ್ಲಿನ ಸಮುದಾಯಗಳ ನಡುವಿನ ಘರ್ಷಣೆ, ತಿಕ್ಕಾಟ, ಮತಾಂತರ, ದೇಶದೊಳಗೆ ಹರಡಿರೊ ಜಾತಿ ವ್ಯವಸ್ಥೆ, ಗೊತ್ತಿದ್ದು ಗೊತ್ತಿಲ್ಲದಂತೆ ವರ್ತಿಸೋ ಜನ, ಕೋಮು-ದ್ವೇಷ-ದಳ್ಳುರಿ, ತಾರತಮ್ಯ, ಇಲ್ಲಿ ಲಿಂಗಭೇದಕ್ಕಿಂತ ಪ್ರಬಲವಾಗಿ ಕಾಣುವ ವರ್ಣಭೇದ, ತೆರಿಗೆ, ಹಕ್ಕು-ಹೋರಟ ಒಂದಂತದಲ್ಲಿ ಇಡೀ ವ್ಯವಸ್ಥೆಯ ಸ್ಪಷ್ಟ ನಿಲುವುಗನ್ನಡಿ ಶೂದ್ರ ಶಿವ. ಇಡೀ ನಾಟಕ ವೈರುಧ್ಯಗಳ ಜೊತೆಗೆ ಕರ್ಕೊಂಡೋಗತ್ತೆ, ನಾರಾಯಣಗುರು, ಶಿವ, ಸ್ಚಾಮಿ ವಿವೇಕನಂದ, ಗಾಂಧೀಜಿ, ಧರ್ಮ ಮತ್ತು ಮನುಷ್ಯತ್ವ, ಹೀಗೆ ನಮ್ಮೊಳಗಿನ ತಿಕ್ಕಾಟಗಳೆ ಇಲ್ಲಿ ಮಾತಾಗಿದ್ದಾವೆ.

ಕೆಳಸ್ತರದವರು ಶಾಲೆಗೋದ್ರು ಅನ್ನೋ ಕಾರಣಕ್ಕೆ ಇಡೀ ಶಾಲೆಗೆ ಬೆಂಕಿ ಹಚ್ದಾಗ ನಂಗೆ Birmingham university ಹೊತ್ತಿ ಹುರ್ದ ಘಟನೆ ನೆನಪಾಯ್ತು. ಶಿವ ಎಲ್ಲಾ ಕಡನೆ ಇದಾನೆ ಅಂದಾಗ ಕುವೆಂಪುರವರ ದೇವರ ಕಲ್ಪನೆ ಮುಖ್ಯವಾಗಿ ಜಲಗಾರ ನೆನಪಾಯ್ತು. ಬುದ್ದ, ಯೇಸು, ಪೈಗಂಬರ್ ಹೀಗೆ ಧರ್ಮ ಮತ್ತು ಮತಾಂತರದ ನಿಲುವುಗಳ ಮಧ್ಯೆ ಮನುಷ್ಯ ಮನುಷ್ಯನನ್ನ ಪ್ರೀತಿಸ್ಬೇಕು ಅನ್ನೋ ಮಾನವ ಸಹಜ ಗುಣ ನೆನಪಾಯ್ತು. ವಿದ್ಯೆಯೊಂದೆ ನಮ್ಮನ್ನ ಗಟ್ಟಿಗೊಳಿಸ್ಲಿಕ್ಕೆ ಸಾಧ್ಯ, ವಿದ್ಯೆಯಿಂದನೆ ನಾವು ಮನುಷ್ಯರಾಗೋದು, ಮನುಷ್ಯರನ್ನ ಮನುಷ್ಯರಂತೆ ಕಾಣೋದು.

ಅದ್ಕೆ “ನಹಿ ಜ್ಞಾನೇನ ಸದೃಶ್ಯಂ”. ದೇವರನ್ನ ಹುಡುಕ್ತನೆ ದೇವಾಲಯಗಳನ್ನ ಕಟ್ಟಿ ಎಲ್ಲರಿಗೂ ಪ್ರವೇಶ ಕೊಟ್ಟು ಕೊನೆಗೆ ದೇವರು ನಿಮ್ಮೊಳಗೆ ಇದ್ದಾನೆ ಅಂದಾಗ ವಚನ ಚಳುವಳಿ, ಇಡೀ ಶರಣ ಪರಂಪರೆ , “ನೆಲವೊಂದೆ ಒಲಗೆರಿ ಶಿವಾಲಯಕೆ” ಎಂಬ ಮಾತು ಮತ್ತು ಕಾನೂರು ಹೆಗ್ಗಡತಿಯ ಕೊನೆ ಅಧ್ಯಾಯ ” ಬುದ್ದನೆಡೆಗೆ” ನೆನಪಾಗತ್ತೆ..

ಅದ್ಬುತ ರಂಗಪ್ರಯೋಗವನ್ನ ಕಟ್ಟಿಕೊಟ್ಟ Viddu Uchill , ರುದ್ರ ರಂಗತಂಡ, ಅವರ ಇಡೀ ತಂಡಕ್ಕೆ ಧನ್ಯೋಸ್ಮಿ.. ಈ ನಾಟ್ಕನ ಖಂಡಿತ ನೋಡಿ, ಒಂದು ಹೊಸ ಅನುಭೂತಿ ಖಂಡಿತ ಆಗತ್ತೆ..

‍ಲೇಖಕರು avadhi

February 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: